ಸಿಲಿಕಾನ್‌ ಸಿಟಿಯಲ್ಲಿ ಭಾರೀ ಮಳೆ, ಧರೆಗುರುಳಿದ ಮರಗಳು

Apr 7, 2020, 1:51 PM IST

ಬೆಂಗಳೂರು(ಏ.07): ಭಾರತ ಲಾಕ್‌ಡೌನ್‌ ನಡುವೆಯೂ ಬೆಂಗಳೂರಿನಲ್ಲಿ ಭಾರೀ ಮಳೆಯಾಗಿದೆ. ಸಿಲಿಕಾನ್ ಸಿಟಿಯ ಹಲವು ಕಡೆ ಮಳೆಯ ಅಬ್ಬರ ಜೋರಾಗಿತ್ತು. ರಸ್ತೆಗಳ ತುಂಬ ನೀರು ತುಂಬಿದ್ದು, ಅಗತ್ಯ ಸೇವೆ, ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.

ಫ್ರೀಡಂ ಪಾರ್ಕ್, ಮಡಿವಾಳ ಸೇರಿದಂತೆ ಹಲವು ಕಡೆ ಮರಗಳು ಉರುಳಿ ಬಿದ್ದಿದೆ. ಅಗ್ನಿಶಾಮಕ ಸಿಬ್ಬಂದಿ ರಸ್ತೆ ಮೇಲೆ ಬಿದ್ದಿದ್ದ ಮರಗಳನ್ನು ತೆರವುಗೊಳಿಸಿದ್ದಾರೆ. ಮೆಜೆಸ್ಟಿಕ್ ಸೇರಿ ಹಲವು ಕಡೆ ಭಾರೀ ಮಳೆ ಸುರಿದಿದ್ದು ರಸ್ತೆಗಳಲ್ಲಿ ನೀರು ತುಂಬಿಕೊಂಡಿತ್ತು.

ಕೊರೋನಾ ವೈರಸ್: ಜಗತ್ತಿನ ಸದ್ಯದ ಪರಿಸ್ಥಿತಿ ಹೀಗಿದೆ ನೋಡಿ..!

ಶಿವಮೊಗ್ಗ, ಶಿರಸಿ, ಉತ್ತರ ಕನ್ನಡ, ಮಡಿಕೇರಿ ಸೇರಿ ರಾಜ್ಯದ ಹಲವು ಕಡೆ ಭಾರೀ ಮಳೆ ಸುರಿದಿದೆ. ಈಗಾಗಲೇ ಲಾಕ್‌ಡೌನ್‌ ಘೋಷಿಸಲಾಗಿದ್ದು, ಆದರೂ ಜನರು ಅಗತ್ಯಗಳಿಗಾಗಿ ಹೊರಗಡೆ ಓಡಾಡುತ್ತಿದ್ದಾರೆ.