ಅಪ್ಪ, ಅಮ್ಮನಿಲ್ಲದ ಐಶ್ವರ್ಯಾಗೆ ಪತ್ರ ಬರೆದು ಹೊಸ ಇತಿಹಾಸ ಸೃಷ್ಟಿಸಿದ ಕನ್ನಡ ಬಿಗ್ ಬಾಸ್!

By Sathish Kumar KH  |  First Published Nov 1, 2024, 5:58 PM IST

ಕನ್ನಡ ಬಿಗ್ ಬಾಸ್ ಸೀಸನ್ 11ರಲ್ಲಿ ಭಾವನಾತ್ಮಕ ಕ್ಷಣ! ತಂದೆ-ತಾಯಿಯನ್ನು ಕಳೆದುಕೊಂಡಿರುವ ನಟಿ ಐಶ್ವರ್ಯಾ ಸಿಂಧೋಗಿಗೆ ಬಿಗ್ ಬಾಸ್ ಸ್ವತಃ ಪತ್ರ ಬರೆದು,  "ನೀವು ನನ್ನ ಕುಟುಂಬ" ಎಂದು ಹೇಳಿದ್ದಾರೆ.


ಬೆಂಗಳೂರು (ನ.01): ಭಾರತದ ಹಲವು ಭಾಷೆಯ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋಗಳಲ್ಲಿಯೇ ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಮತ್ತೊಂದು ಹೊಸ ದಾಖಲೆಯನ್ನು ಬರೆದಿದೆ. ಅಪ್ಪ, ಅಮ್ಮ ಇಬ್ಬರನ್ನೂ ಕಳೆದುಕೊಂಡಿರುವ ಕಿರುತೆರೆ ನಟಿ ಐಶ್ವರ್ಯಾ ಸಿಂಧೋಗಿ ಅವರಿಗೆ ಸ್ವತಃ ಬಿಗ್ ಬಾಸ್ ಪತ್ರವನ್ನು ಬರೆದು ನೀವು ನನ್ನ ಕುಟುಂಬದವರು ಎಂದು ಹೇಳಿದ್ದಾರೆ.

ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋ ಕಳೆದ ಸೀಸನ್ 10ರಿಂದ ಹಲವು ಹೊಸ ದಾಖಲೆಗಳನ್ನು ಬರೆಯುತ್ತಿದೆ. ಕಳೆದ ಸೀಸನ್ 10ರಲ್ಲಿ ಬಿಗ್ ಬಾಸ್ ಮನೆಯಿಂದ ಸ್ಪರ್ಧಿಯೊಬ್ಬರನ್ನು ನೇರವಾಗಿ ಜೈಲಿಗೆ ಕರೆದುಕೊಂಡು ಹೋಗಲಾಗಿತ್ತು. ಇದಾದ ನಂತರ ಅವರು ಪೊಲೀಸರ ಕಸ್ಟಡಿಯಿಂದ ಬಿಡುಗಡೆಯಾದ ನಂತರ ಪುನಃ ಬಿಗ್ ಬಾಸ್ ಸ್ಪರ್ಧೆಗೆ ಮರಳಿ ಕರೆಸಿಕೊಳ್ಳಲಾಗಿತ್ತು. ಮತ್ತೊಂದೆಡೆ, ಬಿಗ್ ಬಾಸ್ ಸ್ಪರ್ಧಿಗಳ ಕಣ್ಣಿಗೆ ಹಾನಿಕಾರಕ ಕೆಮಿಕಲ್ ಹಾಕುವ ಮೂಲಕ ಆಸ್ಪತ್ರೆಗೆ ದಾಖಲಿಸಿ ಮೂರ್ನಾಲ್ಕು ದಿನಗಳ ಕಾಲ ಚಿಕಿತ್ಸೆ ಕೊಡಿಸಲಾಗಿತ್ತು. ಇನ್ನು ಕಳೆದ ಸೀಸನ್ 10ರ ಬಿಗ್ ಬಾಸ್ ರಿಯಾಲಿಟಿ ಶೋವನ್ನು ಒಂದೇ ಒಂದು ಲಕ್ಷುರಿ ಬಜೆಟ್ ಪಡೆಯದೇ ಸ್ಪರ್ಧಿಗಳು 100 ದಿನ ಪೂರ್ಣಗೊಳಿಸಿದ್ದರು. ಇದಾದ ನಂತರ ಈ ಸಾಲಿನ ಬಿಗ್ ಬಾಸ್ ಸೀಸನ್ 11ರಲ್ಲಿ ಇಬ್ಬರು ವ್ಯಕ್ತಿಗಳನ್ನು ಏಕಕಾಲಕಕ್ಕೆ ನಿಯಮ ಉಲ್ಲಂಘನೆ ಆಧಾರದಲ್ಲಿ ಬಿಗ್ ಬಾಸ್ ಮನೆಯಿಂದ ಹೊರಗೆ ಕಳಿಸಲಾಗಿದೆ. ಇದೀಗ ಮತ್ತೊಂದು ಭಾವನಾತ್ಮಕ ಇತಿಹಾಸಕ್ಕೆ ಕನ್ನಡ ಬಿಗ್ ಬಾಸ್ ಸಾಕ್ಷಿಯಾಗಿದೆ.

Tap to resize

Latest Videos

undefined

ನಟಿ ಐಶ್ವರ್ಯಾಗೆ ಪತ್ರ ಬರೆಯಲು ಕುಟುಂಬದವರೇ ಇಲ್ಲ: ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಪ್ರತಿ ಸೀಸನ್‌ನಲ್ಲಿಯೂ ಸ್ಪರ್ಧಿಗಳಿಗೆ ಒಂದು ತಿಂಗಳಾದ ನಂತರ ಅವರ ಮನೆಗಳಿಂದ ಪತ್ರಗಳನ್ನು ತರಿಸಿಕೊಟ್ಟು ಭಾವನಾತ್ಮಕವಾಗಿ ಅವರನ್ನು ಗಟ್ಟಿಗೊಳಿಸುವ ಕಾರ್ಯ ಮಾಡಲಾಗುತ್ತದೆ. ಅದರಂತೆ, ಹೊರ ಜಗತ್ತಿನ ಯಾವುದೇ ಸಂಪರ್ಕ ಇಲ್ಲದೇ ಮನೆಯವರನ್ನು ಬಿಟ್ಟು ಬಂದು ಬಿಗ್ ಬಾಸ್ ಮನೆಯ ಗೋಡೆಯೊಳಗಿರುತ್ತಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಬಿಗ್ ಬಾಸ್ ಮನೆಯೊಳಗೆ ಒಂದು ಟಾಸ್ಕ್‌ ನೀಡಿ ಅದರಲ್ಲಿ ಗೆದ್ದ ಸ್ಪರ್ಧಿಗಳಿಗೆ ಮನೆಯವರಿಂದ ಬರೆಯಲಾದ ಪತ್ರಗಳನ್ನು ಕೊಡಲಾಗುತ್ತದೆ. ಆದರೆ, ಇದೀಗ ಬಿಗ್ ಬಾಸ್ ಮನೆಯೊಳಗೆ ಬಂದಿರುವ ನಟಿ ಐಶ್ವರ್ಯಾ ಸಿಂಧೋಗಿ ಅವರು ಇತ್ತೀಚೆಗೆ ತಂದೆ, ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದಾರೆ. ಹೀಗಾಗಿ, ಅವರಿಗೆ ಪತ್ರ ಬರೆಯುವಂತಹ ಆತ್ಮೀಯರು, ಸಂಬಂಧಿಕರು ಇಲ್ಲ. ಅವರಿಗೆ ಸ್ನೇಹುತರಷ್ಟೇ ಇದ್ದಾರೆ.

ಇದನ್ನೂ ಓದಿ: ನನ್ನ ಕ್ಯಾರೆಕ್ಟರ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ರೆ ನಾನು ಮೆಟ್ಟಲ್ಲಿ ಹೊಡಿತೀನಿ: ಚೈತ್ರಾ ಕುಂದಾಪುರ

ಐಶ್ವರ್ಯಾಗೆ ಪತ್ರ ಬಂದಿಲ್ಲ ಎಂದ ಶಿಶಿರ್:
ಬಿಗ್ ಬಾಸ್ ಮನೆಯಲ್ಲಿನ ಬಹುತೇಕ ಸ್ಪರ್ಧಿಗಳಿಗೆ ಅವರವರ ಮನೆಗಳಿಂದ ಪತ್ರಗಳನ್ನು ತರಿಸಿಕೊಡಲಾಗಿದೆ. ಇದನ್ನು ಓದಿದ ಸ್ಪರ್ಧಿಗಳು ಸಂತಸಗೊಂಡಿದ್ದಾರೆ. ಆದರೆ, ಕಿರುತೆರೆ ನಟಿ ಐಶ್ವರ್ಯಾ ಸಿಂಧೋಗಿ ಅವರಿಗೆ ಪತ್ರ ಬರೆಯಲು ಕುಟುಂಬದವರಿಲ್ಲದ ಕಾರಣ ಯಾವುದೇ ಪತ್ರಗಳು ಕೂಡ ಬಂದಿಲ್ಲ. ಕೊನೆಗೆ, ಎಲ್ಲರಿಗೂ ಪತ್ರಗಳು ತಲುಪಿದ ನಂತರ ಶಿಶಿರ್ ಅವರು ಐಶ್ವರ್ಯ ಸಿಂಧೋಗಿ ಬಿಟ್ಟು ಎಲ್ಲರಿಗೂ ಪತ್ರ ಬಂದಿದ್ದು, ಅವುಗಳನ್ನು ತಲುಪಿಸಲಾಗಿದೆ ಎಂದು ಹೇಳುತ್ತಾರೆ. ಆಗ ಬಿಗ್ ಬಾಸ್ ಮನೆಯಲ್ಲಿ ಐಶ್ವರ್ಯಾ ಕಣ್ಣೀರಿಡುತ್ತಾ ಕುಟುಂಬವನ್ನು ಕಳೆದುಕೊಂಡ ನೋವಿನಲ್ಲಿರುತ್ತಾಳೆ. ಎಲ್ಲರೂ ಸಮಾಧಾನ ಮಾಡುತ್ತಿರುತ್ತಾರೆ. ಆಗ ಬಿಗ್ ಬಾಸ್ ಮನೆಯಲ್ಲಿ ಬಜರ್ ಸೌಂಡ್ ಬಂದ ನಂತರ ಸ್ಟೋರ್ ರೂಮಿನಿಂದ ಒಂದು ಪತ್ರ ಬರುತ್ತದೆ. ಅದು ಐಶ್ವರ್ಯ ಅವರಿಗೆ ಬಂದ ಪತ್ರವಾಗಿರುತ್ತದೆ. ಅದನ್ನು ಸ್ವತಃ ಬಿಗ್ ಬಾಸ್ ಐಶ್ವರ್ಯ ಅವರಿಗೆ ಬರೆದಿರುತ್ತಾರೆ. 

ಇದನ್ನೂ ಓದಿ:  ಯಶ್ ಕನ್ನಡ ಪ್ರೇಮಕ್ಕೆ ಫ್ಯಾನ್ಸ್ ಫಿದಾ; ಹೊಸ ಕಾರಿನ ಮೇಲೆ ಕನ್ನಡದಲ್ಲೇ ಸಹಿ ಹಾಕಿದ ರಾಕಿಂಗ್ ಸ್ಟಾರ್!

ನೀವು ನನ್ನ ಕುಟುಂಬವೆಂದ ಬಿಗ್ ಬಾಸ್:
ಈ ಪತ್ರ ಐಶ್ವರ್ಯ ಕೈಗೆ ಸೇರಿದ ನಂತರ ಧ್ವನಿಯ ಮೂಲಕ ಮಾತನಾಡುವ ಬಿಗ್ ಬಾಸ್, ಪ್ರೀತಿಯ ಐಶ್ವರ್ಯ ನನ್ನದೊಂದು ಪತ್ರ. ನೀವು ನನ್ನ ಮನೆಗೆ ಆಗಮಿಸಿದ ಕ್ಷಣದಿಂದ ನೀವು ನನ್ನ ಕುಟುಂಬದವರಾಗಿದ್ದೀರಿ. ನಾನಿರುವೆ ನಿಮ್ಮೊಂದಿಗೆ, ಈ ಮನೆಯ ಸದಸ್ಯರಿದ್ದಾರೆ ನಿಮ್ಮೊಂದಿಗೆ. ಇಂತಿ ನಿಮ್ಮ ಬಿಗ್ ಬಾಸ್... ಎಂದು ಹೇಳುತ್ತಾರೆ. ಈ ಮೂಲಕ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯೊಬ್ಬರಿಗೆ ನೀವು ನನ್ನ ಕುಟುಂಬ ಎಂದು ಹೇಳುವ ಮೂಲಕ ಕನ್ನಡ ಬಿಗ್‌ ಬಾಸ್ ಹೊಸದೊಂದು ಭಾವನಾತ್ಮಕ ಹೊಸ ಇತಿಹಾಸವನ್ನು ಸೃಷ್ಟಿಸಿದೆ.

click me!