Petrol- Diesel Price: ಅದೊಂದು ನಿರ್ಧಾರ ಜನರ ಹೊರೆ ಇಳಿಸಲಿದೆ! ಬಂಪರ್ ಗಿಫ್ಟ್ ಹಿಂದೆ ಅಡಗಿರೋ ರಹಸ್ಯವೇನು..?

Dec 30, 2023, 3:37 PM IST

ವರ್ಷಾಂತ್ಯಕ್ಕೊಂದು ಗುಡ್ ನ್ಯೂಸ್, ಗ್ರೇಟ್ ನ್ಯೂಸ್ ನಿಮ್ಮ ಕಿವಿಗೆ ಅಪ್ಪಳಿಸಬಹುದು.. ಆ ನ್ಯೂ ಇಯರ್ ಬೊನಸ್‌ಗೆ ಈಗಿಂದಲೇ ರೆಡಿಯಾಗಿಬಿಡಿ.. ಯಾಕಂದ್ರೆ, ಪ್ರಧಾನಿ ನರೇಂದ್ರ ಮೋದಿ ಅವರು, ಪೆಟ್ರೋಲ್ ಬೆಲೆ(petrol), ಡೀಸಲ್(Diesel) ಬೆಲೆ ಇಳಿಸೋದಾಗಿ ಅನೌನ್ಸ್ ಮಾಡೋ ಸಾಧ್ಯತೆ ದಟ್ಟವಾಗಿದೆ. ಹೆಚ್ಚೂಕಮ್ಮಿ ಕಳೆದ ಒಂದೂ-ಒಂದೂವರೆ ವರ್ಷಗಳಿಂದಲೂ ಪೆಟ್ರೋಲ್ ಬೆಲೆ ಏರುಗತಿಯಲ್ಲೇ ಸಾಗ್ತಾ ಇತ್ತು. ನಮ್ಮ ಕರ್ನಾಟಕವೂ ಸೇರಿದಂತೆ, ಇನ್ನೂ ಕೆಲವು ರಾಜ್ಯಗಳಲ್ಲಿ, ನೋಡನೋಡುತ್ತಲೇ ಪೆಟ್ರೋಲ್ ಬೆಲೆ 100ರ ಗಡಿ ದಾಟಿತ್ತು. ದೇಶದ ಆರ್ಥಿಕತೆಯ ಮೇಲೆ ಭಾರ ಹೆಚ್ಚಾಗಿತ್ತು. ಆದ್ರೆ ಆ ಹೊರೆ ಇಳಿಸೋದಕ್ಕೆ, ಮೋದಿ(Narendra modi) ಸರ್ಕಾರ ಈಗ ಮುಂದಾಗಿರೋ ಹಾಗೆ ಕಾಣ್ತಾ ಇದೆ. ಯಾಕಂದ್ರೆ, ಅಂಥದ್ದೊಂದು ಸೂಚನೆಯನ್ನ ಖುದ್ದು, ಕೇಂದ್ರದ ಪೆಟ್ರೋಲಿಯಂ ಸಚಿವಾಲಯವೇ ನೀಡಿದೆ. ಒಂದ್ ವೇಳೆ, ಎಲ್ಲವೂ ಅಂದುಕೊಂಡಂತೆ ನಡೆದರೆ, ಮುಂದಿನ ಗುರುವಾರದ ಹೊತ್ತಿಗೆ ಮೋದಿ ಅವರೇ ಪೆಟ್ರೋಲ್ ಡೀಸಲ್ ಬೆಲೆ ಇಳಿಕೆಯ ಘೋಷಣೆ ಮಾಡ್ಬೋದು ಅಂತಿದ್ದಾರೆ.. ಅಂದ್ ಹಾಗೆ, ಇಂಥದ್ದೊಂದು ಮಾತು, ಕೆಲವು ತಿಂಗಳ ಹಿಂದೆಯೇ ಕೇಳಿಬಂದಿತ್ತು.

ಇದನ್ನೂ ವೀಕ್ಷಿಸಿ:  3 ರಾಮಲಲ್ಲಾ ಮೂರ್ತಿಗಳು, ಗರ್ಭಗುಡಿ ರಾಮಲಲ್ಲಾ ಯಾರು..? ವಿವಾದಿತ ಸ್ಥಳ ಅಭಿವೃದ್ಧಿ ಸ್ಥಳವಾಗಿ ಬದಲಾಗಿದ್ದು ಹೇಗೆ..?