ಕೋಲಾರ: ಬೋರ್‌ವೆಲ್‌ಗಳಲ್ಲಿ ಕಲುಷಿತ ನೀರು ಸೇರಿರುವ ಅನುಮಾನ, ನಿವಾಸಿಗಳಿಗೆ ಆತಂಕ!

Oct 14, 2021, 6:35 PM IST

ಕೋಲಾರ (ಅ. 14): ಬರದ ನಾಡು ಎಂದೇ ಹೆಸರು ಪಡೆದ ಕೋಲಾರಕ್ಕೆ ಕೆಸಿ ವ್ಯಾಲಿ ಜೀವನಾಡಿಯಾಗಿದೆ. ಇಲ್ಲಿನ ಕೆರೆಗಳು ತುಂಬಿದೆ. ಬೆಂಗಳೂರಿನ ಕಲುಷಿತ ನೀರನ್ನು ಎರಡು ಬಾರಿ ಶುದ್ಧೀಕರಿಸಿ, ಅಂತರ್ಜಲ ಮಟ್ಟ ಹೆಚ್ಚಾಗಲು ಮಾತ್ರ ಬಳಸಬೇಕು. ಯಾರೂ ಕೃಷಿಗೆ ಬಳಸಬಾರದು ಎಂದು ಸೂಚಿಸಲಾಗಿದೆ.

ಕೋಲಾರ : ಮಕ್ಕಳಲ್ಲಿ ವೈರಲ್ ಜ್ವರ ಹೆಚ್ಚಳ

ಕೆಸಿ ವ್ಯಾಲಿಯ ನೀರಿನಿಂದ ಕೆರೆಗಳು ಭರ್ತಿಯಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಆದರೆ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಕೆಸರು ನೀರು ಕೆಸಿ ವ್ಯಾಲಿಗೆ ಸೇರುತ್ತಿದೆ. ಈ ನೀರು ಬೋರ್‌ವೆಲ್‌ಗಳಲ್ಲೂ ಸೇರಿರುವ ಅನುಮಾನ ವ್ಯಕ್ತವಾಗಿದೆ. ಇದೇ ನೀರನ್ನು ನಗರದ ನಿವಾಸಿಗಳಿಗೆ ಸರಬರಾಜು ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಇದರಿಂದ ನಿವಾಸಿಗಳ ಆರೋಗ್ಯದಲ್ಲಿ ಹೆಚ್ಚು ಕಡಿಮೆಯಾದರೆ ಯಾರು ಹೊಣೆ ಎಂದು ಪ್ರಶ್ನಿಸುತ್ತಿದ್ದಾರೆ. ಈ ಬಗ್ಗೆ ನಗರ ಪೌರಾಯುಕ್ತರನ್ನು ಕೇಳಿದರೆ ಅವರು ಹೇಳುವುದು ಹೀಗೆ.