ಭಾರತದಲ್ಲಿ ಆಟೋಮೊಬೈಲ್ ಮಾರುಕಟ್ಟೆ ವಿಸ್ತಾರಗೊಳ್ಳುತ್ತಿದೆ. ಪ್ರತಿ ಕಂಪನಿಗಳು ಹಲವು ಸೆಗ್ಮೆಂಟ್‌ಗಳಲ್ಲಿ ಕಾರು ಬಿಡುಗಡೆ ಮಾಡುತ್ತಿದೆ. ಜೊತೆಗೆ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡುತ್ತಿದೆ. ಇದೀಗ ಎಪ್ರಿಲ್ ತಿಂಗಳ ಕಾರು ಮಾರಾಟದ ಪಟ್ಟಿಯಲ್ಲಿ ಕೆಲ ಮಹತ್ವದ ಮಾಹಿತಿ ಬಯಲಾಗಿದೆ.
ಎಪ್ರಿಲ್ 2024ರಲ್ಲಿ ಗರಿಷ್ಠ ಮಾರಾಟವಾದ ಕಾರು ಮಾರುತಿ ಬ್ರೆಜ್ಜಾ, ಮಾರುತಿ ವ್ಯಾಗನಆರ್, ಟಾಟಾ ನೆಕ್ಸಾನ್ ಅಲ್ಲ. ಮಾರಾಟದಲ್ಲಿ ನಂ.1 ಸ್ಥಾನಕ್ಕೇರಿದ ಕಾರು ಅನ್ನೋ ಹೆಗ್ಗಳಿಕೆಗೆ ಟಾಟಾ ಪಂಚ್ ಪಾತ್ರವಾಗಿದೆ.
ಟಾಟಾ ಪಂಚ್ ಎಪ್ರಿಲ್ ತಿಂಗಲ್ಲಿ 19,158 ಕಾರುಗಳು ಮಾರಾಟವಾಗಿದೆ. ಈ ಮೂಲಕ ಸಣ್ಣ ಎಸ್‌ಯುವಿ ಕಾರಿನತ್ತ ಜನ ವಾಲಿದ್ದಾರೆ.ಕಾರಣ ಗರಿಷ್ಠ ಸುರಕ್ಷತೆ, ಉತ್ತಮ ವಿನ್ಯಾಸ, ಕೈಗೆಟುಕುವ ದರ ಸೇರಿದಂತೆ ಹಲವು ಕಾರಣಗಳು ಸೇರಿದೆ. ಪಂಚ್ ಕಾರಿನ ಬೆಲೆ 6.13 ಲಕ್ಷ ರೂಪಾಯಿಯಿಂದ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದೆ
ಎಪ್ರಿಲ್ ತಿಂಗಳಲ್ಲಿ ಗರಿಷ್ಠ ಮಾರಾಟವಾದ 2ನೇ ಕಾರು ಅನ್ನೋ ಹೆಗ್ಗಳಿಕೆಗೆ ಮಾರುತಿ ಸುಜುಕಿ ವ್ಯಾಗನಆರ್ ಪಾತ್ರವಾಗಿದೆ. ಎಪ್ರಿಲ್‌ನಲ್ಲಿ 17,850 ವ್ಯಾಗನಆರ್ ಕಾರುಗಳು ಮಾರಾಟವಾಗಿದೆ. ವ್ಯಾಗನಆರ ಕಾರಿನ ಬೆಲೆ 5.54 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ನಿಂದ ಆರಂಭಗೊಳ್ಳುತ್ತಿದೆ.
ಅಗ್ರಸ್ಥಾನದ ದಾಖಲೆ ಬರೆದಿದ್ದ ಮಾರುತಿ ಸುಜುಕಿ ಬ್ರೆಜ್ಜಾ ಕಾರು ಇದೀಗ 3ನೇ ಸ್ಥಾನದಲ್ಲಿದೆ. ಏಪ್ರಿಲ್ ತಿಂಗಳಲ್ಲಿ 17,113 ಮಾರುತಿ ಬ್ರೆಜ್ಜಾ ಕಾರು ದೇಶದಲ್ಲಿ ಮಾರಾಟವಾಗಿದೆ. ಬ್ರೆಜ್ಜಾ ಕಾರಿನ ಬೆಲೆ 8.34 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದೆ.
4ನೇ ಸ್ಥಾನದಲ್ಲಿರುವ ಮಾರುತಿ ಸುಜುಕಿ ಡಿಸೈರ್ ಕಾರು 15,825 ಕಾರುಗಳು ಮಾರಾಟವಾಗಿದ್ದರೆ, ಹ್ಯುಂಡೈ ಕ್ರೆಟಾ 15,447 ಕಾರುಗಳು ಮಾರಾಟವಾಗುವ ಮೂಲಕ 5ನೇ ಸ್ಥಾನ ಪಡೆದುಕೊಂಡಿದೆ. ಸುಜುಕಿ ಡಿಸೈರ್ ಕಾರು 6.57 ಲಕ್ಷ ರೂಪಾಯಿ ಹಾಗೂ ಹ್ಯುಂಡೈ ಕ್ರೆಟಾ ಕಾರಿನ ಬೆಲೆ 11.20 ಲಕ್ಷ ರೂ (ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದೆ.
ಹೊಸ ಅವತಾರದಲ್ಲಿನ ಮಹೀಂದ್ರ ಸ್ಕಾರ್ಪಿಯೋ ಕಾರು ಇದೀಗ 6ನೇ ಸ್ಥಾನ ಪಡೆದುಕೊಂಡಿದೆ. ಏಪ್ರಿಲ್ ತಿಂಗಳಲ್ಲಿ ಸ್ಕಾರ್ಪಿಯೋ 14,807 ಕಾರುಗಳು ಮಾರಾಟಗೊಂಡಿದೆ. ಸ್ಕಾರ್ಪಿಯೋ ಬೆಲೆ 13.59 ಲಕ್ಷ ರೂ(ಎಕ್ಸ್ ಶೋ ರೂಂ) ನಿಂದ ಆರಂಭಗೊಳ್ಳುತ್ತಿದೆ.
ಮಾರುತಿ ಸುಜುಕಿ ಫ್ರಾಂಕ್ಸ್, ಬೆಲೆನೋ, ಎರ್ಟಿಗಾ , ಮಾರುತಿ ಇಕೋ ಕಾರುಗಳು ನಂತರದ ಸ್ಥಾನದಲ್ಲಿದೆ. ಟಾಪ್ 10 ಪಟ್ಟಿಯಲ್ಲಿ ಮಾರುತಿಯ 7 ಕಾರುಗಳು ಸ್ಥಾನ ಪಡೆದಿದೆ.