ನಾಳೆಯಿಂದ ಸರ್ಕಾರ ನೌಕರರ ಪ್ರೊಟೆಸ್ಟ್: ಎಲ್ಲಾ ಸೇವೆಗಳು ವಿಳಂಬ ಸಾಧ್ಯತೆ

Feb 28, 2023, 1:19 PM IST

ನಾಳೆಯಿಂದ ರಾಜ್ಯದಲ್ಲಿ ಸರ್ಕಾರಿ ಸೇವೆಯಲ್ಲಿ ವಿಳಂಬವಾಗುವ ಸಾಧ್ಯತೆ ಇದೆ. 7ನೇ ವೇತನ ಆಯೋಗದ ಶಿಫಾರಸ್ಸು ಜಾರಿಗೆ ಹಾಗೂ NPS ರದ್ಧತಿಗೆ ಆಗ್ರಹಿಸಿ ಸರ್ಕಾರಿ ನೌಕರರು ಹೋರಾಟ ನಡೆಸಲಿದ್ದಾರೆ. ನಾಳೆ ಕರ್ತವ್ಯಕ್ಕೆ ಹಾಜರಾಗದೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಿದ್ದಾರೆ.  ಆಸ್ಪತ್ರೆಗಳಿಗೂ ಸರ್ಕಾರಿ ನೌಕರರ ಪ್ರತಿಭಟನೆ ಬಿಸಿ ತಟ್ಟಲಿದ್ದು, ಹೊರ ರೋಗಿ ವಿಭಾಗ ಸಂಪೂರ್ಣ ಸ್ತಬ್ಧವಾಗಲಿದೆ. OPD ಬಂದ್‌ ಮಾಡಲು ಆರೋಗ್ಯ ನೌಕರರ ಸಂಘ ನಿರ್ಧರಿಸಿದ್ದು, ಐಸಿಯು ಹಾಗೂ ಎಮರ್ಜೆನ್ಸಿ ಸೇವೆಗಳು ಮಾತ್ರ ಲಭ್ಯ ಇರಲಿವೆ. 45 ಸಾವಿರಕ್ಕೂ ಹೆಚ್ಚು ಸರ್ಕಾರಿ ವೈದ್ಯಕೀಯ ಸಿಬ್ಬದಿಗಳಿಂದ ಬಂದ್‌ ನಡೆಯಲಿದೆ.

ಕಮಲ ನಗರದಲ್ಲಿ ಅದ್ದೂರಿಯಾಗಿ ನಡೆದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ