ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಸೋಷಿಯಲ್ ಮೀಡಿಯಾದಲ್ಲಿರುವ ತಮ್ಮ ವೆಡ್ಡಿಂಗ್ ಫೊಟೋಗಳನ್ನು ಡಿಲೀಟ್ ಮಾಡಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಅವರ ಅಭಿಮಾನಿಗಳು ಸೇರಿದಂತೆ ಎಲ್ಲರೂ ಶಾಕ್ ಆಗಿದ್ದಾರೆ.
ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಸೋಷಿಯಲ್ ಮೀಡಿಯಾದಲ್ಲಿರುವ ತಮ್ಮ ವೆಡ್ಡಿಂಗ್ ಫೊಟೋಗಳನ್ನು ಡಿಲೀಟ್ ಮಾಡಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಅವರ ಅಭಿಮಾನಿಗಳು ಸೇರಿದಂತೆ ಎಲ್ಲರೂ ಶಾಕ್ ಆಗಿದ್ದಾರೆ. ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್ ಸಿಂಗ್ ಅವರು 14 ನವೆಂಬರ್ 2018ರಂದು (14 November 2018)ಮದುವೆಯಾಗಿದ್ದಾರೆ. ಇತ್ತೀಚೆಗೆ ದೀಪಿಕಾ ಗರ್ಭಿಣಿ ಎಂಬ ಸುದ್ದಿ ಸಹ ವೈರಲ್ ಆಗಿದೆ. ಈಗ ನಟ ರಣವೀರ್ ಸಿಂಗ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿರುವ ಮದುವೆ ಫೋಟೋಗಳನ್ನು ಡಿಲೀಟ್ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಪದ್ಮಾವತ್ ಸೇರಿದಂತೆ ಹಲವು ಚಿತ್ರಗಳಲ್ಲಿ ಒಟ್ಟಿಗೇ ನಟಿಸಿ ಜನಮೆಚ್ಚುಗೆ ಗಳಸಿದ್ದಾರೆ ನಟ ರಣವೀರ್ ಸಿಂಗ್ ಹಾಗೂ ನಟಿ ದೀಪಿಕಾ ಪಡುಕೋಣೆ. ಬಳಿಕ, ಅವರಿಬ್ಬರೂ ಲವ್ವಲ್ಲಿ ಬಿದ್ದು ಮದುವೆ ಮಾಡಿಕೊಂಡಿದ್ದಾರೆ. ಬರೋಬ್ಬರಿ 5 ವರ್ಷಗಳಿಗೂ ಹೆಚ್ಚು ಕಾಲ ಈ ಜೋಡಿ ಹಾಯಾಗಿ ಸಂಸಾರ ಮಾಡಿಕೊಂಡಿದೆ. ಇತ್ತೀಚೆಗೆ ದೀಪಿಕಾ ಪಡುಕೋಣೆ 'ಪ್ರೆಗ್ನಂಟ್' ಆಗಿದ್ದಾಳೆ ಎಂಬಸುದ್ದಿ ಸಹ ವೈರಲ್ ಆಗಿದೆ. ಈಗ ಇದ್ದಕ್ಕಿದ್ದಂತೆ ದೀಪಿಕಾ ಪತಿರಾಯ ತಮ್ಮ ಮದುವೆ ಫೋಟೋಗಳನ್ನು ಸೋಷಿಯಲ್ ಮೀಡಿಯಾ ಪೇಜ್‌ಗಳಿಂದ ಕಿತ್ತುಹಾಕಿದ್ದು ಯಾಕೆ? ಎಲ್ಲರಿಗೂ ಸಂಶಯವಂತೂ ಮೂಡಿದೆ. ಅದಕ್ಕೆ ಉತ್ತರವನ್ನು ಅವರೇ ಹೇಳಬೇಕು.
ದೀಪಿಕಾ ಪಡುಕೋಣೆ ಮೊದಲ ಸಿನಿಮಾ ರಯಲ್ ಸ್ಟಾರ್ ಉಪೇಂದ್ರ ನಟನೆಯ ಕನ್ನಡದ 'ಐಶ್ವರ್ಯ'. ಬಳಿಕ ಅವರು ನಟ ಶಾರುಖ್ ಖಾನ್ ಜೋಡಿಯಾಗಿ ಹಿಂದಿಯಲ್ಲಿ 'ಓಂ ಶಾಂತಿ ಓಂ' ಚಿತ್ರದಲ್ಲಿ ನಟಿಸಿದ್ದಾರೆ. ಬಳಿಕ ಅವರು ಬಾಲಿವುಡ್ ಬಿಟ್ಟು ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸಲಿಲ್ಲ. ಮದುವೆ ಬಳಿಕ ಸಾಕಷ್ಟು ಅಳೆದು ತೂಗಿ ಪಾತ್ರಗಳನ್ನು,ಸಿನಿಮಾಗಳನ್ನು ಒಪ್ಪಿ ಸಹಿ ಹಾಕುತ್ತಿದ್ದರು ನಟಿ ದೀಪಿಕಾ. ಇತ್ತೀಚೆಗೆ ಮಗು ಮಾಡಿಕೊಳ್ಳವುದಕ್ಕೆ ಗ್ಯಾಪ್ ಎಂಬಂತೆ ಯಾವುದೇ ಚಿತ್ರಕ್ಕೆ ಸಹಿ ಹಾಕಿರಲಿಲ್ಲ. ಇತ್ತೀಚೆಗೆ ದೀಪಿಕಾ ಗರ್ಭಿಣಿ ಎಂಬ ನ್ಯೂಸ್ ಸಖತ್ ವೈರಲ್ ಆಗಿತ್ತು.
ದೀಪಿಕಾ ಗರ್ಭಿಣಿ ಆಗಿದ್ದಾರೆ ಎಂಬ ಸುದ್ದಿಯ ಬೆನ್ನಿಗೇ ಅವರ ಪತಿ ರಣವೀರ್ ಸಿಂಗ್ ತಮ್ಮಿಬ್ಬರ ಮದುವೆ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ ಎಂಬ ಸುದ್ದಿಯೀಗ ಕಾಡ್ಗಿಚ್ಚಿನಂತೆ ಬಾಲಿವುಡ್ ಅಂಗಳ ಸೇರಿದಂತೆ ಜಗತ್ತನ್ನೇ ಅಲ್ಲಾಡಿಸಿದೆ. ಅದೇನು ಕತೆ, ಏನಾಯ್ತು, ಯಾಕೆ ಫೋಟೋ ಡಿಲೀಟ್ ಮಾಡಿದ್ದು ಈ ಎಲ್ಲ ಸಂಗತಿಗಳಿಗೆ ದಂಪತಿಗಳಿಂದ ಏನು ಉತ್ತರ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.