Narendra Modi: ಮೋದಿ ಬಳಿಕ ಉತ್ತರಾಧಿಕಾರಿಯಾಗ್ತಾರಾ ಯೋಗಿ!? ಮೋದಿ-ಯೋಗಿ..ಎಷ್ಟು ಸಾಮ್ಯತೆ? ಏನು ವ್ಯತ್ಯಾಸ ?

Narendra Modi: ಮೋದಿ ಬಳಿಕ ಉತ್ತರಾಧಿಕಾರಿಯಾಗ್ತಾರಾ ಯೋಗಿ!? ಮೋದಿ-ಯೋಗಿ..ಎಷ್ಟು ಸಾಮ್ಯತೆ? ಏನು ವ್ಯತ್ಯಾಸ ?

Published : May 07, 2024, 04:52 PM IST

ಮೋದಿಯ ಒಂದು ಭಾಷಣ ಸೃಷ್ಟಿಸಿತೇಕೆ ತಲ್ಲಣ!?
ಹೊಸ ಚರ್ಚೆಗೆ ಕಾರಣವಾಯ್ತು  ಮೋದಿ ಮಾತು!
ಉತ್ತರಾಧಿಕಾರಿ ಗೊಂದಲಕ್ಕೆ ಉತ್ತರ ಸಿಕ್ಕಿತಾ..?
ಯೋಗಿ ರಾಜ್ಯವನ್ನು ಹಾಡಿ ಹೊಗಳಿದ ಮೋದಿ!

ಪ್ರಧಾನಿ ನರೇಂದ್ರ ಮೋದಿ ಅವರು, ಇತ್ತೀಚಿಗಷ್ಟೇ ಅಯೊಧ್ಯೆಗೆ(Ayodhya) ಭೇಟಿ ನೀಡಿದ್ರು. ಪ್ರಭು ಶ್ರೀರಾಮ ಚಂದ್ರನ ದರ್ಶನ ಪಡೆದ್ರು. ಜೊತೆಗೆ, ಚುನಾವಣಾ ರ್ಯಾಲಿನೂ ನಡೆಸಿದ್ರು. ಆದ್ರೆ, ಇವತ್ತು ದೇಶದಲ್ಲಿ ಹೊಸದೊಂದು ಚರ್ಚೆಗೆ ಕಾರಣವಾಗಿದ್ದು, ಮೋದಿ(Narendra Modi) ಅವರಾಡಿದ ಭಾಷಣ. ಅದು ಸಾಮಾನ್ಯರ ಕಣ್ಣಿಗೆ ಚುನಾವಣಾ ಭಾಷಣ. ಆದ್ರೆ ರಾಜಕೀಯದ ಸೂಕ್ಷ್ಮ ತಿಳಿದುಕೊಂಡೋರಿಗೆ, ದಿಕ್ಸೂಚಿ ಭಾಷಣ. ಪ್ರಧಾನಿ ನರೇಂದ್ರ ಮೋದಿ ಅವರು, ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ಮಾಡಿದ್ಮೇಲೆ, ಇದೇ ಮೊದಲ ಬಾರಿಗೆ ಅಯೋಧ್ಯೆಗೆ ಭೇಟಿ ನೀಡಿದ್ರು. ಬಳಿಕ, ಉತ್ತರ ಪ್ರದೇಶದ(Uttar Pradesh) ಇಟಾವಾದಲ್ಲಿ ಬಿಜೆಪಿ(BJP) ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿದ್ರು.ಅಲ್ಲಿ ಮಾತಾಡುವಾಗ,ಮೋದಿ ಒಂದು ಮಾತು ಹೇಳಿದ್ರು.ಮೋದಿ ಅವರ ಆ ಮಾತು, ಚುನಾವಣಾ ಹಣಾಹಣಿಯಲ್ಲಿ ಹೇಳೊ ಮಾತಾಗಿ ಮಾತ್ರವೇ ಕಾಣಲಿಲ್ಲ. ಅದರ ಹಿಂದೆ ಬೇರೊಂದು ಕತೆಯೇ  ಅಡಗಿದೆಯೇನೋ ಅನ್ನೋ ಚರ್ಚೆ ಶುರುವಾಯ್ತು. ಸಮಾಜವಾದಿ ಪಾರ್ಟಿ, ಕಾಂಗ್ರೆಸ್(Congress) ಪಾರ್ಟಿಗಳೆಲ್ಲಾ, ತಮ್ಮ ಭವಿಷ್ಯಕ್ಕೋಸ್ಕರ ಪರದಾಡ್ತಾ ಇದ್ರೆ, ನಾನೂ ಮತ್ತೆ ಯೋಗಿ ಆದಿತ್ಯನಾಥ್(Yogi Adityanath), ಇಬ್ಬರೂ ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ, ಅವರ ಒಳಿತಿಗಾಗಿ ಹೋರಾಡ್ತಾ ಇದೀವಿ ಅಂತ ಹೇಳಿದ್ರು. ಈ ಮಾತುಗಳನ್ನೇ ಹೇಳ್ತಾ ಹೇಳ್ತಾ ಮೋದಿ ಈ ಬಾರಿ ಭಾವುಕರಾಗಿಬಿಟ್ರು.

ಇದನ್ನೂ ವೀಕ್ಷಿಸಿ:  ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌! ರಾಹುಲ್‌ ಗಾಂಧಿ ವಿರುದ್ಧ ಏಕವಚನದಲ್ಲೇ ಕಿಡಿಕಾರಿದ ಹೆಚ್‌ಡಿಕೆ!

19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
Read more