ಪುಟ್ಟಕ್ಕನ ಮಕ್ಕಳು: ಉಮಾಶ್ರೀ ಮೈ ನವಿರೇಳಿಸೋ ಅಮೋಘ ಅಭಿನಯಕ್ಕೆ ಕಣ್ಣೀರಿಟ್ಟ ಪ್ರೇಕ್ಷಕರು!

Published : May 07, 2024, 05:20 PM IST

ಪುಟ್ಟಕ್ಕನ ಮಕ್ಕಳು ಸೀರಿಯಲ್ ನಲ್ಲಿ ಸದ್ಯ ಸಹನಾ ಸಾವನ್ನಪ್ಪಿದ್ದಾಳೆ. ಸಹನಾ ಅಂತ್ಯಕ್ರಿಯೆಯ ಪ್ರೋಮೋ ಬಿಡುಗಡೆಯಾಗಿದೆ. ಮಗಳನ್ನು ಕಳೆದುಕೊಂಡ ಪುಟ್ಟಕ್ಕ ಬಿಕ್ಕಿ ಬಿಕ್ಕಿ ಅಳುತ್ತಿದ್ದರೆ, ಆಕೆಯ ಅದ್ಭುತ ನಟನೆ ನೋಡಿ ವೀಕ್ಷಕರು ಕಣ್ತುಂಬಿಕೊಳ್ಳುತ್ತಿದ್ದಾರೆ.   

PREV
19
ಪುಟ್ಟಕ್ಕನ ಮಕ್ಕಳು: ಉಮಾಶ್ರೀ ಮೈ ನವಿರೇಳಿಸೋ ಅಮೋಘ ಅಭಿನಯಕ್ಕೆ ಕಣ್ಣೀರಿಟ್ಟ ಪ್ರೇಕ್ಷಕರು!

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅತ್ಯಂತ ಜನಪ್ರಿಯ ಹಾಗೂ ಅತಿ ಹೆಚ್ಚು ಟಿಆರ್‌ಪಿ ಪಡೆಯುವಂತಹ ಧಾರಾವಾಹಿ ಪುಟ್ಟಕ್ಕನ ಮಕ್ಕಳು (Puttakkana Makkalu). ಸದ್ಯ ಸೀರಿಯಲ್‌ನಲ್ಲಿ ಎಮೋಷನಲ್ ಎಪಿಸೋಡ್‌ಗಳು ಪ್ರಸಾರವಾಗುತ್ತಿವೆ. ಗಂಡನ ಮನೆಬಿಟ್ಟು ಅಮ್ಮನ ಮನೆ ಸೇರಿರುವ ಸಹನಾ, ಕೊನೆಗೆ ತಾನು ಅಮ್ಮನ ಭಾರವಾಗಿರೋದು ಬೇಡ ಎಂದು, ಜೊತೆಗೆ ಗಂಡನೇ ತನ್ನನ್ನು ತಿರಸ್ಕರಿಸಿದಳು ಎನ್ನುವ ಬೇಸರದಲ್ಲಿ ಮನೆಯನ್ನೇ ಬಿಟ್ಟು ಹೊರಟಿದ್ದಾಳೆ. 
 

29

ರಾತ್ರೋ ರಾತ್ರಿ ಬ್ಯಾಗ್ ಹಿಡಿದು ಮನೆಯಿಂದ ಹೊರಟಿದ್ದ ಸಹನಾಳಿಗಾಗಿ ಎಲ್ಲೆಡೆಯೂ ಹುಡುಕಾಟ ನಡೆಸಿದ್ದಾರೆ. ಕೊನೆಗೆ ಆಕೆ ಸಿಕ್ಕಿದ್ದು, ಶವವಾಗಿ, ಜಜ್ಜಿದ ಮುಖದ, ಗುರುತಿಸಲಾರದ ಸ್ಥಿತಿಯಲ್ಲಿ ಸಹನಾ ಶವ ಪತ್ತೆಯಾಗಿದ್ದು, ಅದರ ಪಕ್ಕ ಸಹನಾ ಐಡೆಂಟಿಟಿ ಕಾರ್ಡ್ ಕೂಡ ಲಭ್ಯವಾಗಿದ್ದು, ಸಹನಾಳದ್ದೆ ಸಾವಾಗಿದೆ ಎಂದು ಎಲ್ಲರೂ ಒಪ್ಪಿಕೊಂಡಿದ್ದಾರೆ. 
 

39

ಇದೀಗ ಹೊಸದಾಗಿ ಬಿಡುಗಡೆಯಾದ ಪ್ರೋಮೋದಲ್ಲಿ ಸಹನಾ ಅಂತ್ಯಸಂಸ್ಕಾರದ ದೃಶ್ಯಗಳು ಪ್ರಸಾರವಾಗಿವೆ. ಜೀವಕ್ಕೆ ಜೀವವಾಗಿದ್ದ ಹಿರಿಮಗಳು ಸಹನಾಳನ್ನು ಕಳೆದುಕೊಂಡ ಪುಟ್ಟಕ್ಕನ ಆಕ್ರಂದನ ಮುಗಿಲು ಮುಟ್ಟಿದೆ. ಒಂದೇ ಒಂದು ಸಲ ಓ ಅನ್ನು ಮಗಳೆ, ನಾನೇ ಪಾಪಿ, ಆ ಮಗುನ ಅತ್ತೆ ಮನೆಗೆ ಹೋಗು ಹೋಗು ಅಂತ ಹೇಳಿ ಹೇಳಿ ಈಗ ನಾನೇ ಆ ಮಗುವ ಬೆಂಕಿಗೆ ಹಾಕಿದೆ ಎಂದು ಎದೆ ಬಡಿದುಕೊಂಡು ಅಳುತ್ತಿದ್ದಾಳೆ ಪುಟ್ಟಕ್ಕ. 
 

49

ನನ್ನಂತ ಪಾಪಿ ತಾಯಿ ಯಾರಿಲ್ಲ ಎಂದು ಅಳುತ್ತಿರುವ ಪುಟ್ಟಕ್ಕನ ಅಭಿನಯ ಎಷ್ಟೊಂದು ಅಮೋಘವಾಗಿದೆ ಅಂದ್ರೆ ಉಮಾಶ್ರೀಯವರು ನಟಿಸುತ್ತಿದ್ದಾರೆ ಅನ್ನೋದೆ ಗೊತ್ತಾಗದಂತೆ ಅದ್ಭುತ ಅಭಿನಯ ಮಾಡಿದ್ದಾರೆ. ಪುಟ್ಟಕ್ಕನಾಗಿ ಉಮಾಶ್ರೀಯವರ (Umashree) ಅಭಿನಯ ನೋಡಿಯೇ ವೀಕ್ಷಕರು ಕಣ್ಣೀರಿಡುತ್ತಿದ್ದಾರೆ. ಇಂತಹ ಪರಿಸ್ಥಿತಿ ಇನ್ಯಾರಿಗೂ ಬಾರದಿರಲಿ ಎಂದು ಬೇಡುತ್ತಿದ್ದಾರೆ. ವೀಕ್ಷಕರು ಈ ದೃಶ್ಯಕ್ಕೆ ಎಷ್ಟೊಂದು ಕನೆಕ್ಟ್ ಆಗಿದ್ದಾರೆ ಅನ್ನೋದನ್ನು ಅವರ ಕಾಮೆಂಟ್ ನೋಡಿದ್ರೇನೆ ತಿಳಿಯುತ್ತೆ. 
 

59

ಒಬ್ಬರು ಉಮಾಶ್ರೀ ಅಮ್ಮ ನಿಮ್ಮ ಆಕ್ಟಿಂಗ್ (acting) ಬೇರೆ ಲೆವೆಲ್. ಎಷ್ಟು ನ್ಯಾಚುರಲ್ ಆಗಿ ಅಭಿನಹಿಸುತ್ತಿದ್ದೀರ, ನಿಮಗೆ ನನ್ನ ಕೋಟಿ ಕೋಟಿ ನಮನಗಳು. ಉಮಾಶ್ರೀ ಮೇಡಂ ಸೂಪರ್ ಆ್ಯಕ್ಟಿಂಗ್. ನಿಮ್ಮ ಅಭಿನಯ ನೋಡಿ ಕಣ್ಣುಗಳಲ್ಲಿ ನೀರು ಬಂತು ಎಂದಿದ್ದಾರೆ. ನಿಮ್ಮ ನಟನೆ ನೋಡಿದ್ರೆ ಎಂಥವರ ಕಣ್ಣಲ್ಲೂ ನೀರು ಬರುತ್ತೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 
 

69

ಇನ್ನೊಬ್ಬರು ನಂಗೆ ಪುಟ್ಟಕ್ಕನನ್ನು ನೋಡೋದಕ್ಕೆ ಆಗಲ್ಲ. ತುಂಬಾನೆ ದುಃಖ ಆಗ್ತಿದೆ. ಪುಟ್ಟಕ್ಕನ ಅಭಿನಯ ನೋಡಿದ್ರೆ ನನ್ನ ಮೈಮೇಲಿನ ರೋಮಗಳೇ ಎದ್ದು ನಿಲ್ಲುತ್ತೆ, ಅಷ್ಟೊಂದು ಕರುಳು ಹಿಂಡುವಂತೆ ಅಭಿನಯಿಸಿದ್ದಾರೆ. ಸೀರಿಯಲ್ ನೋಡ್ತಿರೋ ಪ್ರತಿಯೊಬ್ಬರೂ ಸಹ ಈ ನಟನೆ ನೋಡಿ ಕಣ್ಣೀರು ಹಾಕಿರ್ತಾರೆ ಅನ್ನೋದು ನಿಜಾ ಅಲ್ವಾ? ಎಂದು ಒಬ್ರು ಹೇಳಿದ್ದಾರೆ. 
 

79

ಸಹನಾ ಸತ್ತಿದ್ದಾಳೋ, ಬದುಕಿದ್ದಾಳೋ ಗೊತ್ತಿಲ್ಲ, ಆದರೆ ಉಮಾಶ್ರೀ ಅಂತೂ ತುಂಬಾ ನೋವು ತರುವಂತಹ ಈ ಎಪಿಸೋಡ್ ಆಗಿದೆ. ನೋಡಿದ ತಕ್ಷಣ ಕಣ್ಣೀರು ಬರುತ್ತೆ. ಸೂಪರ್ ಆಕ್ಟಿಂಗ್ ಉಮಾಶ್ರೀ ಅಮ್ಮ. ಸಹನಾ ಖಂಡಿತಾ ಬರುತ್ತಾಳೆ. ಏನು ಆಗಿಲ್ಲ ಸಹನಾಗೆ. ತಾಯಿ ಮನೆ ಹೆಣ್ಣಿಗೆ ಶಾಶ್ವತ ಅಲ್ಲ... ಸೂಪರ್ ಎಪಿಸೋಡ್ ಇದಂತೂ ಎಂದಿದ್ದಾರೆ.  

89

ಇನ್ನೊಬ್ಬರು ಇದು ಸೀರಿಯಲ್ ಅಂತ ಗೊತ್ತಿದ್ದ್ರು .. ಇದ್ದ್ರಲ್ಲಿ ನಿಮ್ಮ ಆಕ್ಟಿಂಗ್ ಮಾತ್ರ ನಮ್ಮನ್ನು ಮೌನವಾಗಿಸುತ್ತೆ ಅಮ್ಮ. ನಿಮ್ಮ ಆ ಗೋಳಾಟ ನೋಡಲು ಆಗೋಲ್ಲ. ಉಮಾಶ್ರೀ ಅಮ್ಮ ನಿಮ್ಮನ್ನು ನಟನೆಯಲ್ಲಿ ಮೀರಿಸೋರು ಯಾರೂ ಇಲ್ಲ. ನಟನೆಗೆ ಜೀವ ತುಂಬುವ ನಟಿ ಉಮಾಶ್ರೀ ಎಂದಿದ್ದಾರೆ. 
 

99

ಇನ್ನೊಬ್ಬರು ಉಮಾಶ್ರೀ ಅಮ್ಮ ನಿಮ್ಮನ್ನ ನೋಡಿ ಇದು ನಟನೆ ಅಂತ ಅನಿಸೋದೆ ಇಲ್ಲ. ನಿಜವಾಗ್ಲೂ ಮಗಳು ಸತ್ತೋದಾಗ ಅಳುವ ತರಾನೇ ಅಳ್ತಿದ್ದೀರಿ ಅಮ್ಮ. ನಿಮ್ಮನ್ನ ನೋಡಿ ನನಗೂ ಅಳು ಬಂತು. ಅಂದ್ರೆ ಮತ್ತೊಬ್ಬರು ನಾನು ಯಾವುದೇ ಚಾನೆಲ್‌ಗಳಲ್ಲಿ ಧಾರಾವಾಹಿಗಳನ್ನು ನೋಡುವುದಿಲ್ಲ, ಉಮಾಶ್ರೀ ಅಮ್ಮನ ಕಾರಣದಿಂದ ನಾನು ಈ ಪುಟ್ಟಕ್ಕನ ಮಕ್ಕಳು ಧಾರಾವಾಹಿಯನ್ನು ನೋಡುತ್ತೇನೆ.  ಓ ಮೈ ಗಾಡ್, ಎಂತಹ ಅದ್ಭುತ ನಟನೆ ಇವರದ್ದು ಎಂದಿದ್ದಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories