ಸಿದ್ದು ಸರ್ಕಾರದ ಕುಮ್ಮಕ್ಕಿನಿಂದ ವಕ್ಫ್‌ಗೆ ರೈತರ ಜಮೀನು ಸೇರ್ಪಡೆ: ಭಗವಂತ್ ಖೂಬಾ ಗರಂ

By Girish Goudar  |  First Published Nov 1, 2024, 5:38 PM IST

ಸಿಎಂ, ಎಂ.ಬಿ. ಪಾಟೀಲ್ ನೋಟಿಸ್ ವಾಪಸ್ ಪಡೆಯುತ್ತಿವೆ ಎಂದು ಹೇಳಿದ್ದಾರೆ. ಮಠ, ಮಂದಿರದ ಆಸ್ತಿ ವಕ್ಫ್‌ನಿಂದ ವಾಪಸ್ ಪಡೆಯೋ ವರೆಗೆ ಬಿಡಲ್ಲ. ವಕ್ಫ್ ಮಂಡಳಿ ತಿದ್ದುಪಡಿ ವಿದೆಯೇಕ ಮಂಡನೆಯನ್ನು ಪ್ರಧಾನಿ ಮಾಡಿದ್ದಾರೆ: ಮಾಜಿ ಕೇಂದ್ರ ಸಚಿವ ಭಗವಂತ್ ಖೂಬಾ 


ಬೀದರ್(ನ.01):  ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದ ವಕ್ಫ್‌ಗೆ ರೈತರ ಜಮೀನುಗಳು ಸೇರ್ಪಡೆಯಾಗಿದೆ. ಮುಸ್ಲಿಂರ ಓಲೈಕೆಯ ರಾಜಕಾರಣದ ಹುನ್ನಾರ ನಡೆಯುತ್ತಿದೆ. ಮಠ, ಮಂದಿರ, ಸ್ಮಶಾನ ಭೂಮಿ ವಕ್ಫ್‌ಗೆ ಸೇರಿಸುತ್ತಿದ್ದಾರೆ. ಸಿದ್ರಾಮಣ್ಣನ ಸರ್ಕಾರಕ್ಕೆ ಇದಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಈ ಕುಮ್ಮಕಿನ ವಿರುದ್ಧ 4 ರಂದು ನಾವು ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ಕಾಂಗ್ರೆಸ್ ವಿರುದ್ಧ ಮಾಜಿ ಕೇಂದ್ರ ಸಚಿವ ಭಗವಂತ್ ಖೂಬಾ ವಾಗ್ದಾಳಿ ನಡೆಸಿದ್ದಾರೆ. 

ರಾಜ್ಯದಲ್ಲಿ ಮಠ, ಮಂದಿರ ಜಾಗದ ಮೇಲೆ ವಕ್ಫ ಬೋರ್ಡ್ ಕಣ್ಣು ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಶುಕ್ರವಾರ) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಕೇಂದ್ರ ಸಚಿವ ಭಗವಂತ್ ಖೂಬಾ ಅವರು, ಸಿಎಂ, ಎಂ.ಬಿ. ಪಾಟೀಲ್ ನೋಟಿಸ್ ವಾಪಸ್ ಪಡೆಯುತ್ತಿವೆ ಎಂದು ಹೇಳಿದ್ದಾರೆ. ಮಠ, ಮಂದಿರದ ಆಸ್ತಿ ವಕ್ಫ್‌ನಿಂದ ವಾಪಸ್ ಪಡೆಯೋ ವರೆಗೆ ಬಿಡಲ್ಲ. ವಕ್ಫ್ ಮಂಡಳಿ ತಿದ್ದುಪಡಿ ವಿದೆಯೇಕ ಮಂಡನೆಯನ್ನು ಪ್ರಧಾನಿ ಮಾಡಿದ್ದಾರೆ. ಹಿಂದೂಗಳ ಹಿತಕ್ಕಾಗಿ ಬಿಲ್ ತಂದಾಗ ವಿರೋಧ ಮಾಡುವುದು ಕಾಂಗ್ರೆಸ್ ನ ಡಿಎನ್ಎ ನಲ್ಲಿ ಇದೆ ಎಂದು ಕಿಡಿ ಕಾರಿದ್ದಾರೆ. 

Latest Videos

undefined

ಜಮೀರ್ ಅನ್ನೋ ಮೂರ್ಖನಿಂದ ನ್ಯಾಯಾಂಗ ನಿಂದನೆ; ಮಾಜಿ ಸಚಿವ ಭಗವಂತ ಖೂಬಾ ಕಿಡಿ

ಸಾರ್ವಜನಿಕ ವಲಯದಲ್ಲಿ ಈ ವಿಧೇಯಕದ ಬಗ್ಗೆ ಅಭಿಪ್ರಾಯ ಪಡೆಯಲಾಗುತ್ತಿದೆ. ಇವತ್ತಿನ ವಕ್ಫ್‌ ಬೋರ್ಡ್ ನ ನ್ಯಾಯಯುತವಾಗಿ ತಿದ್ದುಪಡಿ ಮಾಡುತ್ತೇವೆ.  ಜಿಲ್ಲೆಯ ಉಸ್ತುವಾರಿ ಮಂತ್ರಿ ಖಂಡ್ರೆ ಇದ್ದು 2000 ಸಾವಿರ ಎಕರೆ ವಕ್ಫ್‌ಗೆ ಸೇರಿದ್ರೂ ತುಟಿ ಬಿಚ್ಚಲ್ಲ. ಇಂಥಹ ಗಂಭೀರ ವಿಷಯಕ್ಕೆ ಸಚಿವ ಖಂಡ್ರೆ ಚಕಾರ ಎತ್ತುತ್ತಿಲ್ಲಾ. ಈ ರೀತಿ ರಾಜಕಾರಣ ಮಾಡುವ ಖಂಡ್ರೆಗೆ ನಾಚಿಗೆಯಾಗಬೇಕು ಎಂದು ಹರಿಹಾಯ್ದಿದ್ದಾರೆ. 

click me!