ಪ್ರೀತಿ ಮಾಡೊ ಜೋಡಿಗಳ ಮದುವೆಯಾದ್ರೆ (Love Marriage), ಅವರು ತಾವು ಅಂದುಕೊಂಡ ಕನಸು ನನಸಾಗೋ ಸಂಭ್ರಮದಲ್ಲಿರುತ್ತಾರೆ. ಆದರೆ ಮದುವೆ ಆರಂಭದಲ್ಲಿ ಎಲ್ಲವೂ ಚೆನ್ನಾಗಿರುತ್ತೆ, ದಿನಕಳೆದಂತೆ ಸಮಸ್ಯೆಗಳು ನಿಧಾನವಾಗಿ ಆರಂಭವಾಗುತ್ತೆ, ಕೊನೆಗೆ ಸಂಬಂಧವು ವಿಚ್ಛೇದನದವರೆಗೆ ಹೋಗುತ್ತದೆ. ಜ್ಯೋತಿಷ್ಯದ ಪ್ರಕಾರ, ಶುಕ್ರ, ಗುರು, ಬುಧ ಮತ್ತು ರಾಹು ಎಂಬ ನಾಲ್ಕು ಗ್ರಹಗಳು ಪ್ರೇಮ ವಿವಾಹ ವಿಫಲವಾಗಲು ಕಾರಣವಾಗಿವೆ. ಜಾತಕದಲ್ಲಿ ಈ ಗ್ರಹಗಳ ಸ್ಥಾನವು ಅನುಕೂಲಕರವಾಗಿಲ್ಲದಿದ್ದಾಗ, ಪ್ರೇಮ ವಿವಾಹದಲ್ಲಿ ಸಮಸ್ಯೆಗಳು (problem in marriage) ಕ್ರಮೇಣ ಪ್ರಾರಂಭವಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಜ್ಯೋತಿಷ್ಯದ ಕೆಲವು ಪರಿಹಾರಗಳನ್ನು ಪಾಲಿಸೋದರಿಂದ, ಪ್ರೇಮ ವಿವಾಹ ಚೆನ್ನಾಗಿರೋದಕ್ಕೆ ಸಾಧ್ಯವಾಗುತ್ತದೆ.