5. ಸಾಯಿ ಸುದರ್ಶನ್:
23 ವರ್ಷದ ಯುವ ಎಡಗೈ ಬ್ಯಾಟರ್ ಸಾಯಿ ಸುದರ್ಶನ್ ಅವರನ್ನು ಕಳೆದ ಆವೃತ್ತಿಯಲ್ಲಿ 20 ಲಕ್ಷ ರುಪಾಯಿಗೆ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿದಿದ್ದರು. ಈಗ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು 8.5 ಕೋಟಿ ರುಪಾಯಿ ನೀಡಿ ಸಾಯಿ ಸುದರ್ಶನ್ ಅವರನ್ನು ರೀಟೈನ್ ಮಾಡಿಕೊಂಡಿದೆ. ಈ ಮೂಲಕ ತಮಿಳುನಾಡು ಮೂಲದ ಕ್ರಿಕೆಟಿಗನ ಐಪಿಎಲ್ ಸಂಬಳ 4,150% ಹೆಚ್ಚಳವಾಗಿದೆ.