ಪ್ರಧಾನಿಗೆ ಬಹುಪರಾಕ್: 140 ಕೋಟಿಗೊಬ್ಬ ಮೋದಿ..!

Jun 25, 2020, 5:03 PM IST

ನವದೆಹಲಿ(ಜೂ.25): ಆತ 140 ಕೋಟಿ ಜನರಿಗೆ ಒಬ್ಬನೇ ನಾಯಕ. 6 ವರ್ಷಗಳಿಂದ ಜನರ ನಂಬಿಕೆಯನ್ನು ಗಟ್ಟಿಯಾಗಿ ಉಳಿಸಿಕೊಂಡು ಬಂದ ಯೋಧ. ದೇಶ ಎಷ್ಟೇ ಸಂಕಷ್ಟವನ್ನು ಎದುರಿಸಿದ್ದರೂ ಸಹಾ, ದೇಶದ ಜನ ಮಾತ್ರ ಆತನ ಮೇಲಿನ ನಂಬಿಕೆಯನ್ನು ಕಡಿಮೆ ಮಾಡಿಕೊಂಡಿಲ್ಲ. 

ಭಾರತ ಹಾಗೂ ಚೀನಾ ನಡುವೆ ಇನ್ನೇನು ಯುದ್ಧ ನಡೆದೇ ಬಿಡ್ತು. ಯಾವ ಕ್ಷಣದಲ್ಲಾದರೂ ಯುದ್ಧ ಘೋಷಣೆಯಾಗಿ ಬಿಡಬಹುದು ಎನ್ನುವ ಸ್ಥಿತಿ ನಿರ್ಮಾಣವಾಗಿ ಬಿಟ್ಟಿತ್ತು. ಈ ಸಂದರ್ಭದಲ್ಲಿ ದೇಶದಲ್ಲಿ ಸಮೀಕ್ಷೆಯೊಂದು ನಡೆದಿದೆ. ಸಿ ವೋಟರ್ ನಡೆಸಿದ ಸಮೀಕ್ಷೆಯಲ್ಲಿ ದೇಶದ ಜನರು ಮೋದಿಗೆ ಬಹುಪರಾಕ್ ಎಂದಿದ್ದಾರೆ.

ಕುತಂತ್ರಿ ಚೀನಾಗೆ ಮೋದಿ ಟೈಂ ಬಾಂಬ್..!

ಸಮೀಕ್ಷೆಯಲ್ಲಿ ಕೇಳಲಾದ ಚೀನಾಗೆ ಬುದ್ದಿಕಲಿಸಬಲ್ಲ ಪ್ರಬಲ ನಾಯಕ ಯಾರು ಎನ್ನುವ ಪ್ರಶ್ನೆಗೆ ಮೋದಿಗೆ ಜನ ಜೈಕಾರ ಹಾಕಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.