ಲೋಕಸಂಗ್ರಾಮದ ಮೈತ್ರಿನಾಯಕನ ಪ್ಲಸ್-ಮೈನಸ್ ಏನು..? ಮೋದಿ ವಿರುದ್ಧ ಹೇಗೆ ಗುಡಗಲಿಗೆ ಖರ್ಗೆ ಸೇನೆ!

Dec 21, 2023, 2:12 PM IST

ಮಲ್ಲಿಕಾರ್ಜುನ ಖರ್ಗೆ ಹೆಗಲಿಗೆ ಸಿಕ್ಕಾಯ್ತು ಮಹಾಘಟಬಂಧನದ ಸೇನಾಧಿಪತ್ಯ. ನರೇಂದ್ರ ಮೋದಿ(Narendra Modi) ಕೇಸರಿ ಪಾಳಯದ ವೀರ ಕೇಸರಿ. ಹೋದಲ್ಲೆಲ್ಲಾ ಗೆಲುವು ಸೃಷ್ಟಿಸಬಲ್ಲ ಮಾಯಗಾರ. ದಶಮಾನಗಳಿಂದಲೂ ಸಾಟಿ ಇಲ್ಲದ ನಾಯಕನಾಗಿ ಮೆರೀತಿರೋ ರಾಜಕೀಯ ದಿಗ್ಗಜ ಅಂಥಾ ಮೋದಿಯನ್ನ ಮಣಿಸೋಕೆ ಹುಟ್ಟಿಕೊಂಡಿದ್ದೇ, ಐಎನ್‌ಡಿಐಎ(INDIA) ಅರ್ಥಾತ್, ಮಹಾ-ಮಹಾಘಟಬಂಧನ. ಕಾಂಗ್ರೆಸ್(Congress) ಪಕ್ಷದ ನೇತೃತ್ವದಲ್ಲಿ, ಮಮತಾ ದೀದಿ ನಾಯಕತ್ವದಲ್ಲಿ, ಅರವಿಂದ್ ಕೇಜ್ರಿವಾಲ್, ನಿತೀಶ್ ಕುಮಾರ್, ಲಾಲೂ ಪ್ರಸಾದ್ ಯಾದವ್, ಅಖಿಲೇಶ್ ಯಾದವ್ರಂಥಾ ಘಟಾನುಘಟಿಗಳ ಮುಂದಾಳತ್ವದಲ್ಲಿ ಯುಪಿಎ ಹೊಸ ರೂಪ ಪಡೀತು. ಇಂಡಿಯನ್ ನ್ಯಾಷನಲ್ ಡೆವಲಪ್ಮೆಂಟ್ ಇನ್ಕ್ಲೂಸಿವ್ ಅಲೈಯನ್ಸ್ ಹೆಸರಲ್ಲಿ, ಮೋದಿ ವಿರುದ್ಧ ಸಮರಾಂಗಣಕ್ಕೆ ಧುಮುಕಿತ್ತು. ಬರೋಬ್ಬರಿ 17 ಪಕ್ಷಗಳ ಅತಿ ಪ್ರಮುಖ ನಾಯಕರು ತಮ್ಮ ನಡುವೆ ಇದ್ದ ವೈರುಧ್ಯ, ವೈಷಮ್ಯ ಎಲ್ಲವನ್ನೂ ಮರೆತು ಕೈಕೈ ಜೋಡಿಸಿ ಒಂದೇ ವೇದಿಕೆ ಮೇಲೆ ನಿಂತಿದ್ರು. ನಾವೆಲ್ಲರೂ ಒಂದೇ ಅಂತ ಅವಕಾಶ ಸಿಕ್ಕಾಗೆಲ್ಲಾ ಹೇಳಿದ್ರು. ಯಾವುದು ಏನೇ ಇದ್ರೂ, ಇವರೆಲ್ಲರ ಗುರಿ ಮತ್ತು ಉದ್ದೇಶ ಮಾತ್ರ ಒಂದೇ ಆಗಿತ್ತು.. ಅದೇನು ಗೊತ್ತಾ..? ಮುಂದಿನ ಲೋಕಸಮರದಲ್ಲಿ(Loksabha) ನರೇಂದ್ರ ಮೋದಿ ಅವರನ್ನ ಮಣಿಸೋದು.

ಇದನ್ನೂ ವೀಕ್ಷಿಸಿ:  ಮನೋರಂಜನ್-ಸಾಯಿಕೃಷ್ಣ ಲಿಂಕ್..? ಮೈಸೂರಿನ ಬಳಿಕ ಬಾಗಲಕೋಟೆಗೂ ಹಬ್ಬಿದ ದಾಳಿ ನಂಟು !