ಭಾರತದಲ್ಲಿ ಆ್ಯಂಡ್ರಾಯ್ಡ್ ಫೋನ್ ಬಳಕೆ ಪ್ರಮಾಣ ಐಫೋನ್‌ಗಿಂತ ಹೆಚ್ಚು. ಇದೀಗ ಕೇಂದ್ರ ಸರ್ಕಾರ ಮಹತ್ವದ ಎಚ್ಚರಿಕೆ ನೀಡಿದೆ. ಆ್ಯಂಡ್ರಾಯ್ಡ್ ಫೋನ್ ಬಳಕೆದಾರು ಹಾಗೂ ಅವರ ಫೋನ್ ಅಪಾಯದಲ್ಲಿದೆ ಎಂದಿದೆ. ಯಾರಿಗೆಲ್ಲಾ ಈ ರಿಸ್ಕ್ ವಾರ್ನಿಂಗ್ ಅನ್ವಯವಾಗಲಿದೆ.
ನವದೆಹಲಿ(ನ.27) ವಿಶ್ವವೇ ಡಿಜಿಟಲೀಕರಣಗೊಂಡಿದೆ. ಬಹುತೇಕ ವಹಿವಾಟು, ವ್ಯವಹಾರಗಳು ಸ್ಮಾರ್ಟ್‌ಫೋನ್ ಮೂಲಕವೇ ನಡೆಯುತ್ತಿದೆ. ಇಮೇಲ್, ಹಣ ಪಾವತಿ, ಹಣ ವರ್ಗಾವಣೆ, ಉತ್ಪನ್ನಗಳ ಆರ್ಡರ್, ಖರೀದಿ, ಮಾರಾಟ ಸೇರಿದಂತೆ ಎಲ್ಲದ್ದಕ್ಕೂ ಸ್ಮಾರ್ಟ್‌ಫೋನ್ ಪ್ರಮುಖ ಆಧಾರ. ಭಾರತದಲ್ಲಿ ಆ್ಯಂಡ್ರಾಯ್ಡ್ ಫೋನ್ ಬಳಕೆದಾರರ ಸಂಖ್ಯೆ ಹೆಚ್ಚು. ಇದೀಗ ಕೇಂದ್ರ ಸರ್ಕಾರ ಆ್ಯಂಡ್ರಾಯ್ಡ್ ಫೋನ್ ಬಳಕೆದಾರರಿಗೆ ವಾರ್ನಿಂಗ್ ನೀಡಿದೆ. ಆ್ಯಂಡ್ರಾಯ್ಡ್ ಫೋನ್ ಬಳಕೆದಾರರರು ಹಾಗೂ ಫೋನ್ ಅಪಾಯದಲ್ಲಿದೆ ಎಂದು ಹೈರಿಸ್ಕ್ ವಾರ್ನಿಂಗ್ ನೀಡಿದೆ. ಕೆಲ ಆ್ಯಂಡಾಯ್ಡ್ ವರ್ಶನ್ ಫೋನ್‌ನಲ್ಲಿರುವ ಲೋಪಗಳಿಂದ ನಿಮ್ಮ ಫೋನ್ ರಹಸ್ಯವಾಗಿ ಸೈಬರ್ ವಂಚರು ಹ್ಯಾಕ್ ಮಾಡುವ ಸಾಧ್ಯತೆ ಹೆಚ್ಚಿದೆ ಎಂದಿದ.
ಭಾರತದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೈಬರ್ ಸೆಕ್ಯೂರಿಟಿ ವಿಂಗ್, ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಂ(CERT-In) ಇದೀಗ ಭಾರತದ ಆ್ಯಂಡ್ರಾಯ್ಡ್ ಫೋನ್ ಬಳಕೆದಾರರಿಗೆ ವಾರ್ನಿಂಗ್ ನೀಡಿದೆ. ಫೋನ್ ಅಸ್ಥಿರತೆಯಿಂದ ಸೈಬರ್ ವಂಚಕರು ಡೇಟಾ ಕದಿಯಲು ಸಾಧ್ಯತೆ ಇದೆ. ನಿಮ್ಮ ಫೋನ್‌ಗಳ ಡೇಟಾವನ್ನು ಸುಲಭಾಗಿ ಸೋರಿಕೆ ಮಾಡಲು ಸಾಧ್ಯವಾಗುತ್ತದೆ. ಇದರಿಂದ ಅಪಾಯ ಹೆಚ್ಚು ಎಂದು CERT-In ಹೇಳಿದೆ.
ಪಾನ್ ಕಾರ್ಡ್ 2.0 ಟಾರ್ಗೆಟ್ ಮಾಡಿದ ಸೈಬರ್ ವಂಚಕರು, ಮೋಸ ಹೋಗುವ ಮುನ್ನ ಇರಲಿ ಎಚ್ಚರ!
ಯಾವ ಆ್ಯಂಡ್ರಾಯ್ಡ್ ವರ್ಶನ್ ಫೋನ್ ಬಳಕೆದಾರರು ಅಲರ್ಟ್ ಆಗಬೇಕು?
CERT-In ಆ್ಯಂಡಾಯ್ಡ್‌ನ ಕೆಲ ವರ್ಶನ್ ಫೋನ್ ಬಳಕೆದಾರರಿಗೆ ಈ ಅಲರ್ಟ್ ನೀಡಿದೆ. ಆ್ಯಂಡ್ರಾಯ್ಡ್ ವರ್ಶನ್ 12, 12L, 13, 14 ಹಾಗೂ 15ರ ಬಳಕೆದಾರರು ಅಪಾಯ ಎದುರಿಸುತ್ತಿದ್ದಾರೆ ಎಂದಿದೆ. ಈ ಆ್ಯಂಡ್ರಾಯ್ಡ್ ವರ್ಶನ್‌ನಲ್ಲಿರುವ ಸ್ಮಾರ್ಟ್‌ಫೋನ್, ಟ್ಯಾಬ್, ಸ್ಮಾರ್ಟ್‌ವಾಚ್ ಕೂಡ ಅಪಾಯದಲ್ಲಿದೆ ಎಂದಿದೆ.
CERT-In ನೀಡಿರುವ ಎಚ್ಚರಿಕೆ ಪ್ರಕಾರ, ಸೂಚಿರುವ ಆ್ಯಂಡ್ರಾಯ್ಡ್ ವರ್ಶನ್ ಸಿಸ್ಟಮ್‌ನಲ್ಲಿರುವ ಫ್ರೇಮ್‌ವರ್ಕ್, ಗೂಗಲ್ ಪ್ಲೆ ಸಿಸ್ಟಮ್ ಅಪ್‌ಡೇಟ್, ಕರ್ನಲ್ (Kernel ) ಸೇರಿದಂತೆ ಹಲವು ಇಕೋಸಿಸ್ಟಮ್‌ಗಳಲ್ಲಿ ಕೆಲ ನ್ಯೂನತೆಗಳಿವೆ. ಇಷ್ಟೇ ಅಲ್ಲ ಪ್ರಮುಖವಾಗಿ ಕ್ವಾಲ್ಕಾಮ್, ಮೀಡಿಯಾ ಟೆಕ್ ಸೇರಿದಂತೆ ಹಾರ್ಡ್‌ವೇರ್‌ನಲ್ಲೂ ಸಮಸ್ಯೆಗಳಿವೆ. ಈ ತಾಂತ್ರಿಕ ದೋಷಗಳಿಂದ ಆ್ಯಂಡ್ರಾಯ್ಡ್ ಫೋನ್ ರಿಸ್ಕ್‌ನಲ್ಲಿದೆ ಎಂದು CERT-In ಸೂಚಿಸಿದೆ. CERT-In ಸೂಚಿಸಿದ ಆ್ಯಂಡ್ರಾಯ್ಡ್ ವರ್ಶನ್ ಫೋನ್‌ಗಳಲ್ಲಿ ಸ್ಟೋರ್ ಮಾಡಿದ ಮಾಹಿತಿಗಳನ್ನು ಸುಲಭವಾಗಿ ಸೋರಿಕೆ ಮಾಡಲು ಸಾಧ್ಯವಾಗುತ್ತದೆ. ಸೈಬರ್ ವಂಚಕರು ನಿಮಗೆ ಗೊತ್ತಿಲ್ಲದೆ ನಿಮ್ಮ ಫೋನ್ ಪ್ರವೇಶಿಸಲು ಈ ದೋಷಗಳು ಅನುಮತಿಸುತ್ತದೆ.
ಪ್ರೀತಿ ಪಾತ್ರರ ಮರಣವೇ ಟಾರ್ಗೆಟ್, ಹೊಸ ಅಂತ್ಯಸಂಸ್ಕಾರ ಸೈಬರ್ ಕ್ರೈಂನಲ್ಲಿ ಸಿಲುಕಬೇಡಿ ಎಚ್ಚರ!
ಅಪಾಯಕ್ಕೆ ಸಿಲುಕಿರು ಆ್ಯಂಡ್ರಾಯ್ಡ್ ಬಳಕೆದಾರರಿಗೆ CERT-In ಸಲಹೆ
ಮಾಲ್‌ವೇರ್, ಡೇಟಾ ಸೋರಿಕೆ ಸೇರಿದಂತೆ ಅಪಾಯಕ್ಕೆ ಸಿಲುಕಿರುವ ಆ್ಯಂಡ್ರಾಯ್ಡ್ ಕೆಲ ವರ್ಶನ್ ಬಳಕೆದಾರರು ಏನು ಮಾಡಬೇಕು ಎಂದು CERT-In ಸಲಹೆ ನೀಡಿದೆ. ಆ್ಯಂಡಾಯ್ಡ್ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್‌ಗಳಲ್ಲಿ OEM ಅಪ್‌ಡೇಟ್ ಮಾಡಲು ಸೂಚಿಸಿದೆ. ಇದು ತಕ್ಕಮಟ್ಟಿನ ರಕ್ಷಣೆ ನೀಡಲಿದೆ. ಆ್ಯಂಡಾರ್ಯ್ಡ್ ಒಂದು ಓಪನ್ ಸೋರ್ಸ್ ಪ್ಲಾಟ್‌ಫಾರ್ಮ್ ಆಗಿದೆ. ಜಗತ್ತಿನ ಅತೀ ಹೆಚ್ಚು ಜನರು ಬಳಕೆ ಮಾಡುತ್ತಾರೆ. ಹೀಗಾಗಿ ಇಲ್ಲಿ ನ್ಯೂನತೆಗಳನ್ನೇ ಟಾರ್ಗೆಟ್ ಮಾಡಿ ವಂಚಕರು ದಾಳಿ ನಡೆಸುವ ಸಾಧ್ಯೆತೆಗಳು ಹೆಚ್ಚು. ಹೀಗಾಗಿ ನಿಯಮಿತವಾಗಿ ಅಪ್‌ಡೇಟ್ ಅವಶ್ಯಕತೆ ಇದೆ ಎಂದಿದೆ. ಬಳಕೆದಾರರು ಸಿಸ್ಟಮ್ ಅಪ್‌ಡೇಟ್ ಮಾಡಿಕೊಳ್ಳುವುದು ಉತ್ತಮ ಎಂದಿದೆ.