ಈ ಕಾರಣಕ್ಕಾಗಿ ನಟ ಸೂರ್ಯನಂತ ವ್ಯಕ್ತಿಯನ್ನು ಗಂಡನಾಗಿ ಪಡೆದ ಪತ್ನಿ ಅದೃಷ್ಟವಂತೆ ಅಂತಿದ್ದಾರೆ ಜನ!

Published : Nov 02, 2024, 05:36 PM ISTUpdated : Nov 04, 2024, 06:17 AM IST

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ನಟ ಸೂರ್ಯ ಅವರನ್ನು ಪತಿಯಾಗಿ ಪಡೆದಿರೋ ನಟಿ ಜ್ಯೋತಿಕ ಅದೃಷ್ಟವಂತೆಯಂತೆ. ಜನ ಹೀಗೆ ಹೇಳ್ತಿರೋದಕ್ಕೆ ಕಾರಣವೂ ಇದೆ.   

PREV
17
ಈ ಕಾರಣಕ್ಕಾಗಿ ನಟ ಸೂರ್ಯನಂತ ವ್ಯಕ್ತಿಯನ್ನು ಗಂಡನಾಗಿ ಪಡೆದ ಪತ್ನಿ ಅದೃಷ್ಟವಂತೆ ಅಂತಿದ್ದಾರೆ ಜನ!

ತಮಿಳು ಚಿತ್ರರಂಗದಲ್ಲಿ ತನ್ನ ವಿಭಿನ್ನ ಚಿತ್ರಗಳ ಮೂಲಕ ಸೂಪರ್ ಸ್ಟಾರ್ ಆಗಿ ಮಿಂಚುತ್ತಿರುವ ನಟ ಸೂರ್ಯ (Actor Suriya). ಇವರಿಗೆ ಕೇವಲ ತಮಿಳುನಾಡಿನಲ್ಲಿ ಮಾತ್ರವಲ್ಲ, ದೇಶದೆಲ್ಲೆಡೆ ಅಪಾರ ಅಭಿಮಾನಿಗಳು ಇದ್ದಾರೆ. ಇವರು ತಮ್ಮ ಸಿನಿಮಾದಿಂದ ಮಾತ್ರವಲ್ಲ ತಮ್ಮ ವಯಕ್ತಿಕ ಜೀವನದಿಂದಲೂ ತುಂಬಾನೆ ಫೇಮಸ್ ಆಗಿದ್ದಾರೆ. 

27

ಸುರರೈ ಪೊಟ್ರು, ಭೀಮಾದಂತಹ ಅದ್ಭುತ ಕಥೆಗಳುಳ್ಳ ಸಿನಿಮಾಗಳಲ್ಲಿ ನಟಿಸುವ ಮೂಲಕ ಸೈ ಜನಮನ ಗೆದ್ದ ನಟ ಸೂರ್ಯ, ಸದ್ಯ ತಮ್ಮ ಕಂಗುವಾ ಸಿನಿಮಾ ಮೂಲಕ ಸದ್ದು ಮಾಡ್ತಾ ಇದ್ದಾರೆ. ಸದ್ಯ ಸಿನಿಮಾ ಪ್ರೊಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ ಸೂರ್ಯ. ಸಿನಿಮಾ ಬಿಡುಗಡೆಗಾಗಿ ಜನ ಕಾಯ್ತ ಇದ್ದಾರೆ. 
 

37
Suriya

Suriyaಈ ಸೂಪರ್ ಸ್ಟಾರ್ ನಟ ಸೂರ್ಯ ಅವರನ್ನ ಜೆಂಟಲ್ ಮ್ಯಾನ್ (gentleman) ಎಂದು ಹೇಳುವ ಜನರು, ಇಂತಹ ಅದ್ಭುತ ವ್ಯಕ್ತಿತ್ವದ ವ್ಯಕ್ತಿಯನ್ನು ಪತಿಯಾಗಿ ಪಡೆದಿರುವ ಪತ್ನಿ ಅಂದರೆ ನಟಿ ಜ್ಯೋತಿಕಾ ಅದೃಷ್ಟವಂತೆಯಂತೆ ಎಂದು ಹೇಳ್ತಿದ್ದಾರೆ. ಇದಕ್ಕೂ ಕಾರಣ ಇದೆ. ಅದು ಏನು ಅನ್ನೋದನ್ನ ನೋಡೋಣ. 

47

ಇತ್ತೀಚಿನ ದಿನಗಳಲ್ಲಿ ಡಿವೋರ್ಸ್ ಹೆಚ್ಚುತ್ತಿದ್ದು, ಅದರಲ್ಲೂ ಸಿನಿಮಾ ತಾರೆಯರ ಬದುಕಲ್ಲಿ ಇದು ಸಾಮಾನ್ಯವಾಗಿದೆ. ಅಂತದ್ದರಲ್ಲಿ ಸೂರ್ಯ ಇವತ್ತಿಗೂ ಮದುವೆಯಾಗಿ 18 ವರ್ಷ ಕಳೆದ ಬಳಿಕವೂ ಈ ಜೋಡಿ ಮದುವೆಯಾದ ಜೋಡಿಗಳಿಗೆ ಪ್ರೇರಣೆ ನೀಡುವಂತಹ ಜೋಡಿಯಾಗಿದೆ. ಇವರಿಬ್ಬರ ಜೋಡಿ ನೋಡಿ ಜನ ಮೇಡ್ ಫಾರ್ ಈಚ್ ಅದರ್ ಅಂತಾರೆ. 

57

ನಟ ಸೂರ್ಯ ಅವರು ಇತ್ತೀಚೆಗೆ ಪತ್ನಿ ಜ್ಯೋತಿಕಾ (Jyothika) ಹಾಗೂ ಮಕ್ಕಳೊಂದಿಗೆ ಮುಂಬೈಗೆ ಶಿಫ್ಟ್ ಆದರು. ಇದು ಚಿತ್ರರಂಗಕ್ಕೆ ಶಾಕ್ ನೀಡಿದ್ದು ಆದರೆ ಅದಕ್ಕೂ ಕಾರಣ ಇದೆ. ಅದೇನೆಂದರೆ ಕಳೆದ ಹಲವು ವರ್ಷಗಳಿಂದ ಸೂರ್ಯ ತಮ್ಮ ಪತ್ನಿಯೊಂದಿಗೆ ಚೆನ್ನೈ ನಲ್ಲಿ ವಾಸವಿದ್ದರು. ಆದರೆ ತಮ್ಮ ತಂದೆ-ತಾಯಿಯನ್ನು ನೋಡಿಕೊಳ್ಳುವ ಕಾರಣದಿಂದಾಗಿ ನಟಿ ಜ್ಯೋತಿಕಾ ಕಳೆದ ಕೆಲವು ಸಮಯದಿಂದ ಮುಂಬೈನಲ್ಲಿ ನೆಲೆಸಿದ್ದಾರೆ. 
 

67

ಇಲ್ಲಿವರೆಗೆ ಪತ್ನಿ ತನಗಾಗಿ ಚೆನ್ನೈನಲ್ಲಿ ಉಳಿದಿಕೊಂಡಿದ್ದರು, ಇದೀಗ ನನ್ನ ಜವಾಬ್ಧಾರಿ, ಎಂದು ಪತ್ನಿಗಾಗಿ ನಟ ಸೂರ್ಯ ಮುಂಬೈಗೆ ಶಿಫ್ಟ್ ಆಗಿದ್ದಾರೆ. ಇವರ ಗುಣ ಜನರಿಗೆ ಇಷ್ಟವಾಗಿದ್ದು, ಈ ಸುದ್ದಿ ಬಾರಿ ವೈರಲ್ ಆಗಿತ್ತು. ಇದೀಗ ಅವರು ಅಂತದ್ದೇ ಮತ್ತೊಂದು ಕಾರಣಕ್ಕೆ ಸುದ್ದಿಯಾಗಿದ್ದಾರೆ. ಅದನ್ನ ನೋಡಿಯೇ ಜನ ಇವರಂಥ ಗಂಡನನ್ನು ಪಡೆದ ಹೆಂಡತಿ ಅದೃಷ್ಟವಂತೆ ಎನ್ನುತ್ತಿದ್ದಾರೆ. 
 

77

ಹೌದು ಕಂಗುವಾ ಸಿನಿಮಾದ ಪ್ರೊಮೋಶನ್ ಸಂದರ್ಭದಲ್ಲಿ ನಟಿ ದಿಶಾ ಪಟಾಣಿಯಿಂದ (Disha Pathani) ಅಂತರ ಕಾಯ್ದುಕೊಂಡಿದ್ದ ಫೋಟೊ ವೈರಲ್ ಆಗಿದ್ದು, ಸೂರ್ಯ ಸಿನಿಮಾದಲ್ಲಿ ಮಾತ್ರ ಹೆಣ್ಣುಮಕ್ಕಳನ್ನು ಮುಟ್ಟುತ್ತಾರೆ. ಆದರೆ ಹೊರಗಡೆ ಯಾವತ್ತೂ ನಟಿಯರನ್ನ ಟಚ್ ಮಾಡೋದು ಇಲ್ಲ. ಇದು ಅವರು ಎಂತಹ ಜೆಂಟಲ್ ಮ್ಯಾನ್ ಅನ್ನೋದನ್ನು ತೋರಿಸುತ್ತದೆ ಎಂದಿದ್ದಾರೆ. 
 

Read more Photos on
click me!

Recommended Stories