ಮಗಳ ಜೊತೆ ಮೊದಲ ದೀಪಾವಳಿ ಆಚರಿಸುತ್ತಿರುವ 'ಲವ್ ಮಾಕ್ಟೇಲ್' ಜೋಡಿ; ಫೋಟೋ ವೈರಲ್!

Published : Nov 01, 2024, 05:41 PM IST

ದೀಪಾವಳಿ ಸಂಭ್ರಮ ಡಬಲ್ ಮಾಡಿದ ಪರಿ. ಲವ್ ಮಾಕ್ಟೇಲ್‌ ಜೋಡಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್..  

PREV
16
ಮಗಳ ಜೊತೆ ಮೊದಲ ದೀಪಾವಳಿ ಆಚರಿಸುತ್ತಿರುವ 'ಲವ್ ಮಾಕ್ಟೇಲ್' ಜೋಡಿ; ಫೋಟೋ ವೈರಲ್!

ಕನ್ನಡ ಚಿತ್ರರಂಗದ ಸೆಲೆಬ್ರಿಟಿ ಕಪಲ್ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಈ ವರ್ಷ ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ಸಂಭ್ರಮ ಡಬಲ್ ಆಗಲು ಮಗಳು ಕಾರಣ.

26

ಹೌದು! ಮಿಲನಾ ನಾಗರಾಜ್‌ ಕೆಲವು ತಿಂಗಳ ಹಿಂದೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗಳಿಗೆ ಪರಿ ಎಂದು ನಾಮಕರಣ ಮಾಡಿ ಮುಖವನ್ನು ರಿವೀಲ್ ಮಾಡಿದ್ದಾರೆ.

36

ಮಗಳು ಆಗಮಿಸಿದ ನಂತರ ಆಚರಿಸುತ್ತಿರುವ ಮೊದಲ ಹಬ್ಬವೇ ದೀಪಾವಳಿ ಆಗಿರುವ ಕಾರಣ ಮನೆಯಲ್ಲಿ ಸಂಭ್ರಮ ಡಬಲ್ ಆಗಿದೆ. ಮಗಳ ಜೊತೆ ಫೋಟೋ ಹಂಚಿಕೊಂಡಿದ್ದಾರೆ.

46

ಪಿಂಕ್ ಬಣ್ಣದ ಡಿಸೈನರ್ ಸೀರೆಯಲ್ಲಿ ಮಿಲನಾ ನಾಗರಾಜ್‌ ಕಾಣಿಸಿಕೊಂಡಿದ್ದಾರೆ, ಸಿಲ್ವರ್ ಫಾರ್ಮಲ್ ಔಟ್‌ಫಿಟ್‌ನಲ್ಲಿ ಕೃಷ್ಣ ಮಿಂಚಿದ್ದಾರೆ. ಪರಿ ಪಿಂಕ್‌ ಉಡುಪು ಧರಿಸಿದ್ದಾಳೆ.

56

'Happy Deepawali to all of you from us. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ' ಎಂದು ಮಿಲನಾ ನಾಗರಾಜ್ ಬರೆದುಕೊಂಡಿದ್ದಾರೆ. 

66

ಮಗಳು ಹುಟ್ಟಿ 5 ತಿಂಗಳ ನಂತರ ಲವ್ ಮಾಕ್ಟೇಲ್ 3 ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗುವುದಾಗಿ ಮಿಲನಾ ನಾಗರಾಜ್‌ ಈ ಹಿಂದೆ ಹೇಳಿದ್ದರು. ಅಲ್ಲದೆ ಲವ್ ಮಾಕ್ಟೇಲ್ ಸೀಕ್ವೆಲ್‌ನಲ್ಲಿ ಇರುವ ಕಲಾವಿದರು ಒಟ್ಟಿಗೆ ಇರುವ ಫೋಟೋ ವೈರಲ್ ಆಗಿತ್ತು. 

Read more Photos on
click me!

Recommended Stories