ಕೆಂಪೇಗೌಡರ ಪ್ರತಿಮೆಗೆ ಎಲ್ಲರ ಮೆಚ್ಚುಗೆ: ಶಿಲ್ಪಿ ಅನಿಲ್‌ ಸುತಾರ ಹೇಳುವುದೇನು?

Nov 11, 2022, 3:46 PM IST

108 ಅಡಿ ಎತ್ತರದ ಇಂಥಹ ಬಹುದೊಡ್ಡ ಕಲಾಕೃತಿ ನಿರ್ಮಾಣದ ಹಿಂದಿರುವುದು ಪದ್ಮವಿಭೂಷಣ ರಾಮ ಸುತಾರ್‌ ಆರ್ಟ್ಸ್‌ ಆ್ಯಂಡ್‌ ಕ್ರಿಯೇಷನ್ಸ್‌ ಸಂಸ್ಥೆ. ಪ್ರತಿಮೆಯ ವಿನ್ಯಾಸದ ಹಿಂದೆ ನಿಂತವರು ರಾಮಸುತಾರ್‌ ಅವರ ಪುತ್ರ ಅನಿಲ್‌ ಸುತಾರ್‌. ಗುಜರಾತಿನ ಪಟೇಲ್‌ ಪ್ರತಿಮೆ ನಿರ್ಮಿಸಿದ ಖ್ಯಾತಿ ಇವರಿಗಿದ್ದು, 14 ತಿಂಗಳಲ್ಲಿ ಕೆಂಪೇಗೌಡದ ಪ್ರತಿಮೆ ನಿರ್ಮಾಣ ಮಾಡಿದ್ದಾರೆ. ಈ ಕುರಿತು ಅವರು ಮಾತನಾಡಿದ್ದು, ಮೊದಲಿಗೆ ಸಿಎಂ ಬೊಮ್ಮಾಯಿ ಕರೆ ಮಾಡಿ ಪ್ರತಿಮೆ ಬೇಕು ಎಂದು ಹೇಳಿದರು. ಇದು ಎರಡನೇ ಅತಿ ದೋಡ್ಡ ಪ್ರತಿಮೆಯಾಗಿದೆ ಎಂದು ತಿಳಿಸಿದರು. ಮೊದಲಿಗೆ ಒಂದು ಮೊಡೆಲ್‌ ಅನ್ನು ಸಿದ್ಧ ಮಾಡಿ ಅವರಿಗೆ ತೋರಿಸಿದೆವು. ನಂತರ ಕೊನೆಯದಾಗಿ ಪ್ರತಿಮೆಗೆ ಡಿಸೈನ್‌ ಮಾಡಿದೆವು. ಬಟ್ಟೆ ಶಾಲ್‌ ಶೂ ಎಲ್ಲವನ್ನು ಡಿಸೈನ್‌ ಮಾಡಿದೆವು. ಈ ಕಾರ್ಯಕ್ಕೆ ಸಿಎಂ ಬೊಮ್ಮಾಯಿ, ಸಚಿವ ಅಶ್ವತ್‌ ನಾರಾಯಣ್‌  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಅನಿಲ್‌ ಸುತಾರ್ ತಿಳಿಸಿದರು.

Gyanvapi Case: ಇಂದು 3 ಕೋರ್ಟ್‌ಗಳಲ್ಲಿ ಜ್ಞಾನವಾಪಿಯ 4 ಕೇಸ್‌ ವಿಚಾರಣೆ!