19 ವರ್ಷದ ಹಿಂದೆ ರಿಲೀಸ್ ಆಗಿದ್ದ ಈ ಸಿನಿಮಾ ಅನುಭವಿಸಿದ್ದು 1200 ಕೋಟಿ ನಷ್ಟ; ದಿವಾಳಿಯಾಗಿ ಬೀದಿಗೆ ಬಂದ ನಿರ್ಮಾಪಕ

By Mahmad Rafik  |  First Published Nov 2, 2024, 5:12 PM IST

2005ರಲ್ಲಿ ಬಿಡುಗಡೆಯಾದ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭಾರೀ ನಷ್ಟ ಅನುಭವಿಸಿತು. ಚಿತ್ರದ ನಿರ್ಮಾಪಕರು ಸುಮಾರು 1200 ಕೋಟಿ ರೂಪಾಯಿ ನಷ್ಟ ಅನುಭವಿಸಿದರು. ದೊಡ್ಡ ತಾರಾಗಣದ ಹೊರತಾಗಿಯೂ, ಚಿತ್ರ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಯಿತು.


ಮುಂಬೈ: ವಿಶ್ವದ ಬಿಗ್ಗೆಸ್ಟ್ ಹಿಟ್ ಸಿನಿಮಾಗಳ ಪಟ್ಟಿಯನ್ನು ತಮ್ಮ ಚಿತ್ರ ಸೇರಬೇಕೆಂದು ನಿರ್ದೇಶಕರು ಬೆವರು ಹರಿಸುತ್ತಿರುತ್ತಾರೆ. ನಿರ್ಮಾಪಕರು ಹಾಕಿದ ಬಂಡವಾಳಕ್ಕೆ ಒಳ್ಳೆಯ ಲಾಭ ಸಿಗಲಿದೆ ಎಂದು ದೇವರಲ್ಲಿ ಪ್ರಾರ್ಥಿಸುತ್ತಿರುತ್ತಾರೆ. ಸಿನಿಮಾದ ಅದ್ಧೂರಿಯಾಗಿ ಮೂಡಿಬರಲಿ ಅನ್ನೋ ಕಾರಣಕ್ಕಾಗಿ ಇಂದು ನಿರ್ಮಾಪಕರು ಹಣದ ಸುರಿಮಳೆಯನ್ನು ಸುರಿಸುತ್ತಾರೆ. ಬಿಡುಗಡೆಯಾದ ಬಳಿಕ ಒಮ್ಮೆ ನೆಗಟಿವ್ ಟಾಕ್ ಶುರುವಾದ್ರೆ ಹಾಕಿರುವ ಬಂಡವಾಳವೂ ವಾಪಸ್ ಜೇಬು ಸೇರುವುದು ಅನುಮಾನ. 19 ವರ್ಷದ ಹಿಂದೆ ಬಿಡುಗಡೆಯಾಗಿದ್ದ ಈ ಚಿತ್ರ ಪ್ರೇಕ್ಷಕರನ್ನು ತನ್ನತ್ತ ಸೆಳೆಯಲು ಸಂಪೂರ್ಣವಾಗಿ ವಿಫಲವಾಗಿತ್ತು. ಸಿನಿಮಾ ಸೋತಿದ್ದರಿಂದ ನಿರ್ಮಾಪಕರಿಗೆ ನಷ್ಟವಾಗಿದ್ದು ಬರೋಬ್ಬರಿ 1,200 ಕೋಟಿ ರೂಪಾಯಿ. ಹಾಗಾದ್ರೆ ಈ ಸಿನಿಮಾ ಯಾವುದು ಅಂತ ನೋಡೋಣ ಬನ್ನಿ. 

2005ರಲ್ಲಿ ಬಿಡುಗಡೆಯಾಗಿದ್ದ 'ಸಹಾರಾ' ಸಿನಿಮಾ ನಿರ್ಮಾಪಕರನ್ನು ಸಂಪೂರ್ಣವಾಗಿ ಮುಳುಗಿಸಿತ್ತು ಅಂದ್ರೆ ತಪ್ಪಾಗಲಾರದು. ಜಗತ್ತಿನ ಅತಿದೊಡ್ಡ ಫ್ಲಾಪ್‌ ಸಿನಿಮಾಗಳ ಪಟ್ಟಿಯಲ್ಲಿ 'ಸಹಾರಾ' ಸೇರ್ಪಡೆಯಾಗಿದೆ. ದೊಡ್ಡ ದೊಡ್ಡ ಸ್ಟಾರ್‌ ಕಲಾವಿದರ ನಟಿಸಿದ್ದರೂ ಬಾಕ್ಸ್‌ ಆಫಿಸ್‌ನಲ್ಲಿ ಸಿನಿಮಾ ಕಮಾಲ್ ಮಾಡುವಲ್ಲಿ ಸಂಪೂರ್ಣವಾಗಿ ಸೋತಿತ್ತು. ಈ ಚಿತ್ರಕ್ಕಾಗಿ ಹಾಕಿದ ಹಣವೆಲ್ಲಾ ಮುಳುಗಿ ಹೋಗಿತ್ತು. ಸಹಾರಾ ಸೋತಿದ್ದರಿಂದ ಸಿನಿಮಾ ನಿರ್ಮಾಪಕರಿಗೆ  $144,857,030 (ಅಂದಾಜು 12,000 ಕೋಟಿ ರೂಪಾಯಿ) ನಷ್ಟವಾಗಿದೆ ಎಂದು ವರದಿಯಾಗಿದೆ. 

Latest Videos

undefined

ಇದು 2005ರ ಬಹುನಿರೀಕ್ಷಿತ ಚಿತ್ರವಾಗಿ ಸಹಾರಾ ಗುರುತಿಸಿಕೊಂಡಿತ್ತು ಮತ್ತು ಬಿಡುಗಡೆಗೂ ಮುನ್ನದೇ ದೊಡ್ಡಮಟ್ಟದ ಹೈಪ್ ಕ್ರಿಯೇಟ್ ಮಾಡಿದ್ದರಿಂದ ಸಿನಿಮಾದ ಗೆಲುವು ಫಿಕ್ಸ್ ಎಂಬ ಮಾತುಗಳು ಕೇಳಿ ಬಂದಿದ್ದವು. ಆದ್ರೆ ಚಿತ್ರ ಬಿಡುಗಡೆ ನಂತರ ಎಲ್ಲವೂ ಉಲ್ಟಾ ಆಗಿತ್ತು. ಬಾಕ್ಸ್‌ ಆಫಿಸ್‌ನಿಂದ ಹಣ ಬಾಚಿಕೊಳ್ಳುವ ನಿರ್ಮಾಪಕರಿಗೆ ದೊಡ್ಡ ಶಾಕ್ ಎದುರಾಗಿತ್ತು. 

ಇದನ್ನೂ ಓದಿ:20 ಕೋಟಿ ಗಳಿಸಲು ಸಹ ವಿಫಲವಾದ 200 ಕೋಟಿಯ ಚಿತ್ರ- ದೊಡ್ಡ ದೊಡ್ಡ ಸ್ಟಾರ್‌ಗಳಿದ್ರೂ ಹೀನಾಯ ಸೋಲು!

ಐಎಂಡಿಬಿಯ ಫ್ಲಾಪ್‌ ಸಿನಿಮಾಗಳ ಪಟ್ಟಿಯಲ್ಲಿ ಸಹಾರಾಗೆ 4ನೇ ಸ್ಥಾನವನ್ನು ನೀಡಲಾಗಿದೆ. ಟೈಮ್ ಮ್ಯಾಗ್‌ಜೀನ್‌ನಲ್ಲಿಯೂ ಸಿನಿಮಾದ ಸೋಲಿನ ಬಗ್ಗೆ ಲೇಖನಗಳು ಪ್ರಕಟವಾಗಿದ್ದು, ಫ್ಲಾಪ್ ರೆಕಾರ್ಡ್ ಎಂದು ಉಲ್ಲೇಖಿಸಲಾಗಿತ್ತು. ವರದಿಗಳ ಪ್ರಕಾರ, ಸಹಾರಾ ಒಟ್ಟು 240 ಮಿಲಿಯನ್ ಡಾಲರ್ ಬಜೆಟ್‌ನಲ್ಲಿ ನಿರ್ಮಾಣವಾಗಿ, 120 ಮಿಲಿಯನ್ ಡಾಲರ್ ಕಲೆಕ್ಷನ್ ಮಾಡಿತ್ತು.

ಚಿತ್ರದ ಕಥೆ ಏನು?
ಸಹಾರಾ ಅಮೆರಿಕಾದ ಸಾಹಸಿಮಯ ಕಥೆಯನ್ನು ಒಳಗೊಂಡಿದ್ದು, ಬ್ರೆಕ್ ಇಸ್ನೆರ್ ಕಲ್ಪನೆಯಲ್ಲಿ ಸಿನಿಮಾ ರೆಡಿಯಾಗಿತ್ತು. 1992ರಲ್ಲಿ ಇದೇ ಹೆಸರಿನಲ್ಲಿ ಕಾದಂಬರಿಯೊಂದು ಪ್ರಕಟವಾಗಿತ್ತು. ಮ್ಯಾಥ್ಯೂ ಮೆಕನೌಘೆ, ಸ್ಟೀವ್ ಜಾನ್ ಮತ್ತು ಪೆನೆಲೋಪ್ ಕ್ರೂಜ್ 'ಸಹಾರಾ' ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿದ್ದರು. ಸಹಾರಾ ಮರುಭೂಮಿಯಲ್ಲಿ ಕಳೆದುಹೋದ ಕಬ್ಬಿಣದ ಹೊದಿಕೆಯ ಯುದ್ಧನೌಕೆಯನ್ನು ಕಂಡುಹಿಡಿಯುವುದು ಈ ಚಿತ್ರದ ಒನ್‌ಲೈನ್ ಕಥೆ. ಉತ್ತರ ಆಫ್ರಿಕಾದ ಸಹಾರಾ ಮರುಭೂಮಿ ವಿಶ್ವದ ಅತಿದೊಡ್ಡ ಮರುಭೂಮಿಯಾಗಿದೆ. 

ಇದನ್ನೂ ಓದಿ: ಜಗತ್ತಿನ ಅತಿದೊಡ್ಡ ಫ್ಲಾಪ್ ಸಿನಿಮಾ, ಮುಸ್ಲಿಂ ಹೀರೋ ಎಂಬ ಕಾರಣಕ್ಕೆ ಥಿಯೇಟರ್‌ಗೆ ಬರಲಿಲ್ಲ ಜನರು...!

click me!