ನನ್ನನ್ನು ನೋಡಿಕೊಳ್ಳದ ಮಕ್ಕಳು ಸಂಬಂಧಿಕರಿಗೆ ಬದುಕಿದ್ದೇನೆಂದು ತೋರಿಸಲು ಮತ ಹಾಕಿದೆ, ವೃದ್ಧನ ಕಣ್ಣೀರು

By Suvarna News  |  First Published May 7, 2024, 5:45 PM IST

ವಿಜಯಪುರದಲ್ಲಿ ಮತದಾನದ ವೇಳೆ ಹೃದಯವಿದ್ರಾಕ ಸನ್ನಿವೇಶವೊಂದು ಬೆಳಕಿಗೆ ಬಂತು. ವಿಜಯಪುರದಲ್ಲಿ ಮತದಾನ ಮಾಡಲು ಬಂದ ವೃದ್ಧರೊಬ್ಬರು ನನಗೆ ಯಾರೂ ಇಲ್ಲ, ಬದುಕಿದ್ದೇನೆ ಎಂದು ಕಣ್ಣಿರಿಟ್ಟರು. 


ವಿಜಯಪುರ (ಮೇ.7):  ವಿಜಯಪುರದಲ್ಲಿ ಮತದಾನದ ವೇಳೆ ಹೃದಯವಿದ್ರಾಕ ಸನ್ನಿವೇಶವೊಂದು ಬೆಳಕಿಗೆ ಬಂತು. ಗುಲ್ಬರ್ಗಾ ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದ್ದ ವೇಳೆ ವಿಜಯಪುರದ ಗೋಳಗುಮ್ಮಟ ಏರಿಯಾದ ಬೂತ್ ನಂಬರ್ 168 ರಲ್ಲಿ ಮತದಾನ ಮಾಡಲು ಬಂದ ವೃದ್ಧರೊಬ್ಬರು ಕಣ್ಣಿರಿಟ್ಟರು. 

ಮತದಾನ ಮಾಡಲು ಬಂದಾಗ  ಕಣ್ಣೀರಿಟ್ಟ 83 ವರ್ಷದ ವೃದ್ಧ ಯಲ್ಲಪ್ಪ ನನ್ನನ್ನು ಮಕ್ಕಳು, ಸಂಬಂಧಿಕರು ಯಾರು ಸಹ ನೋಡಿಕೊಳ್ಳಲು ಇಲ್ಲ ಎಂದು ಗಳಗಳನೆ ಅತ್ತರು.  ನಾನು ಬದುಕಿದ್ದೇನೆ ಎಂದು ತೋರಿಸೋಕೆ ಮತ ಹಾಕಲು ಬಂದಿದ್ದೇನೆ ಎಂದು ವೃದ್ಧ ಕಣ್ಣೀರು ಹಾಕಿದರು. ಯಲ್ಲಪ್ಪ ಗೋಳಗುಮ್ಮಟ ಏರಿಯಾ ನಿವಾಸಿಯಾಗಿದ್ದಾರೆ. ಮತದಾನ ಬೂತ್‌ ಗೆ ವೀಲ್‌ ಚೇರ್‌ ನಲ್ಲಿ ತೆರಳಲು ಸಿಬ್ಬಂದಿ ಸಹಾಯ ಮಾಡಿದರು.

Latest Videos

undefined

LIVE: Bidar Elections 2024: ಬೀದರ್‌ ಕ್ಷೇತ್ರದಲ್ಲಿ ಮಧ್ಯಾಹ್ನ 3 ಗಂಟೆವರೆಗೆ ಶೇ.49.89ರಷ್ಟು ಮತದಾನ

ಮನೆಯಲ್ಲಿ ಕಾಡಿಬೇಡಿ ಮತ ಚಲಾಯಿಸಲು ಬಂದ ಅಜ್ಜಿ:
ಬಿರು ಬಿಸಿಲಿನಲ್ಲೂ ವಿಜಯಪುರದಲ್ಲಿ  ಮತದಾನ ಮಾಡಲು ಅಜ್ಜಿ ಉತ್ಸಾಹ ತೋರಿಸಿದರು. ಮನೆಯಲ್ಲಿ ಕಾಡಿಬೇಡಿ ಮತ 84 ವರ್ಷದ ಮಲ್ಲವ್ವ ಹೋಳಿಕಟ್ಟಿ ಚಲಾಯಿಸಲು ಬಂದರು. ನಡೆಯಲು ಬಾರದೆ ಹಾಸಿಗೆ ಹಿಡಿದಿದ್ದ ಅಜ್ಜಿ ಮಲ್ಲವ್ವ ಮತದಾನ ವಿಚಾರ ತಿಳಿದು ವಿಲ್‌ಚೇರ್ ಮೇಲೆ ಮತಗಟ್ಟೆಗೆ ಬಂದರು. ಮತಗಟ್ಟೆ ಸಂಖ್ಯೆ 168ರಲ್ಲಿ ಮತ ಚಲಾಯಿಸಿ ಸಂತಸ ಪಟ್ಟರು. ಕುಟುಂಬಸ್ಥರು ಅಜ್ಜಿಯನ್ನ ಆಟೋದಲ್ಲಿ ಕರೆದುಕೊಂಡು ಬಂದಿದ್ದರು.

LIVE: Shivamogga Elections 2024: ಶಿವಮೊಗ್ಗದಲ್ಲಿ ಮಧ್ಯಾಹ್ನ 3 ಗಂಟೆವರೆಗೆ ಶೇ.57.96ರಷ್ಟು ಮತದಾನ

ಮತದಾನಕ್ಕೂ ಬರಲಿಲ್ಲ ಗುಳೆ ಹೋದ ಜನ:
ವಿಜಯಪುರ ಜಿಲ್ಲೆಯ ತಾಂಡಾಗಳಲ್ಲಿನ ಮತದಾನ ಕೇಂದ್ರಗಳು ಖಾಲಿ ಹೊಡೆಯುತ್ತಿತ್ತು. 250ಕ್ಕು ತಾಂಡಾಗಳು ಇದ್ದು, ಶೇಕಡಾ 40 ರಿಂದ 50ರಷ್ಟು ತಾಂಡಾ ಜನ ಗುಳೆ ಹೋಗೋದು ಇಲ್ಲಿ ಕಾಮನ್. ಗುಳೆ ಹೋದ ಪರಿಣಾಮ ತಾಂಡಾಗಳಲ್ಲಿ ಮತಗಟ್ಟೆಗಳು ಖಾಲಿ ಹೊಡೆಯುತ್ತಿತ್ತು. ಮದಭಾವಿ ತಾಂಡಾದಲ್ಲಿ ಗುಳೇ ಹೋದ ಜನ ವಾಪಸ್‌ ಬರದೇ ತಾಂಡಾಗಳಲ್ಲಿ ಕಡಿಮೆ ಮತದಾನ ದಾಖಲಾಗುವ ಸಾಧ್ಯತೆ ಇದೆ. ಜೂನ್ ತಿಂಗಳು ಸನಿಹ ಆಗ್ತಿರೋದ್ರಿಂದ  ಇದು ಗುಳೆ ಹೋದವರಿಗೆ ಸೀಜನ್. ಅತ್ತ ಹಣ ಖರ್ಚು ಮಾಡಿಕೊಂಡು ಮತದಾನ ಮಾಡಲು ಬಾರದ ಪರಿಸ್ಥಿತಿ.

click me!