ಲವ್​ ಮ್ಯಾರೇಜ್​, ಅರೇಂಜ್ಡ್​ ಮ್ಯಾರೇಜ್​ ಬಿಟ್ಟು ಇನ್ನೊಂದು ಮ್ಯಾರೇಜೂ ಇದೆ... ಹಿರೇಮಗಳೂರು ಕಣ್ಣನ್ ಮಾತಲ್ಲೇ ಕೇಳಿ..

By Suchethana D  |  First Published Nov 2, 2024, 5:33 PM IST

ಲವ್​ ಮ್ಯಾರೇಜ್​, ಅರೇಂಜ್ಡ್​ ಮ್ಯಾರೇಜ್​ ಬಿಟ್ಟು ಇನ್ನೊಂದು ಮ್ಯಾರೇಜೂ ಇದೆ. ಅದೇನು ಅಂತ ಹಿರೇಮಗಳೂರು ಕಣ್ಣನ್ ಹೇಳಿದ್ದಾರೆ ಕೇಳಿ... 
 


ಇನ್ನು ಗಂಡ- ಹೆಂಡತಿಯ ಸಂಬಂಧದ ಕುರಿತು ಮಾಡುವ ಜೋಕ್ಸ್​, ಮೀಮ್ಸ್​ಗಳಿಗೆ ಲೆಕ್ಕವೇ ಇಲ್ಲ. ಅದರಲ್ಲಿಯೂ ಹೆಚ್ಚಾಗಿ ಹೆಂಡತಿಯರ ಮೇಲಿನ ಜೋಕ್ಸ್​ಗಳೇ ಹೆಚ್ಚು ಎಂದರೂ ತಪ್ಪಾಗಲಿಕ್ಕಿಲ್ಲ. ದಂಪತಿ ನಡುವಿನ ಜೋಕ್ಸ್​ಗಳನ್ನು ಯಾರೂ ಹೆಚ್ಚಾಗಿ ಸೀರಿಯಸ್​ ತೆಗೆದುಕೊಳ್ಳದೇ ತಮ್ಮ ಮನೆಯಲ್ಲಿಯೂ ಹೀಗೆಯೇ ಎಂದು ಅಂದುಕೊಳ್ಳುವವರೇ ಹೆಚ್ಚು. ಅದಕ್ಕಾಗಿಯೇ ಇವುಗಳ ಜೋಕ್ಸ್​, ಮೀಮ್ಸ್​ಗಳು ಸಕತ್​ ವೈರಲ್​ ಆಗುತ್ತವೆ.  ಇದೀಗ ಹಿರೇಮಗಳೂರು ಕಣ್ಣನ್ ಅವರು, ಕೀರ್ತಿ ನಾರಾಯಣ ಅವರ ಚಾನೆಲ್​ನಲ್ಲಿ ಸಂದರ್ಶನ ನೀಡುವ ಸಂದರ್ಭದಲ್ಲಿ ಮದುವೆಯ ಕುರಿತು ಹೇಳಿದ ಜೋಕ್ಸ್​ ಸಕತ್​ ವೈರಲ್​ ಆಗುತ್ತಿದ್ದು, ಜನರು ಬಿದ್ದೂ ಬಿದ್ದೂ ನಗುತ್ತಿದ್ದಾರೆ. 

ಅಷ್ಟಕ್ಕೂ ಕೀರ್ತಿ ಅವರು, ಅರೇಂಜ್ಡ್​ ಮ್ಯಾರೇಜ್​ಗೂ, ಲವ್​ ಮ್ಯಾರೇಜ್​ಗೂ ಇರುವ ವ್ಯತ್ಯಾಸ ಏನು ಎಂದು ಕೇಳಿದ್ದಾರೆ. ಅದಕ್ಕೆ ತಮ್ಮದೇ ಆದ ಹಾಸ್ಯದ ಧಾಟಿಯಲ್ಲಿ ಹಿರೇಮಗಳೂರು ಕಣ್ಣನ್​ ಅವರು, ಗಂಡ-ಹೆಂಡತಿ ಇಬ್ಬರೂ ಪಾತ್ರೆ ತೊಳೆಯುತ್ತಾ, ಅಡುಗೆ ಮಾಡುತ್ತಾ, ತರಕಾರಿ ಹೆಚ್ಚುತ್ತಿದ್ದರೆ ಅದು ಲವ್​ ಮ್ಯಾರೇಜು, ಹೆಂಡತಿ ಎಲ್ಲಾಕೆಲಸ ಮಾಡುತ್ತಾ, ಗಂಡ ಸುಮ್ಮನೇ ಕುಳಿತಿದ್ದರೆ ಅದು ಅರೇಂಜ್​ ಮ್ಯಾರೇಜು, ಅದೇ ಹೆಂಡತಿ ಪಕ್ಕದಲ್ಲಿ ಇದ್ದರು ಕೂಡ, ಅಥ್ವಾ ಅವಳು ತನ್ನ ಕಾರ್ಯದಲ್ಲಿ ಮಗ್ನ ಆಗಿದ್ರೂ ಕೂಡ ಗಂಡ ಪಾತ್ರೆ ತೊಳೆಯುತ್ತಿದ್ದರೆ ಅದು ಯಾವ ಮ್ಯಾರೇಜು ಗೊತ್ತಾ? ಅದು ರಿವೇಂಜ್​ ಮ್ಯಾರೇಜು ಎಂದು ತಮಾಷೆ ಮಾಡಿದ್ದಾರೆ. 

Tap to resize

Latest Videos

undefined

ನೀಲಿ ಚಿತ್ರದಲ್ಲಿ ನಟಿಸಲು ಆಫರ್​ ಬಂದಿದೆ ಎಂದ ಮಗ! ಅಮ್ಮನ ರಿಯಾಕ್ಷನ್​ ನೋಡಿ- ವಿಡಿಯೋ ವೈರಲ್​

 ಸುಖ ಸಂಸಾರಕ್ಕೆ 12 ಸೂತ್ರಗಳು ಎಂದು ಬಹಳ ಹಿಂದಿನಿಂದಲೂ ಹೇಳಿಕೊಂಡು ಬರಲಾಗುತ್ತಿದೆ. ಸೂತ್ರಗಳು ಎಷ್ಟೇ ಇದ್ದರೂ ಇಂದು ಬಹುತೇಕ ಸಂಸಾರಗಳು ಛಿದ್ರ ಆಗುತ್ತಿರುವುದೇ ಹೆಚ್ಚು. ಚಿಕ್ಕ ಪುಟ್ಟ ವಿಷಯಗಳಿಗೂ ಜಗಳವಾಗಿ ಅದು ವಿಚ್ಛೇದನ ತಲುಪುತ್ತಿರುವುದು ಇತ್ತೀಚಿಗೆ ಮಾಮೂಲಾಗಿ ಬಿಟ್ಟಿದೆ. ಇದೇ ಕಾರಣಕ್ಕೆ ಗಂಡ-ಹೆಂಡತಿ (Husband and Wife) ಜಗಳ ಇಂದು  ಕೋರ್ಟ್​ ಕೇಸ್​ ಹಾಕುವವರೆಗೆ, ವಿಚ್ಛೇದನ ಪಡೆಯುವವರೆಗೆ ಎನ್ನುವ ಮಾತು ಈಗ ಸರ್ವಸತ್ಯವಾಗಿಬಿಟ್ಟಿದೆ. ತಪ್ಪು ಗಂಡಂದೋ, ಹೆಂಡತಿಯದ್ದೋ ಒಟ್ಟಿನಲ್ಲಿ ಸಂಸಾರ, ದಾಂಪತ್ಯಕ್ಕೆ ಇರುವ ಮಹತ್ವದ ಅರ್ಥವೇ ಇಂದು ಬದಲಾಗಿರುವುದಂತೂ ದಿಟ. ಕೋರ್ಟ್​ಗಳಲ್ಲಿ ದಾಖಲಾಗುವ ಒಂದೊಂದು ಡಿವೋರ್ಸ್​  ಕೇಸ್​ಗಳನ್ನು ಪರಿಶೀಲಿಸಿದರೆ ತೀರಾ ಕ್ಷುಲ್ಲಕ ಕಾರಣಕ್ಕೆ ಕೇಸ್​ ಹಾಕಿರುವುದನ್ನು ನೋಡಬಹುದು. ಒಂದು ಕಡೆ ಕೆಲವು ವರ್ಗಗಳಲ್ಲಿ ಮದುವೆಯಾಗಲು ಹೆಣ್ಣುಮಕ್ಕಳೇ ಸಿಗದ ಸ್ಥಿತಿ ಇರುವಾಗ, ಅದೇ ಇನ್ನೊಂದೆಡೆ ದಾಂಪತ್ಯದಲ್ಲಿ ಬಿರುಕುಗಳು ಹೆಚ್ಚುತ್ತಿವೆ. ಈಚೆಗೆ,  ಕಾಮಿಡಿ ಕಿಲಾಡಿಯ ಸೀಸನ್​ 4ರ ವಿಜೇತ ಹರೀಶ್​ ಹಿರಿಯೂರು (Harish Hiriyuru) ಅವರು ತಮ್ಮ ಎಂದಿನ ಹಾಸ್ಯದ ರೂಪದಲ್ಲಿಯೇ ಸುಖ ಸಂಸಾರಕ್ಕೆ 13ನೇ ಸೂತ್ರ ಹೇಳಿ ನಕ್ಕು ನಗಿಸಿದ್ದರು. ಅದೇನೆಂದ್ರೆ,  ಗಂಡ ಹೆಂಡ್ತಿ ಅಂದ್ಮೇಲೆ ಜಗಳ ಇದ್ದೇ ಇರುತ್ತದೆ, ಅವಳು ಬೈಯೋದು, ಇವನು ಬೈಯೋದು ಎಲ್ಲವೂ ಮಾಮೂಲು. ಅದಕ್ಕೇ ಗಂಡಸರು ಸಮಾಧಾನದಿಂದ ಇರಬೇಕು. ಹೆಂಡ್ತಿ ಅಂತೂ ಸಿಟ್ಟಿಗೆದ್ದಿರ್ತಾಳೆ. ಅದಕ್ಕೆ ಗಂಡ ಸಿಟ್ಟಿಗೇಳ್ಬಾರ್ದು ಎನ್ನುತ್ತಲೇ ಗಂಡ ಏನು ಮಾಡಬೇಕು ಎಂದು ಹೇಳಿದ್ದರು. ಗಂಡನಾದವ ಸೀದಾ ಸಿಟ್ಟಿನಿಂದ ದಡಬಡ ಎಂದು ಮನೆಗೆ ಹೋಗಬೇಕು. ಆ ಕಡೆ ಕ ಕಡೆ ನೋಡಿ, ಏನೇ ಎಂದು ಹೆಂಡತಿಯನ್ನು ಸಿಟ್ಟಿನಿಂದ ನೋಡಬೇಕು. ಆಮೇಲೆ... ಆಮೇಲೆ ಅವಳ ಕಾಲು ಹಿಡಿದುಕೊಂಡು ಬಿಡಬೇಕು. ಅಲ್ಲಿಗೆ ಮುಗೀತು ಎಂದಿದ್ದರು. ಹೀಗೆ ದಾಂಪತ್ಯಕ್ಕೆ ಸಂಬಂಧಿಸಿದಂತೆ ಹಲವಾರು ಜೋಕ್ಸ್​ಗಳಿವೆ.
 
ಇನ್ನು ಹಿರೇಮಗಳೂರು ಕಣ್ಣನ್​ ಅವರು ಕುರಿತು ಹೇಳುವುದಾದರೆ, ಚಿಕ್ಕಮಗಳೂರಿನ ಹೊರ ಭಾಗದಲ್ಲಿರುವ ಹಿರೇಮಗಳೂರಿನಲ್ಲಿ ಕೋದಂಡ ರಾಮ ದೇವಾಲಯದಲ್ಲಿ ಇವರು  ಅರ್ಚಕರಾಗಿ  ಸೇವೆ ಸಲ್ಲಿಸುತ್ತಿದ್ದಾರೆ. ಈ ದೇವರಿಗೆ ಕನ್ನಡ ಮಂತ್ರಗಳ ಮೂಲಕ ಪೂಜೆ ಸಲ್ಲಿಸುವುದು  ವಿಶೇಷವಾಗಿದೆ. ಕೋದಂಡರಾಮದೇವರಿಗೆ ಅಭಿಷೇಕ, ಅಲಂಕಾರ, ಮಂಗಳಾರತಿ, ಎಲ್ಲಕ್ಕೂಎಲ್ಲ ಸೇವೆಗಳೂ ಕನ್ನಡದಲ್ಲೇ ನಡೆಯುತ್ತವೆ,  ಕನ್ನಡದ ಮಂತ್ರಗಳಲ್ಲಿಯೇ ನಡೆಯುತ್ತವೆ.ಇದರ ಹಿನ್ನೆಲೆಯಲೂ ಕುತೂಹಲವಾಗಿದೆ. ಇವರ ತಂದೆ ಪಾರ್ಥಸಾರಥಿ, ಒಬ್ಬ ಸಂಸ್ಕೃತಬಲ್ಲ ದೇವಸ್ಥಾನದ ಅರ್ಚಕ. ಅವರಿಗೆ ಒಮ್ಮೆ ಈ ಸಂಸ್ಕೃತಮಂತ್ರಗಳ ಅರ್ಥ ಕ್ಲಿಷ್ಟವಾಗಿರುವುದು ಗಮನಕ್ಕೆ ಬಂತು. ಮಂತ್ರಗಳನ್ನು ಕನ್ನಡಕ್ಕೆ ಸರಿಯಾದ ಅರ್ಥದಲ್ಲಿ ಅನುವಾದಮಾಡಿ ಬಳಸುವ ವ್ಯವಸ್ಥೆ ಮಾಡಲು ಆಶಿಸಿದರು. ನಿತ್ಯವೂ ಹನುಮ ಸಮೇತನಾದ ಶ್ರೀರಾಮ, ಲಕ್ಷಣ, ಸೀತಾಮಾತೆಯರಿಗಿಲ್ಲಿ ಕನ್ನಡದಲ್ಲಿ ಪೂಜೆ ಮಾಡಲು ಪ್ರಾರಂಭಿಸಿದರು. 

ಸುಂದರಿಯ ಫೋಟೋ ಸಿಕ್ಕಿತೆಂದು ಹೀಗೆ ಮೋಸ ಮಾಡೋದಾ ಭಾರತ್​ ಮ್ಯಾಟ್ರಿಮೋನಿ? ಗೃಹಿಣಿ ಆಕ್ರೋಶ

 
 
 
 
 
 
 
 
 
 
 
 
 
 
 

A post shared by @keerthientclinic

click me!