ಲಾಯರ್​ ಜಗದೀಶ್​ ಮಾತಿಗೆ ನಾಚಿಕೊಂಡ ರಕ್ಷಿತಾ: 'ನಾಟಿ ಆ್ಯಟ್​ ಫಾರ್ಟಿ ಸರ್​ ನೀವು' ಎಂದ ನಟಿ!

By Suchethana D  |  First Published Nov 1, 2024, 5:42 PM IST

ಡಾನ್ಸ್​ ಕರ್ನಾಟಕ ಡಾನ್ಸ್​ ವೇದಿಕೆಗೆ ಆಗಮಿಸಿ ಭರ್ಜರಿ ಸ್ಟೆಪ್​ ಹಾಕಿದ್ದಾರೆ ಲಾಯರ್​ ಜಗದೀಶ್​. ಈ ವೇಳೆ ನಟಿ ರಕ್ಷಿತಾ ಅವರು ಜಗದೀಶ್​ ಅವರಿಗೆ ತಮಾಷೆ ಮಾಡಿದ್ದೇನು?
 


ಬಿಗ್​ಬಾಸ್​ ಮನೆಯಲ್ಲಿ ಹವಾ ಕ್ರಿಯೇಟ್​ ಮಾಡಿದ್ದು ಲಾಯರ್ ಜಗದೀಶ್. ಅವರು ಹೊರಕ್ಕೆ ಬಂದಿರುವುದಕ್ಕೆ ಇದಾಗಲೇ ಹಲವರಿಗೆ ಸಿಕ್ಕಾಪಟ್ಟೆ ಬೇಸರವಾಗಿದೆ.  ಲಾಯರ್​ಗೆ ಗೇಟ್ ಪಾಸ್ ಕೊಟ್ಟಿದ್ದನ್ನ ನೋಡಿ ಈ ಸಾರಿಯ ಬಿಗ್ ಬಾಸ್ ಫಿನಿಶ್ ಅಂತಿದ್ದಾರೆ ಫ್ಯಾನ್ಸ್​.   ಒಬ್ಬರಾದ್ಮೇಲೆ ಒಬ್ಬರ ಮೇಲೆ ಎಗರಾಡ್ತಿರುವ ಅವರು ಕರ್ನಾಟಕದ ಕ್ರಶ್ ಎಂಬ ಪಟ್ಟ ಪಡೆದಿದ್ದಾರೆ. ಬಿಗ್​ಬಾಸ್​ ಮನೆಯಲ್ಲಿ ಇನ್ನೋರ್ವ ಸ್ಪರ್ಧಿ ಹಂಸಾ ಜೊತೆ ಇವರ ರೊಮ್ಯಾನ್ಸ್​ ಸಕತ್​ ಸದ್ದು ಮಾಡಿತ್ತು. ಆದರೆ ಇದೇ ವೇಳೆ ಅವರ ಪತ್ನಿ ಸೌಮ್ಯಾ ಮಾತ್ರ ಪತಿಯ ಕುರಿತು ಬೇರೆದೇ ಹೇಳಿಕೆ ನೀಡಿದ್ದರು.  ಜಗದೀಶ್ ರೋಮ್ಯಾಂಟಿಕ್ ಅಲ್ಲ. ಆದ್ರೆ ಬಿಗ್ ಬಾಸ್ ಮನೆಯಲ್ಲಿ ಅವರ ಡಾನ್ಸ್ ನೋಡಿ ಖುಷಿಯಾಗಿದ್ದೇನೆ. ಮನೆಯಲ್ಲಿ ನಾನು ಡಾನ್ಸ್ ಮಾಡ್ತೇನೆ. ಅವರು ನಗ್ತಾ ಕುಳಿತಿರ್ತಾರೆ. ಸ್ವಲ್ಪ ನಾಚಿಕೆ ಸ್ವಭಾವ ಅವರದ್ದು ಎಂದಿದ್ದರು. ಪತ್ನಿ ಏನೇ ಹೇಳಿದರೂ ಜಗದೀಶ್​ ಅವರು ರೊಮ್ಯಾಂಟಿಕ್ ಮ್ಯಾನ್​ ಎಂದೇ ಬಿಗ್​ಬಾಸ್​ನಿಂದ ಫೇಮಸ್​ ಆದವರು.

ಇದೀಗ ಅವರಿಗೆ ಬಿಗ್​ಬಾಸ್​ನಿಂದ ಬಂದ ಮೇಲೆ ಸಹಜವಾಗಿ ಡಿಮ್ಯಾಂಡ್​ ಹೆಚ್ಚಾಗಿದೆ. ಡಾನ್ಸ್ ಕರ್ನಾಟಕ ಡಾನ್ಸ್​ ವೇದಿಕೆಗೆ ಅವರು ಆಗಮಿಸಿದ್ದಾರೆ. ಬಿಗ್​ಬಾಸ್​ನಿಂದ ಬರುವ ಸ್ಪರ್ಧಿಗಳಿಗೆ ಸಾಮಾನ್ಯವಾಗಿ ಎಲ್ಲಾ ರಿಯಾಲಿಟಿ ಷೋಗಳಲ್ಲಿ ಅವಕಾಶ ನೀಡುವುದು ಹಿಂದಿನಿಂದಲೂ ನಡೆದು ಬಂದಿದೆ. ಅದೇ ರೀತಿ ಡಿಕೆಡಿಯಲ್ಲಿ ಜಗದೀಶ್​ ಅವರು ಡಾನ್ಸ್​ ಮಾಡಿದ್ದಾರೆ. ಇದೇ ವೇಳೆ ತೀರ್ಪುಗಾರರಾಗಿರುವ ನಟಿ ರಕ್ಷಿತಾ ಅವರನ್ನು ನೋಡಿ, ಏನೋ ಹೇಳೋಕೆ ಬಂದೆ. ರಕ್ಷಿತಾ ಅವರನ್ನು ನೋಡಿ ಎಲ್ಲಾ ಮರೆತು ಹೋಗಿ ಬಿಟ್ಟೆ ಎಂದಿದ್ದಾರೆ. ಅದಕ್ಕೆ ರಕ್ಷಿತಾ ಅವರು ನಾಚಿಕೊಂಡಿದ್ದಾರೆ. ಬಳಿಕ ರಕ್ಷಿತಾ ನೀವು ನಾಟಿ ಆ್ಯಟ್​ ಫಾರ್ಟಿ (naughty at forty) ಸರ್​ ಎಂದು ತಮಾಷೆ ಮಾಡಿದ್ದಾರೆ. 

Tap to resize

Latest Videos

undefined

ಬಿಗ್​ಬಾಸ್​ನಿಂದ ಸಿಕ್ಕಿರೋ ಸಂಭಾವನೆ ಎಷ್ಟು ಎಂದು ಪ್ರಶ್ನಿಸಿದ್ರೆ ಲಾಯರ್​ ಜಗದೀಶ್​ ಏನೆಲ್ಲಾ ಹೇಳಿದ್ರು ಕೇಳಿ...

ಇದೇ ವೇಳೆ ಡಾನ್ಸ್​ ಕರ್ನಾಟಕ ಡಾನ್ಸ್ ವೇದಿಕೆ ಮೇಲೆ ಸಕತ್​ ಸ್ಟೆಪ್​ ಹಾಕಿದ್ದಾರೆ ಜಗ್ಗು ದಾದಾ. ಜೊತೆಗೆ ಒಂದಿಷ್ಟು ಡೈಲಾಗ್​ಗಳನ್ನು ಹೊಡೆದಿದ್ದಾರೆ. ಅದೇ ಇನ್ನೊಂದೆಡೆ ಜಗದೀಶ್​ ಅವರನ್ನು ವಾಪಸ್​ ಬಿಗ್​ಬಾಸ್​ಗೆ ಕರೆಸಿಕೊಳ್ಳಬೇಕು ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಇದು ಸಾಧ್ಯವೇ ಇಲ್ಲ ಎಂದು ಖುದ್ದು ದರ್ಶನ್​ ಅವರೇ ಹೇಳಿದ್ದಾರೆ. ಈ ಹಿಂದೆ ಜಗದೀಶ್​ ಅವರೂ ನೇರ ಪ್ರಸಾರದಲ್ಲಿ ಬಂದು ವಾಪಸ್​ ಹೋಗಲು ತಮಗೆ ಅವಕಾಶ ಇಲ್ಲ ಎಂದು ನೋವು ತೋಡಿಕೊಂಡಿದ್ದರು.  ಒಂದು ಚಿಕ್ಕ ಪದದಿಂದ ಬಿಗ್​ಬಾಸ್​ನಿಂದ ಹೊರಕ್ಕೆ ಕಳುಹಿಸಲಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದ ಅವರು, ಇನ್ನೂ ನನಗೆ ಅರ್ಥವಾಗದ ವಿಷಯ ಏನೆಂದರೆ,  ಚೈತ್ರಾ ಕುಂದಾಪುರ, ತುಕಾಲಿ ಮಾನಸ, ಮಂಜಣ್ಣ ಇವರೆಲ್ಲರೂ ನನ್ನ ಹಾಗೆಯೇ ಕೆಲವು ಸಲ ಕೆಟ್ಟ ಪದ ಪ್ರಯೋಗ ಮಾಡಿದ್ದಾರೆ. ಆದರೆ ನನ್ನೊಬ್ಬನನ್ನೇ ಯಾಕೆ ಹೊರಗೆ ಕಳುಹಿಸಿದ್ದೋ ಗೊತ್ತಾಗುತ್ತಿಲ್ಲ ಎಂದು ಬೇಸರಿಸಿದ್ದಾರೆ. ಇದೇ ವೇಳೆ ನೀವು ಮತ್ತೆ ಹೋಗ್ತೀರಾ ಎಂದು ಹಲವರು ಪ್ರಶ್ನಿಸುತ್ತಾರೆ. ಆದರೆ ಇದು ಸಾಧ್ಯವಿಲ್ಲ. ಏಕೆಂದ್ರೆ ಇದಾಗಲೇ ಸುದೀಪ್​ ಅವರು, ಬಿಗ್​ಬಾಸ್​ಗೆ ಜಗದೀಶ್​ ಮುಗಿದು ಹೋಗಿರೋ ಅಧ್ಯಾಯ ಎಂದಿದ್ದಾರೆ. ಆದ್ದರಿಂದ ಮತ್ತೆ ವಾಪಸ್​ ಹೋಗುವ ಯಾವುದೇ ಚಾನ್ಸ್​ ಇಲ್ಲ ಎನ್ನುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದರು. 

ಬಳಿಕ ಅವರಿಗೆ ಸಂಭಾವನೆ ಬಗ್ಗೆ ಪ್ರಶ್ನೆ ಕೇಳಿದ್ರೆ, ನುಣುಚಿಕೊಂಡಿದ್ದಾರೆ. 'ನನಗೆ ಸಿಕ್ಕಿರುವುದು ಪ್ರೈಸ್​ಲೆಸ್​ ಪ್ರೀತಿ ಸಿಕ್ಕಿದೆ. ಹಣದಲ್ಲಿ ಅದನ್ನು ಅಳೆಯಲು ಹೋಗುವುದಿಲ್ಲ. ಸಾಮಾನ್ಯ ಹೋರಾಟಗಾರ ಲಾಯರ್​ ಜಗದೀಶ್​ಗೆ ಕರ್ನಾಟಕದ ಜನತೆ ಒಬ್ಬ ಹೀರೋ ಮಾಡಿಬಿಟ್ಟಿದ್ದಾರೆ. ಇದಕ್ಕಿಂತ ದೊಡ್ಡ ಪ್ರೈಜ್​ ನನಗೆ ಏನು ಬೇಕಾಗಿದೆ? ಸಾವಿರ ಕೋಟಿ ಕೊಟ್ಟರು ಕೂಡ ಆ ಬೆಲೆ ಸಿಗುವುದಿಲ್ಲ. ಹಾಗಾಗಿ ತುಂಬಾ ದೊಡ್ಡ ಸಂಪಾದನೆಯನ್ನು ನಾನು ಮಾಡಿದ್ದೇನೆ. ತುಂಬಾ ದೊಡ್ಡ ಕಲೆಯನ್ನು ನಾನು ಕಲಿತಿದ್ದೇನೆ. ಸಣ್ಣ ಪುಟ್ಟ ಬೇಸರ ಇರಬಹುದು. ಆದರೆ ಆ ಮನೆ ಬಿಟ್ಟು ಬರುವಾಗ ನನಗೆ ತುಂಬಾ ಬೇಸರವಾಯಿತು. ಅವತ್ತು ನೈಟ್​ ಮಲಗಿಕೊಂಡಿದ್ದೆ. ಬೆಳಿಗ್ಗೆ ಎದ್ದಾಗ ಕ್ಯಾಮೆರಾ ಎಲ್ಲಿ ಇದೆ ಎಂದು ಹುಡುಕುತ್ತಾ ಇದ್ದೆ. ಅಷ್ಟು ಬಿಗ್​ಬಾಸ್​ ಅನ್ನು ಮಿಸ್​ ಮಾಡಿಕೊಳ್ತಿದ್ದೇನೆ. ನನಗೆ ಬಿಗ್​ಬಾಸ್​ ತುಂಬಾ ದೊಡ್ಡ ಉಡುಗೊರೆಯನ್ನು ಕೊಟ್ಟಿದೆ. ನಾನು ಯಾವತ್ತು ಕೂಡ ಅದನ್ನು ಕಳೆದುಕೊಳ್ಳಲು ಆಗುವುದಿಲ್ಲ. I thank Bigg Boss' ಎಂದು ಹೇಳಿ, ಸಂಭಾವನೆಯ ವಿಷಯವನ್ನು ಗೋಪ್ಯವಾಗಿಟ್ಟಿದ್ದಾರೆ. 

ಬಿಗ್​ಬಾಸ್​​ಗೆ ಪುನಃ ಹೋಗ್ತಾರಾ ಜಗದೀಶ್? ನೇರ ಪ್ರಸಾರದಲ್ಲಿ ದೊಡ್ಮನೆಯ ಗುಟ್ಟು ಬಿಚ್ಚಿಟ್ಟ ಲಾಯರ್​ ಹೇಳಿದ್ದೇನು?

click me!