ದೇವಾಲಯವನ್ನು ಭಾರತದ ಸಂಸ್ಕೃತಿ (Indian Culture) ಮತ್ತು ಧಾರ್ಮಿಕ ಜೀವನದ ಅವಿಭಾಜ್ಯ ಅಂಗವೆಂದು ಪರಿಗಣಿಸಲಾಗಿದೆ. ಭಾರತದಲ್ಲಿ ವಿವಿಧ ರೀತಿಯ ದೇವಾಲಯಗಳಿವೆ, ಅವುಗಳಲ್ಲಿ ಪ್ರತಿಯೊಂದೂ ತನ್ನದೇ ಆದ ವಿಶಿಷ್ಟ ಇತಿಹಾಸವನ್ನು ಹೊಂದಿದೆ. ಪ್ರತಿಯೊಂದು ದೇವಾಲಯವು ತನ್ನದೇ ಆದ ವಿಭಿನ್ನ ನಂಬಿಕೆಗಳನ್ನು ಹೊಂದಿದೆ. ಪ್ರತಿ ದೇವಾಲಯದಲ್ಲಿ ದರ್ಶನ ಮತ್ತು ಪೂಜೆಯ ಸಮಯದಲ್ಲಿ ನಿಯಮಗಳನ್ನು ಅನುಸರಿಸುವ ವಿಶೇಷ ಮಹತ್ವವಿದೆ.
ದೇವಾಲಯವು ಆಧ್ಯಾತ್ಮಿಕತೆಯ ಕೇಂದ್ರವಾಗಿದೆ. ಇಲ್ಲಿ ಭಕ್ತರು ಧ್ಯಾನ ಮಾಡುತ್ತಾರೆ, ಮಂತ್ರಗಳನ್ನು ಪಠಿಸುತ್ತಾರೆ ಮತ್ತು ಧಾರ್ಮಿಕ ಆಚರಣೆಗಳನ್ನು ಮಾಡುತ್ತಾರೆ. ಅದೇ ಸಮಯದಲ್ಲಿ, ಪ್ರತಿ ದೇವಾಲಯದಲ್ಲಿ ದೇವರಿಗೆ ನೈವೇದ್ಯ ಅರ್ಪಿಸುವ ನಂಬಿಕೆಯೂ ವಿಭಿನ್ನ. ಬಿಹಾರದಲ್ಲಿ ಒಂದು ದೇವಾಲಯವೂ ಇದೆ, ಅಲ್ಲಿ ದೇವರಿಗೆ ಉಪ್ಪನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಇದು ಮಾತ್ರವಲ್ಲ, ಮಹಿಳೆಯರು ಇಲ್ಲಿಗೆ ಹೋಗುವುದನ್ನು ನಿಷೇಧಿಸಲಾಗಿದೆ. ಈ ದೇವಾಲಯದ ನಂಬಿಕೆ ಏನು, ಇತಿಹಾಸವೇನು? ಅನ್ನೋದರ ಬಗ್ಗೆ ತಿಳಿಯೋಣ.
ಕಾಳಿ ಬಾಗ್ ದೇವಾಲಯ ಎಲ್ಲಿದೆ?
ಕಾಳಿ ಬಾಗ್ ದೇವಾಲಯವು ಬಿಹಾರದ ಬೆಟ್ಟಿಯಾ (Bettaiah of Bihar) ನಗರದಲ್ಲಿದೆ. ಈ ದೇವಾಲಯವು ಕಾಳಿ ಮಾತೆಗೆ ಸಮರ್ಪಿತವಾಗಿದೆ ಮತ್ತು ದೇಗುಲವು ಅದರ ಭವ್ಯತೆಗೆ ಹೆಸರುವಾಸಿ. ದೇವಾಲಯದ ಆವರಣದಲ್ಲಿ ಶಿವ, ಗಣೇಶ, ಶನಿ, ಹನುಮಾನ್ ಸೇರಿ ಅನೇಕ ದೇವರು ಮತ್ತು ದೇವತೆಗಳ ದೇವಾಲಯಗಳಿವೆ.
ಕಾಳಿ ಬಾಗ್ ದೇವಾಲಯದ ನಂಬಿಕೆ ಏನು?
ಕಾಳಿ ಬಾಗ್ ದೇವಾಲಯವು (Kali Bagh Temple) ಮಾ ಕಾಳಿಯ ಶಕ್ತಿಯುತ ದೇವಾಲಯಗಳಲ್ಲಿ ಒಂದು. ಈ ದೇವಾಲಯಕ್ಕೆ ಭೇಟಿ ನೀಡಿ ತಾಯಿ ಕಾಳಿಯನ್ನು ಪೂಜಿಸುವುದರಿಂದ ಭಕ್ತರ ಎಲ್ಲ ಆಸೆಗಳು ಈಡೇರುತ್ತವೆ ಎಂದು ನಂಬಲಾಗಿದೆ. ಇದರೊಂದಿಗೆ, ಜೀವನದಲ್ಲಿ ಯಶಸ್ಸು ಸಹ ಸಾಧಿಸಲಾಗುತ್ತೆ ಎನ್ನುವ ನಂಬಿಕೆ ಕೂಡ ಇದೆ. ಈ ದೇವಾಲಯವು ಅಧ್ಯಾತ್ಮಿಕ ಶಕ್ತಿ ಮತ್ತು ಪ್ರಶಾಂತ ವಾತಾವರಣಕ್ಕೆ ಹೆಸರುವಾಸಿ. ಈ ದೇವಾಲಯಕ್ಕೆ ಭೇಟಿ ನೀಡುವ ವ್ಯಕ್ತಿ ಜೀವನದಲ್ಲಿ ಎಂದಿಗೂ ಯಾವುದೇ ಸಮಸ್ಯೆಯನ್ನು ಎದುರಿಸಬೇಕಾಗಿಲ್ಲ ಎನ್ನುವ ನಂಬಿಕೆ ಕೂಡ ಇದೆ.
ಕಾಳಿ ಬಾಗ್ ದೇವಾಲಯದಲ್ಲಿ ಉಪ್ಪನ್ನು ಅರ್ಪಿಸುವ ಮಹತ್ವವೇನು?
ಉಪ್ಪನ್ನು (Salt) ಶಕ್ತಿ ಮತ್ತು ರಕ್ಷಣೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಭಕ್ತರು ಕಾಳಿ ತಾಯಿಗೆ ಉಪ್ಪನ್ನು ಅರ್ಪಿಸುತ್ತಾರೆ.
ಉಪ್ಪು ದುಷ್ಟ ಶಕ್ತಿಗಳಿಂದ ರಕ್ಷಿಸುತ್ತದೆ ಎಂದು ಪರಿಗಣಿಸಲಾಗಿದೆ. ಆದ್ದರಿಂದ, ಕಾಳಿ ಮಾತೆಯ ಭಕ್ತರು ಉಪ್ಪನ್ನು ಅರ್ಪಿಸುತ್ತಾರೆ.
ಭಕ್ತರು ಉಪ್ಪನ್ನು ಅರ್ಪಿಸುವ ಮೂಲಕ ಎಲ್ಲಾ ಪಾಪಗಳನ್ನು ತೊಡೆದು ಹಾಕಲು ಕಾಳಿ ಮಾತೆಯನ್ನು ಪ್ರಾರ್ಥಿಸುತ್ತಾರೆ.
ಭಕ್ತರು ಕಾಳಿ ಮಾತೆಗೆ ಉಪ್ಪನ್ನು ಅರ್ಪಿಸೋದರಿಂದ ಸಮೃದ್ಧಿ, ಸಂತೋಷ ಮತ್ತು ಶಾಂತಿಯ ಆಶೀರ್ವಾದವನ್ನು ಪಡೆಯುತ್ತಾರೆ ಎನ್ನುವ ನಂಬಿಕೆ ಜನರಲ್ಲಿದೆ.
ಕಾಳಿ ಬಾಗ್ ದೇವಾಲಯಕ್ಕೆ ಮಹಿಳೆಯರ ಪ್ರವೇಶ ನಿರ್ಬಂಧ
ಧಾರ್ಮಿಕ ನಂಬಿಕೆಗಳ ಪ್ರಕಾರ, ಮಾ ಕಾಳಿ ರುದ್ರ ದೇವತೆ ಮತ್ತು ಮಹಿಳೆಯರು ಮಾ ಕಾಳಿಗೆ ಭೇಟಿ ನೀಡಿದರೆ, ಅವರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವ ನಂಬಿಕೆ ಇದೆ. ಆದ್ದರಿಂದ, ಮಹಿಳೆಯರಿಗೆ ಈ ದೇವಾಲಯಕ್ಕೆ ಪ್ರವೇಶಿಸಲು (women entry prohibited) ಅನುಮತಿ ಇಲ್ಲ.