ರೀಲ್ಸ್‌ ರಾಣಿ ವರ್ಷ ಕಾವೇರಿ ತಂದೆ ಆಸ್ಪತ್ರೆಗೆ ದಾಖಲು

First Published | Nov 2, 2024, 4:56 PM IST

ಫಾಲೋವರ್ಸ್‌ಗೆ ವಿಶ್ ಮಾಡದೇ ಇರಲು ಕಾರಣ ತಿಳಿಸಿದ ವರ್ಷ ಕಾವೇರಿ. ಕಾಮೆಂಟ್ ಪೂರ್ತಿ ಧೈರ್ಯ ಹೇಳಿದ ನೆಟ್ಟಿಗರು.....

ಕನ್ನಡ ಸೋಷಿಯಲ್ ಮೀಡಿಯಾ ಸ್ಟಾರ್, ರೀಲ್ಸ್ ರಾಣಿ ವರ್ಷ ಕಾವೇರಿ ತಂದೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ವರ್ಷ ಪೋಸ್ಟ್ ಹಾಕಿದ್ದಾರೆ.

 'ನೀವೆಲ್ಲರೂ ಸದಾ ತೋರಿಸುತ್ತಿರುವ ಪ್ರೀತಿ ಮತ್ತು ಸಪೋರ್ಟ್‌ಗೆ ವಂದನೆಗಳು. ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವದಂದು ನಿಮಗೆ ವೈಯಕ್ತಿಕವಾಗಿ ನಾನು ವಿಶ್ ಮಾಡಲು ಈ ಸಲ ಆಗಲಿಲ್ಲ, ದಯವಿಟ್ಟು ಕ್ಷಮಿ' ಎಂದು ವರ್ಷ ಕಾವೇರಿ ಬರೆದುಕೊಂಡಿದ್ದಾರೆ.

Tap to resize

'ನನ್ನ ತಂದೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ನಿಮ್ಮೆಲ್ಲರಿಗೂ ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸ ಶುಭಾಶಯಗಳು'ಎಂದಿದ್ದಾರೆ ವರ್ಷ.

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ವರ್ಷ ತಮ್ಮ ಪರ್ಸನಲ್ ಲೈಫ್‌ ಬಗ್ಗೆ ಹೆಚ್ಚಾಗಿ ಹಂಚಿಕೊಳ್ಳುವುದಿಲ್ಲ. ಆದರೆ ಈ ಹಿಂದೆ ತಂದೆ ಜೊತೆ ಮಾಡಿರುವ ರೀಲ್ಸ್‌ವೊಂದರ ಫೋಟೋಗಳಿದು. 

ವರ್ಷ ತಂದೆ ಆದಷ್ಟು ಬೇಗ ಚೇತರಿಸಿಕೊಳ್ಳಲಿ, ನಿಮ್ಮ ತಂದೆ ಚೆನ್ನಾಗಾಗಿ ಬರುತ್ತಾರೆ, ಈ ಸಮಯದಲ್ಲಿ ನಿಮ್ಮ ಪರವಾಗಿ ಸ್ನೇಹಿತರು ನಿಲ್ಲದಿದ್ದರೆ ನೀವು ಅವರಿಗೆ ಮಾಡಿದ ಸಹಾಯ ಕೊಟ್ಟ ಚಿನ್ನದ ಗಿಫ್ಟ್‌ಗೆ ಬೆಲೆ ಇಲ್ಲ ಅಂತಿದ್ದಾರೆ ನೆಟ್ಟಿಗರು.

ವರ್ಷ ಕಾವೇರಿ ಸಿಕ್ಕಾಪಟ್ಟೆ ಟ್ರಾವಲ್ ಮಾಡುತ್ತಾರೆ, ಹೀಗೆ ಮಂಜಿನ ಹಾರ್ಟ್‌ ಶೇಪ್ ಬರೆದು ಫೋಟೋ ಕ್ಲಿಕ್ ಮಾಡಿಕೊಂಡಿದ್ದರು. ಅದನ್ನು ಈಗ ಅಪ್ಲೋಡ್ ಮಾಡಿದ್ದಾರೆ. ಹೀಗಾಗಿ ದಯವಿಟ್ಟು ಕ್ಲಾರಿಟಿ ಕೊಡಿ ಏನಾಗಿದೆ ಎಂದು ಫಾಲೋವರ್ಸ್ ನಮವಿ ಮಾಡುತ್ತಾರೆ. 

Latest Videos

click me!