Mar 5, 2024, 11:21 PM IST
ವಿಧಾನಸೌದದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಇವರಿಗೆ ಪಾಸ್ ನೀಡಿದ್ದು ರಾಜ್ಯಸಭಾ ಸಂಸದ ನಾಸಿರ್. ಇದೀಗ ನಾಸಿರ್ ಅವರನ್ನು ಆರೋಪಿ ನಂಬರ್ 4 ಮಾಡಲು ಬಿಜೆಪಿ ಒತ್ತಾಯಿಸಿದೆ. ಇದೇ ವೇಳೆ ಕಾಂಗ್ರೆಸ್ ಹೊಸ ಅಸ್ತ್ರ ಝಳಪಿಸಿ ಬಿಜೆಪಿಗೆ ಬಿಸಿ ಮುಟ್ಟಿಸಲು ಮುಂದಾಗಿದೆ. ಬಿಜೆಪಿ 2 ವರ್ಷದ ಹಿಂದೆ ಪಾಕಿಸ್ತಾನ ವಿರುದ್ಧ ಪ್ರತಿಭಟನೆ ನಡೆಸಿತ್ತು. ಈ ವೇಳೆ ಪಾಕಿಸ್ತಾನ ಮುರ್ದಾಬಾದ್ ನಡುವೆ ಜಿಂದಾಬಾದ್ ಅನ್ನೋ ಘೋಷಣೆಯೂ ಕೇಳಿಬಂದಿದೆ. ಇದೀಗ ಪ್ರಕರಣ ದಾಖಲಿಸಿಕೊಂಡ ಕಾಂಗ್ರೆಸ್ ಸರ್ಕಾರ ಓರ್ವ ಬಿಜೆಪಿ ಕಾರ್ಯಕರ್ತನ ಬಂಧಿಸಿದೆ.