ಕಾರವಾರ: ಡ್ಯಾನ್ಸ್‌ ಮೂಲಕ ಸುಸಜ್ಜಿತ ಆಸ್ಪತ್ರೆಗೆ ಬೇಡಿಕೆ

Jan 19, 2023, 4:12 PM IST

ಉತ್ತರ ಕನ್ನಡ (ಜ.19): ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಗಳಿಲ್ಲದ ಕಾರಣ ಗಾಯಾಳುಗಳು ರಸ್ತೆಯಲ್ಲೇ ಜೀವ ಚೆಲ್ಲುತ್ತಿದ್ದು, ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಬೇಕೆಂಬ ಕೂಗು ದಶಕಗಳಿಂದಲೂ ಇದೆ. ಎಷ್ಟೇ ಹೋರಾಟ, ಪ್ರತಿಭಟನೆ ನಡೆಸಿದರೂ ಈ ಬೇಡಿಕೆ ಮಾತ್ರ ಈಡೇರುವ ಲಕ್ಷಣ ಕಾಣುತ್ತಿಲ್ಲ. ಆದರೆ, ಉತ್ತರಕನ್ನಡಕ್ಕೆ ಸುಸಜ್ಜಿತ ಆಸ್ಪತ್ರೆಯ ಅಗತ್ಯತೆಯೇನು ಎಂಬುದನ್ನು ನೃತ್ಯ ತಂಡವೊಂದು ನೃತ್ಯ ಸಂಯೋಜಿಸಿ ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರವಾಗಿದೆ.

ಗಾಟ್‌ ಟ್ಯಾಲೆಂಟ್‌ ಸ್ಪರ್ಧೆಯಲ್ಲಿ ನೃತ್ಯ: ಹೌದು, ಗೋಕರ್ಣ ಭದ್ರಕಾಳಿಯಲ್ಲಿ ಎಸ್ಎಸ್ಎಲ್ ಸಿ ಓದುತ್ತಿರುವ ಅಂಕಿತಾ ಹೊಸ್ಕಟ್ಟಾ ಎನ್ನುವಾಕೆ ಉತ್ತರಕನ್ನಡಕ್ಕೆ ಸುಸಜ್ಜಿತ ಆಸ್ಪತ್ರೆಯ ಅಗತ್ಯತೆಯ ಕುರಿತು ನೃತ್ಯ ಪ್ರದರ್ಶಿಸಿ ಎಲ್ಲರ ಮನ ಗೆದ್ದಿದ್ದಾಳೆ. ವಿಕಾಸ್ ಹಾಗೂ ಪ್ರಮೋದ್ ಬಡಿಗೇರ್ ಸಂಯೋಜನೆಯ ಈ ನೃತ್ಯವನ್ನು ಖಾಸಗಿ ವಾಹಿನಿಯೊಂದು ಆಯೋಜಿಸಿದ್ದ ಉತ್ತರಕನ್ನಡ ಗಾಟ್ ಟ್ಯಾಲೆಂಟ್ ಸ್ಪರ್ಧೆಯಲ್ಲಿ ಪ್ರದರ್ಶಿಸಲಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಡ್ಯಾನ್ಸ್ ಮೂಲಕವೇ ಆಸ್ಪತ್ರೆ ಬೇಡಿಕೆಯನ್ನ ವಿಶೇಷವಾಗಿ ಮಂಡಿಸಿರುವ ನೃತ್ಯ ತಂಡಕ್ಕೆ ಉತ್ತರಕನ್ನಡದ ಜನತೆಗೆ ಶಬ್ಬಾಸ್ ಎಂದಿದ್ದು, ಸರ್ಕಾರ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಇನ್ನಾದರೂ ಮನಸ್ಸು ಮಾಡಿ ಯೋಜನೆಯನ್ನು ಅನುಷ್ಠಾನಗೊಳಿಸುವ ಕಾರ್ಯ ಮಾಡಬೇಕಿದೆ.

ಇದನ್ನೂ ಓದಿ: Uttar Kannada: ಡ್ಯಾನ್ಸ್ ಮೂಲಕ ಸುಸಜ್ಜಿತ ಆಸ್ಪತ್ರೆಗೆ ಬೇಡಿಕೆ: ಯುವತಿಗೆ ಮೆಚ್ಚುಗೆ ಮಹಾಪೂರ