Jul 26, 2021, 3:05 PM IST
ವಿಜಯನಗರ(ಜು.26): ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸಿರುವ ಹಿನ್ನೆಲೆಯಲ್ಲಿ ಐತಿಹಾಸಿಕ ಹಂಪಿಯ ಪುರಂದರ ಮಂಟಪ ಮತ್ತು ಸ್ನಾನ ಘಟ್ಟಗಳು ಮುಳುಗಡೆಯಾಗಿವೆ. ಕೋದಂಡಸ್ವಾಮಿ ದೇವಾಲಯದ ಬಳಿ ನೆರೆ ನೀರು ಆವರಿಸಿದೆ. ನದಿಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಬಿಟ್ಟಿರುವುದರಿಂದ ಸ್ನಾನಕ್ಕೆಂದು ನದಿಗೆ ಇಳಿಯದಂತೆ ಹಂಪಿಗೆ ಬಂದಿರುವ ಭಕ್ತಾದಿಗಳಿಗೆ ಸೂಚನೆ ನೀಡಲಾಗಿದೆ. ಪ್ರವಾಹ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರಿಗೆ ಈಗಾಗಲೇ ಎಚ್ಚರಿಕೆಯಿಂದ ಇರಲು ಟಿಬಿ ಬೋರ್ಡ್ ಸೂಚನೆ ನೀಡಿದೆ. ನಿನ್ನೆ ಸಂಜೆಯಿಂದ ಹಂತ ಹಂತವಾಗಿ ಹೆಚ್ಚುವರಿಯಾಗಿ ನೀರು ಬಿಡಲಾಗುತ್ತಿದೆ. 28 ಕ್ರಸ್ಟ್ ಗೇಟ್ ಮೂಲಕ 80 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡಲಾಗಿದೆ.