ಹಾವಿನಂತೆ ನೀರಲ್ಲಿ ಚಲಿಸುವ ಬೇರಿದು: ವಿಜ್ಞಾನಕ್ಕೇ ಸವಾಲೆಸೆಯುವ ಗರುಡ ಸಂಜೀವಿನಿಯ ಕುತೂಹಲ ಇಲ್ಲಿದೆ...

By Suchethana D  |  First Published Nov 2, 2024, 4:49 PM IST

ಹಾವಿನಂತೆ ನೀರಲ್ಲಿ ಚಲಿಸುವ ಬೇರು ಗರುಡ ಸಂಜೀವಿನಿ. ನೀರಿಗೆ ವಿರುದ್ಧ ದಿಕ್ಕಿಗೆ ಚಲಿಸುವ ಈ ಬೇರು ವಿಜ್ಞಾನಕ್ಕೇ ಸವಾಲೆಸೆಯುವ ಕುತೂಹಲ ಇಲ್ಲಿದೆ...
 


ಪ್ರಕೃತಿಯೇ ವಿಸ್ಮಯ. ಯಾರ ಊಹೆಗೂ ನಿಲುಕದ ಅದೆಷ್ಟೋ ಘಟನೆಗಳು ದಿನನಿತ್ಯ ಈ ಪ್ರಕೃತಿಯಲ್ಲಿ ಆಗುತ್ತಲೇ ಇರುತ್ತವೆ. ವಿಜ್ಞಾನಕ್ಕೇ ಸವಾಲೆಸೆಯುವ, ಯಾವ ವಿಜ್ಞಾನಿಗಳಿಂದಲೂ ಕಂಡು ಹಿಡಿಯಲು ಸಾಧ್ಯವಾಗದ ಅದೆಷ್ಟೋ ವಿಚಿತ್ರಗಳಿವೆ. ಮನುಷ್ಯ ತಾನು ಎಷ್ಟೇ ಬುದ್ಧಿವಂತ ಎಂದುಕೊಂಡರೂ, ಯುಗಗಳು ಎಷ್ಟೇ ಬದಲಾದರೂ ಪ್ರಕೃತಿಯ ಮುಂದೆ ಎಲ್ಲವೂ ಗೌಣವೇ. ಇದೀಗ ಇಂಥದ್ದೇ ಒಂದು ವಿಚಿತ್ರ ಗರುಡ ಸಂಜೀವಿನಿ ಎನ್ನುವ ಬೇರು. ಸಂಜೀವಿನಿಯ ಬಗ್ಗೆ ರಾಮಾಯಣದಲ್ಲಿ ಉಲ್ಲೇಖವಿರುವುದು ತಿಳಿದೇ ಇದೆ. ಯುದ್ಧದ ಸಮಯದಲ್ಲಿ ಲಕ್ಷ್ಮಣ ಮೂರ್ಛೆ ಹೋದಾಗ, ರಾಮ ಕಂಗಾಲಾಗುತ್ತಾನೆ. ಆಗ  ಅಲ್ಲಿರುವವರಲ್ಲಿ ಯಾರೋ ಹಿಮಾಲಯದ ದ್ರೋಣಗಿರಿಯಲ್ಲಿ ಸಂಜೀವಿನಿ ಪರ್ವತವಿದೆ. ಆ ಪರ್ವತದಲ್ಲಿ ಲಕ್ಷ್ಮಣನ ಪ್ರಜ್ಞೆ ಮರಳಿ ಬರುವ ಗಿಡಮೂಲಿಕೆ ಇದೆ, ಆದರೆ ಸೂರ್ಯಸ್ತದ ಮೊದಲು ಅದರಿಂದ ಚಿಕಿತ್ಸೆ ಕೊಡಬೇಕು ಎನ್ನುತ್ತಾರೆ. ಆ ಗಿಡಮೂಲಿಕೆಯನ್ನು ತರಲು ಹನುಮಂತ ಹೋಗುತ್ತಾನೆ. ಸಂಜೀವಿನಿ ಗಿಡ ಯಾವುದು ಎಂದು ತಿಳಿಯದಾದಾಗ ಇಡೀ ಪರ್ವತವನ್ನೇ ಹೊತ್ತು ತರುತ್ತಾನೆ ಎನ್ನುವ ಮಾತಿದೆ. ಇದರ ಬಗ್ಗೆ ವಿಭಿನ್ನ ರೀತಿಯ ನಿಲುವುಗಳು ಇದ್ದರೂ, ಇಲ್ಲಿ ಹೇಳುತ್ತಿರುವ ಗರುಡ ಸಂಜೀವಿನಿಯ ಬೇರು ಮಾತ್ರ  ಕುತೂಹಲವಾಗಿದೆ!

ಹಿಮಾಲಯ ಪರ್ವತ ಶ್ರೇಣಿಯ ತಪ್ಪಲಿನಲ್ಲಿರುವ ದಟ್ಟ ಅರಣ್ಯಗಳಲ್ಲಿ ಕಂಡುಬರುವ ಅಪರೂಪದ ಗಿಡಮೂಲಿಕೆ ಈ ಗರುಡ ಸಂಜೀವಿನಿ ಬೇರು. ಇದು ಹಾವಿನಂತೆ ನೀರಿನಲ್ಲಿ ಚಲಿಸಬಲ್ಲುದು. ಆದರೆ ಈ ಬೇರಿನ ವಿಶೇಷತೆ ಎಂದರೆ, ಇದು ಚಲಿಸುವುದು ನೀರಿನ ವಿರುದ್ಧ ದಿಕ್ಕಿದೆ.  ಅಪಾರ ಪ್ರಮಾಣದ ಔಷಧೀಯ ಗುಣಗಳಿಂದ ತುಂಬಿರುವ ಈ ಬೇರನ್ನು ಸಾಮಾನ್ಯವಾಗಿ  ಹಾವು ಕಡಿತಗಳು ಮತ್ತು ಇತರ ಗಂಭೀರ ಒಳಹರಿವುಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ ಎಂದು ತಿಳಿದುಬಂದಿದೆ. ಈ ಬೇರಿನ ವಿಶೇಷಗಳು ಒಂದಲ್ಲ, ಎರಡಲ್ಲ. ಈ ಬೇರಿನ ಬಗ್ಗೆ ಇದಾಗಲೇ ಹಲವಾರು ರೀತಿಯ ಸಂಶೋಧನೆಗಳು ನಡೆದಿವೆ. ಆದರೆ ನೀರಿಗೆ ವಿರುದ್ಧವಾಗಿ ಚಲಿಸುವ ಅದೂ ಹಾವಿನ ರೀತಿಯಲ್ಲಿಯೇ ಹರಿಯುವ ಇಂಥ ಬೇರು ಇಲ್ಲವೇ ಇಲ್ಲ ಎಂದು ವಾದ ಮಾಡಿದವರು ಅದೆಷ್ಟೋ ಮಂದಿ. ಆದರೆ ಸೋಷಿಯಲ್​ ಮೀಡಿಯಾಗಳ ಪ್ರಭಾವದಿಂದ  ಎಲ್ಲವೂ ಸಾಬೀತಾಗಿದೆ.

Latest Videos

undefined

ಬಹಳ ದಿನ ಹಲ್ಲುಜ್ಜದಿದ್ದರೆ ಜೀವಕ್ಕೇ ಅಪಾಯ! ತಜ್ಞ ವೈದ್ಯರು ಹೇಳುವುದೇನು? ಇಲ್ಲಿದೆ ಎಚ್ಚರಿಕೆ

ಅಂದಹಾಗೆ, ಗರುಡ ಸಂಜೀವನಿ ನೋಡಲು ಕೂಡ ಹಾವಿನ ಆಕಾರದಲ್ಲಿಯೇ ಇದೆ. ನೀರಿನಲ್ಲಿ ಹರಿಯುವಾಗ ಥೇಟ್​ ಹಾವು ಹೋದಂತೆಯೇ ಕಾಣಿಸುತ್ತದೆ. ನೀರು ತುಂಬಿದ ಪಾತ್ರೆಯಲ್ಲಿ ಈ ಬೇರನ್ನು  ಇಟ್ಟುಕೊಂಡು ಮೇಲಿನಿಂದ ಪ್ರತ್ಯೇಕವಾಗಿ ನೀರನ್ನು ಸುರಿದರೆ, ಅದು ನೀರು ಬೀಳುವ ವಿರುದ್ಧ ದಿಕ್ಕಿಗೆ ಅಂದರೆ ಮೇಲಕ್ಕೆ ಏರಲು ಪ್ರಾರಂಭಿಸುವುದನ್ನು ವಿಡಿಯೋಗಳಲ್ಲಿ ನೋಡಬಹುದು.  ಇದು ಟೊಳ್ಳಾಗಿರುವ ಕಾರಣ, ಹಗುರವಾಗಿದೆ. ಇದರಿಂದಾಗಿ  ನೀರಿನಲ್ಲಿ ಮುಳುಗುವುದಿಲ್ಲ. ಇದರ ಬಗ್ಗೆ ಅಪಾರ ಪ್ರಮಾಣದ ಸಂಶೋಧನೆಗಳು ನಡೆದಿವೆ. ಇದು ನೀರಿಗೆ ವಿರುದ್ಧವಾಗಿ ಹರಿಯುವ ಕುರಿತು ಸಂಶೋಧನರು ಐಸಾಕ್​ ನ್ಯೂಟನ್​ನ  ಮೂರನೇ ನಿಯಮವನ್ನು ಅಳವಡಿಸುತ್ತಾರೆ.

ನ್ಯೂಟನ್ನನ ಮೂರನೇ ನಿಯಮದ ಪ್ರಕಾರ, ಕ್ರಿಯೆ ಮತ್ತು ಪ್ರತಿಕ್ರಿಯೆಗಳು ಪರಸ್ಪರ ಸಮ ಮತ್ತು ವಿರುದ್ಧವಾಗಿರುತ್ತವೆ.  ಅದೇ ನಟ್ ಮತ್ತು ಬೋಲ್ಟ್ ಪರಿಕಲ್ಪನೆ. ಈ ನಿಯಮದ ಪ್ರಕಾರ,  ಕ್ರಿಯೆ ಮತ್ತು ಪ್ರತಿಕ್ರಿಯೆಗಳು ಬೇರೆ ಬೇರೆ ವಸ್ತುಗಳ ಮೇಲೆ ಪ್ರಯೋಗವಾಗುತ್ತವೆ. ಒಂದು ವಸ್ತುವು ಮತ್ತೊಂದರ ಮೇಲೆ ಬಲ ಪ್ರಯೋಗಿಸಿದರೆ ತಕ್ಷಣವೇ ಮತ್ತೊಂದು ವಸ್ತುವು ಪ್ರತಿಕ್ರಿಯೆಯಾಗಿ ಮೊದಲನೇ ವಸ್ತುವಿನ ಮೇಲೆ ಅಷ್ಟೇ ಪ್ರಮಾಣದ ಬಲವನ್ನು ಪ್ರಯೋಗಿಸುತ್ತದೆ. ಈ ಎರಡೂ ಬಲಗಳು ಸಮವಾಗಿದ್ದರೂ ಪರಸ್ಪರ ವಿರುದ್ಧ ದಿಕ್ಕಿನಲ್ಲಿರುತ್ತವೆ. ಅದೇ ರೀತಿ ಗರುಡ ಸಂಜೀವಿನಿ ಕೂಡ ಕೆಲಸ ಮಾಡುತ್ತದೆ ಎಂದು ಸಾಬೀತಾಗಿದೆ.  ನೀರಿನ ಅಲೆಗಳು ಕೆಳಗಿನಿಂದ ಮರವನ್ನು ಹೊಡೆದಾಗ ಈ ಬೇರು ತೇಲಲು ಸಹಾಯ ಮಾಡುತ್ತದೆ. ಅಲೆಗಳ ಮೂಲಕ ಬೇರಿಗೆ ಬಲವನ್ನು ಹಾಕಿದಾಗ , ಅದರಲ್ಲಿರುವ ಸುರುಳಿ ಆಕಾರದ ಕಾರಣದಿಂದಾಗಿ  ವಿರುದ್ಧ ಬಲವು ಪ್ರಯೋಗವಾಗುತ್ತದೆ. ಈ ಹಿನ್ನೆಲೆಯಲ್ಲಿ  ನೀರಿನ ದಿಕ್ಕಿಗೆ ವಿರುದ್ಧವಾಗಿ ಹರಿಯುತ್ತದೆ ಎಂದು ಹೇಳಲಾಗುತ್ತದೆ. 

ಆ್ಯಂಕರ್​ ಅಪರ್ಣಾ ಸಾವು, ಶ್ವಾಸಕೋಶದ ಕ್ಯಾನ್ಸರ್ ಭೀತಿ, ಏನು ಹೇಳುತ್ತೆ ಸ್ಟಡೀಸ್?  

click me!