'ಸಿದ್ದರಾಮಯ್ಯ ಕೊಟ್ಟಿರೋದು ಭಾಗ್ಯ ಅಲ್ಲ ಕಣಯ್ಯ, ನಿಂದು ನಿಜವಾದ ಭಾಗ್ಯ..' ಕಿಶನ್‌ ಅದೃಷ್ಟಕ್ಕೆ ಬೆರಗಾದ ನೆಟ್ಟಿಗರು!

By Santosh Naik  |  First Published Nov 27, 2024, 3:22 PM IST

ಬಿಗ್‌ಬಾಸ್‌ ಸ್ಟಾರ್‌ ಕಿಶನ್‌ ಬಿಳಗಲಿ ಸ್ಟಾರ್‌ ನಟಿಯರೊಂದಿಗೆ ಮಾಡಿರುವ ಡಾನ್ಸ್‌ ವಿಡಿಯೋಗಳ ಬಿಟಿಎಸ್‌ ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್‌ ಆಗಿದ್ದು, ಅಭಿಮಾನಿಗಳು ಕಿಶನ್‌ ಅವರ ಅದೃಷ್ಟವನ್ನು ಕೊಂಡಾಡಿದ್ದಾರೆ.


ಬಿಗ್‌ಬಾಸ್‌ ಸ್ಟಾರ್‌ ಹಾಗೂ ಸ್ಯಾಂಡಲ್‌ವುಡ್‌ನ ಸ್ಟಾರ್‌ ಡಾನ್ಸರ್‌ ಕಿಶನ್‌ ಬಿಳಗಲಿ ಸೋಶಿಯಲ್‌ ಮೀಡಿಯಾದಲ್ಲಿ ಹೊಸ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದವರೆಲ್ಲಾ, ಕಿಶನ್‌ ಅಂದರೆ ಕೃಷ್ಣ ಅನ್ನೋ ಹೆಸರು ನಿಮಗೆ ಸರಿಯಾಗಿಯೇ ಇಟ್ಟಿದ್ದಾರೆ ಎಂದು ಕಾಲೆಳೆದಿದ್ದಾರೆ. ಇನ್ಸ್‌ಟಾಗ್ರಾಮ್‌ನಲ್ಲಿ 711 ಕೆ ಫಾಲೋವರ್ಸ್‌ಗಳನ್ನು ಹೊಂದಿರುವ ಕಿಶನ್‌ ಬಿಳಗಲಿ, 1 ಮಿಲಿಯನ್‌ ಫಾಲೋವರ್ಸ್‌ ರೀಚ್‌ ಆಗುವ ನಿಟ್ಟಿನಲ್ಲಿ ಗುರಿ ಇಟ್ಟಿದ್ದಾರೆ. ಅದಕ್ಕಾಗಿ ತಮ್ಮ ಪೇಜ್‌ನಲ್ಲಿ ಡಾನ್ಸಿಂಗ್‌ ವಿಡಿಯೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಈಗಾಗಲೇ ಬಿಗ್‌ಬಾಸ್‌ ಸ್ಪರ್ಧಿಯಾಗಿ ನಮ್ರತಾ ಗೌಡ, ದೀಪಿಕಾ ದಾಸ್‌, ಅನುಪಮಾ ಗೌಡ, ನಟಿ ರಾಗಿಣಿ ದ್ವಿವೇದಿ, ಚೈತ್ರಾ ಆಚಾರ್‌, ತಾನ್ಯಾ ಹೋಪ್‌, ಕಿರಿಕ್‌ ಬೆಡಗಿ ಸಂಯುಕ್ತಾ ಸೇರಿದಂತೆ ಹಲವರೊಂದಿಗೆ ಮಾಡಿರುವ ಡಾನ್ಸ್‌ನ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

ಈಗ ಈ ಎಲ್ಲರೊಂದಿಗೆ ಮಾಡಿರುವ ವಿಡೊಯೋದ ಬಿಹೈಂಡ್‌ ದ ಸೀನ್ಸ್‌ (ಬಿಟಿಎಸ್‌) ವಿಡಿಯೋವನ್ನು ಕಿಶನ್‌ ಹಂಚಿಕೊಂಡಿದ್ದಾರೆ. ಒಂದು ದಿನದ ಹಿಂದೆ ಶೇರ್‌ ಮಾಡಿಕೊಂಡಿರುವ ಈ ವಿಡಿಯೋ ಈಗಾಗಲೇ 6.1 ಮಿಲಿಯನ್‌ ಮಂದಿ ವೀಕ್ಷಣೆ ಮಾಡಿದ್ದಾರೆ. ಇದಕ್ಕೆ ಕಾಮೆಂಟ್‌ ಮಾಡಿರುವ ಹೆಚ್ಚಿನವರೆಲ್ಲರೂ ಕಿಶನ್‌ ಅದೃಷ್ಟವನ್ನೇ ಕೊಂಡಾಡಿದ್ದಾರೆ.

Tap to resize

Latest Videos

ಇದಕ್ಕೆ ಕಾಮೆಂಟ್‌ ಮಾಡಿರುವ ನಟಿ ದೀಪಿಕಾ ದಾಸ್‌, ಕೃಷ್ಣಂ ಪ್ರಣಯ ಸಖ ಎಂದು ಬರೆದಿದ್ದಾರೆ.'ನಿಜವಾಗ್ಲೂ ಮಚ್ಚೆ ಇದೆ ಗುರು ನಿಂಗೆ..' ಎಂದು ಕಿಶನ್‌ ಅದೃಷ್ಟವನ್ನು ಮೆಚ್ಚಿದ್ದಾರೆ. 'ಸಿದ್ದರಾಮಯ್ಯ ಸರ್ ಕೊಡೋದು ನಿಜವಾದ ಭಾಗ್ಯ ಅಲ್ಲ ನಿಂದು ಕಣಯ್ಯಾ ನಿಜವಾದ ಭಾಗ್ಯ..' ಎಂದು ಇನ್ಸ್‌ಟಾ ಅಭಿಮಾನಿಯೊಬ್ಬರು ಬರೆದಿದ್ದಾರೆ.

'ಜಗತ್ತಲ್ಲಿ ನಿಜವಾದ ಶಿಖಾರಿ ಹುಡುಗ ಅಂತಿದ್ದರೆ, ಅದು ನೀನೇ..', 'ಬಡ್ಡಿ ಮಗ.. ಹುಟ್ಟುವಾಗ ಎಲ್ಲ ಕಡೆ ಮಚ್ಚೆ ಇಟ್ಕೊಂಡು ಹುಟ್ಟಿ ಬಿಟ್ಟ ಅಂತ ಕಾಣುತ್ತೆ.','ಎಲ್ಲಾದಕ್ಕೂ ಅದೃಷ್ಟ ಇರಬೇಕು..' ಎಂದು ಕಾಮೆಂಟ್‌ಗಳು ಬಂದಿವೆ. ಅದರೊಂದಿಗೆ ಶ್ರೀಲೀಲಾ ಜೊತೆಯಲ್ಲಿ ಒಂದು ವಿಡಿಯೋ ಮಾಡುವಂತೆ ಕಿಶನ್‌ಗೆ ಬೇಡಿಕೆ ಇರಿಸಿದ್ದಾರೆ.

ಪ್ರೀತಿಯ ನಾಯಿಯ ಹೆಸರಲ್ಲೇ ಲವರ್‌ ಹೆಸರು ಸೇರಿಸಿದ್ದ ಕೀರ್ತಿ ಸುರೇಶ್‌, ಯಾರಿಗೂ ಗೊತ್ತಾಗ್ಲೇ ಇಲ್ಲ..!

'ಯಾರ್ ರೀ ಹೇಳಿದ್ದು ಜಗ್ಗು ಮಹಾನ್ ಕಲಾವಿದ ಅಂತಾ ಇಲ್ಲಿ ನೋಡ್ರಿ ಜಗ್ಗು ಪ್ರೊ ನಾ..' ಎಂದು ಬಿಗ್‌ಬಾಸ್‌ ಜಗದೀಶ್‌ಗೆ ಕಿಶನ್‌ರನ್ನ ಹೋಲಿಸಿದ್ದಾರೆ. 'ಆಡು ಮುಟ್ಟದ ಸೊಪ್ಪಿಲ್ಲ.ಕಿಶನ್ ನೋಡದ ಹುಡುಗಿ ಇಲ್ಲ..' ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. 'ಕೃಷ್ಣನ ಬಗ್ಗೆ ಕೇಳಿದ್ದೆ. ಈಗ ನೋಡ್ತಾ ಇದ್ದೀನಿ..' ಎಂದು ಕಾಮೆಂಟ್‌ ಬಾಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಅಂಪೈರ್‌, ಆಕ್ಷನ್‌ ಫಿಕ್ಸಿಂಗ್‌ ಆರೋಪ ಮಾಡಿದ ಐಪಿಎಲ್‌ ಮಾಜಿ ಕಮೀಷನರ್‌!

 

click me!