ಸೀತಾರಾಮ ಸೀರಿಯಲ್ ಸಿಹಿ ರಿತು ಸಿಂಗ್ ಶೂಟಿಂಗ್ ಹೋಗುವ ಸಮಯದಲ್ಲಿ ಮಾಡೋ ತುಂಟಾಟ ಬಗ್ಗೆ ವಿಡಿಯೋ ವೈರಲ್ ಆಗಿದೆ.
ಶೀಘ್ರದಲ್ಲಿಯೇ ಸಿಹಿ ಸತ್ತು, ಸಿಹಿಯ ಅವಳಿ ಸಹೋದರಿ ಸುಬ್ಬಿ ಕಾಣಿಸಿಕೊಳ್ಳಲಿದ್ದಾಳೆ. ಇಷ್ಟು ದಿನ ಮುದ್ದಿನ ಮಗಳಾಗಿ ಬೆಳೆದು ಅದೇ ರೀತಿಯ ಮಾತನಾಡುತ್ತಿದ್ದ ಸಿಹಿ ಈಗ ಹಳ್ಳಿಯಲ್ಲಿ ಬೆಳೆದ ಹುಡುಗಿಯಾಗಿ ಹಳ್ಳಿಯ ಸೊಗಡು ಸುಬ್ಬಿ ಬಾಯಲ್ಲಿ ಹೇಗೆ ಬರತ್ತೆ ಎನ್ನುವುದನ್ನು ನೋಡಲು ವೀಕ್ಷಕರು ಕಾಯುತ್ತಿದ್ದಾರೆ. ಈಗ ಸಿಹಿ ಹೋಗಿ ಸುಬ್ಬಿಯದ್ದೇ ಕಾರುಬಾರು ಶುರು. ಈ ಸಿಹಿ ಮತ್ತು ಸುಬ್ಬಿ ಪಾತ್ರಕ್ಕೆ ಜೀವ ತುಂಬ್ತಿರೋ ಪುಟಾಣಿಯ ಬಗ್ಗೆ ಬೇರೆ ಹೇಳಬೇಕಾಗಿಲ್ಲ. ಅವಳೇ ನೇಪಾಳದ ಬಾಲಕಿ ರಿತು ಸಿಂಗ್. ವಯಸ್ಸಿಗಿಂತಲೂ ಹೆಚ್ಚಿರುವ ಪ್ರತಿಭೆ, ಪ್ರತಿಯೊಂದು ದೃಶ್ಯಗಳನ್ನೂ ಬಾಲಕಿ ಗ್ರಹಿಸುವ ರೀತಿ, ದೃಶ್ಯಗಳಿಗೆ ತಕ್ಕಂತೆ ಮನೋಜ್ಞ ಅಭಿನಯ... ಇವೆಲ್ಲವುಗಳಿಂದ ಈ ಪುಟಾಣಿ ಸೀರಿಯಲ್ ಪ್ರೇಮಿಗಳ ಹೃದಯ ಗೆಲ್ಲುತ್ತಿದ್ದಾಳೆ, ಹೃದಯ ಕದಿಯುತ್ತಿದ್ದಾಳೆ. ಕೆಲವೊಮ್ಮೆ ವಯಸ್ಸಿಗೆ ಮಿತಿ ಮೀರಿದ ಡೈಲಾಗ್‌ಗಳನ್ನು ಈಕೆ ಹೇಳುವ ಕಾರಣ, ಸೀರಿಯಲ್ ನಿರ್ದೇಶಕರ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಅನೇಕ ಕಮೆಂಟ್‌ಗಳು ಬರುತ್ತಿದ್ದರೂ, ಸಿಹಿಯ ಅಭಿನಯಕ್ಕೆ ಮಾತ್ರ ಮನಸೋಲುವವರೇ ಎಲ್ಲ. ಅಷ್ಟಕ್ಕೂ ಸೀತಾರಾಮ ಸೀರಿಯಲ್ ಟಿಆರ್ಪಿಯಲ್ಲಿ ಉತ್ತಮ ರೇಟಿಂಗ್ ಪಡೆದುಕೊಳ್ಳುವುದಕ್ಕೆ ಬಹುಮುಖ್ಯ ಕಾರಣನೇ ಈಕೆ ಎನ್ನುವುದೂ ಸುಳ್ಳಲ್ಲ.
ಆರು ವರ್ಷದ ರೀತು ಸಿಂಗ್ ವಯಸ್ಸಿಗೆ ಮೀರಿದಂತೆ ಮಾತನಾಡಿದರೂ, ಆಕೆಯ ತುಂಟಾಟ ಮಾತ್ರ ಶೂಟಿಂಗ್ ಸೆಟ್‌ನಲ್ಲಿ ಅಷ್ಟಿಷ್ಟಲ್ಲ. ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆಯಲ್ಲಿಯೂ ಕಾಣಿಸಿಕೊಳ್ತಿರೋ ರಿತು ಸಿಂಗ್‌ಗೆ ಡ್ರೆಸ್ ಮಾಡಿದಾಗ, ಅವಳ ತುಂಟಾಟ ಹೇಗಿತ್ತು ಎನ್ನುವ ವಿಡಿಯೋ ಈಗ ವೈರಲ್ ಆಗಿದೆ. ಮೇಕಪ್ ಕಲಾವಿದೆ ರಶ್ಮಿ ಅನೂಪ್ ರಾವ್ ಅವರು ಈ ತುಂಟಿಯ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ರಿತು ವಿಷಯಕ್ಕೆ ಬಂದರೆ, ಸೆಟ್‌ನಲ್ಲಿ ಎಲ್ಲರಿಗೂ ಮಜವೋ ಮಜ ಎಂದು ಅವರು ಹೇಳಿಕೊಂಡಿದ್ದಾರೆ. ಇದಕ್ಕೆ ಆಂಕರ್ ಅನುಶ್ರೀ ಕೂಡ ಕಮೆಂಟ್ ಮಾಡಿದ್ದು, ಡ್ರಾಮಾ ಕ್ವೀನ್, ಮಹಾನಟಿ ಎಂದೆಲ್ಲಾ ಹೇಳಿದ್ದಾರೆ.
ಸಿಹಿ ಸ್ಕೂಲ್‌ಗೆ ಎಷ್ಟು ದಿನ ಹೋಗ್ತಾಳೆ? ರಜೆ ಇದ್ದಾಗ ಹೋಗೋದೆಲ್ಲಿ? ಅವಳದ್ದೇ ಕ್ಯೂಟ್ ಮಾತಲ್ಲಿ ಕೇಳಿ
ಇನ್ನು ಪುಟಾಣಿ ರಿತು ಬಗ್ಗೆ ಹೇಳುವುದಾದರೆ, ಇಷ್ಟು ಚಿಕ್ಕ ವಯಸ್ಸಿನಲ್ಲಿ ತನ್ನ ಪಾತ್ರವನ್ನು ಅರಗಿಸಿಕೊಂಡು ನಟನೆ ಮಾಡುವುದು ಸುಲಭದ ಮಾತಲ್ಲ. ನಿಜ ಜೀವನದಲ್ಲಿಯಾದರೆ ನೋವು, ಖುಷಿ, ನಲಿವು, ದುಃಖ, ಅಳು ಎಲ್ಲವೂ ನ್ಯಾಚುರಲ್ ಆಗಿ ಬಂದುಬಿಡುತ್ತದೆ. ಆದರೆ ಶೂಟಿಂಗ್ ಸಮಯದಲ್ಲಿ ನಟನೆ ಮಾಡುವುದು ಎಂದರೆ ಅದಕ್ಕೆ ಬಹಳ ಟ್ಯಾಲೆಂಟ್ ಬೇಕು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಎಲ್ಲ ಭಾವನೆಗಳನ್ನೂ ತೋರಿಸುವುದು ಎಂದರೆ ಬಹುಶಃ ಇದು ಹಿಂದಿನ ಜನ್ಮದ ಟ್ಯಾಲೆಂಟೇ ಇರಬೇಕು ಎನ್ನುವಷ್ಟರ ಮಟ್ಟಿಗೆ ಎಲ್ಲರನ್ನೂ ಆವರಿಸಿಕೊಂಡಿದ್ದಾಳೆ ಸಿಹಿ ಅರ್ಥಾತ್ ರಿತು ಸಿಂಗ್. ಇತ್ತ ಸೀರಿಯಲ್‌ನಲ್ಲಿ, ಇನ್ನೊಂದು ಕಡೆ ಡಾನ್ಸ್ ಷೋನಲ್ಲಿ, ಮತ್ತೆ ಇನ್ನೆಲ್ಲೋ... ಹೀಗೆ ಸಿಹಿಗೆ ಸಕತ್ ಡಿಮಾಂಡ್ ಇದೆ.
ಸೀತಾರಾಮ ಸೀರಿಯಲ್‌ನಲ್ಲಿ ಸದ್ಯ ಅಮ್ಮನ ಆಸರೆಯಲ್ಲಿದ್ದ ಸಿಹಿಗೆ ಅಪ್ಪನ ಪ್ರೀತಿಯೂ ಸಿಕ್ಕಿದೆ. ಆದರೆ ಈಕೆ ನಿಜ ಜೀವನವೂ ನೋವಿನಿಂದಲೇ ಕೂಡಿದೆ. ರೀತು ಸಿಂಗ್ ನೇಪಾಳ ಮೂಲದವಳು. ತಾಯಿ ಜೊತೆಗೆ ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ಸೀತಾರಾಮ ಸೀರಿಯಲ್ಗೂ ಸಿಹಿ ಬಾಳಿಗೂ ಸಾಮ್ಯತೆ ಇದೆ. ಹೌದು. ಸೀತಾರಾಮ ಸೀರಿಯಲ್ ರೀತಿಯಲ್ಲಿಯೇ ಈಕೆಯ ನಿಜ ಜೀವನದ ಕೂಡ ಇದೆ. ಸೀತಾರಾಮ ಸೀರಿಯಲ್‌ನಲ್ಲಿ ಈಕೆಗೆ ಅಪ್ಪ ಇಲ್ಲ. ಅಮ್ಮನೇ ಸರ್ವಸ್ವ. ಅದೇ ರೀತಿ ರಿತು ರಿಯಲ್ ಲೈಫ್ ಸ್ಟೋರಿ ಕೂಡ. ಇದರ ಬಗ್ಗೆ ಖುದ್ದು ಅವರ ಅಮ್ಮನೇ ಹೇಳಿಕೊಂಡಿದ್ದರು. ಅದೇನೆಂದರೆ, ರಿತು ರಿಯಲ್ ಅಪ್ಪ ದೂರ ಆಗಿದ್ದಾರೆ. ಈಕೆಯ ರಿಯಲ್ ಲೈಫ್ನಲ್ಲಿಯೂ ಅಮ್ಮನೇ ಎಲ್ಲಾ. ಪತಿಯಿಂದ ದೂರವಾಗಿರುವ ರಿತು ಅಮ್ಮ, ಒಬ್ಬಂಟಿಯಾಗಿ ಮಗಳನ್ನು ಸಾಕುತ್ತಿದ್ದಾರೆ.
ಸೀತಾರಾಮದ ಸುಲೋಚನಾ ಪಾತ್ರದಿಂದ ಜೀವನದಲ್ಲಿ ಫಸ್ಟ್ ಟೈಮ್ ಮಾಸ್ಕ್ ಹಾಕ್ಕೊಂಡು ತಿರಗ್ತಾ ಇದ್ದೇನೆ!