ಮಲ್ಲೇಶ್ವರಂ ಬೀದಿಗಳಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ಮಾಡಿದ 'ಲಕ್ಷ್ಮಿ ನಿವಾಸ' ಜಾನವಿ; ಜೋಡಿ ಸೂಪರ್ ಎಂದ ಫ್ಯಾನ್ಸ್!

First Published | Nov 28, 2024, 3:10 PM IST

ಮದುವೆ ದಿನವೇ ಪ್ರೀ- ವೆಡ್ಡಿಂಗ್ ಫೋಟೋಗಳನ್ನು ಹಂಚಿಕೊಂಡ ಚಂದನಾ ಅನಂತಕೃಷ್ಣ. ಜೋಡಿ ಸೂಪರ್ ಎಂದ ನೆಟ್ಟಿಗರು.......

'ರಾಜಾ ರಾಣಿ' ಸೀರಿಯಲ್ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ಡ್ಯಾನ್ಸರ್ ಚಂದನಾ ಅನಂತಕೃಷ್ಣ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನಸ್ಸಿಗೆ ತುಂಬಾ ಹತ್ತಿರವಾಗಿದ್ದಾರೆ.

ಬಿಗ್ ಬಾಸ್ ರಿಯಾಲಿಟಿ ಶೋ ನಂತರ ಹೂ ಮಳೆ ಧಾರಾವಾಹಿಯಲ್ಲಿ ಮನೆ ಮಗಳ ಪಾತ್ರ ಮಾಡುತ್ತಾರೆ. ಈಗ ಜೀ ಕನ್ನಡ ವಾಹಿನಿಯಲ್ಲಿ ಲಕ್ಷ್ಮಿ ನಿವಾಸ ಧಾರಾವಾಹಿಯಲ್ಲಿ ಜಾನವಿಯಾಗಿ ಮಿಂಚುತ್ತಿದ್ದಾರೆ.

Tap to resize

ಜಾನವಿ ಪಾತ್ರ ಕಿರುತೆರೆ ವೀಕ್ಷಕರಿಗೆ ತುಂಬಾ ಹತ್ತಿರವಾಗಿದೆ. ಕರಿಯರ್ ಪೀಕ್‌ನಲ್ಲಿ ಇರುವಾಗಲೇ ಚಂದನಾ ತಮ್ಮ ಬಹುಕಾಲದ ಗೆಳೆಯ ಪ್ರತ್ಯಕ್ಷ್‌ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವುದಾಗಿ ಘೋಷಣೆ ಮಾಡುತ್ತಾರೆ.

ನವೆಂಬರ್ 28ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಇರುವ ಗುರು ನರಸಿಂಹ ಮಂದಿರಲ್ಲಿ ಚಂದನಾ ಮತ್ತು ಪ್ರತ್ಯಕ್ಷ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಮದುವೆಯಲ್ಲಿ ಬಣ್ಣದ ಪ್ರಪಂಚದ ಸ್ನೇಹಿತರು ಭಾಗಿಯಾಗಿದ್ದರು.

ಮದುವೆ ದಿನವೇ ಚಂದನಾ ತಾವು ಮಾಡಿಸಿರುವ ಪ್ರೀ-ವೆಡ್ಡಿಂಗ್ ಫೋಟೋಶೂಟ್‌ನ ಅಪ್ಲೋಡ್ ಮಾಡುತ್ತಾರೆ. ಮಲ್ಲೇಶ್ವರಂನ ಸುತ್ತ ಮುತ್ತಲು ವಿಡಿಯೋಗ್ರಾಫಿ ಮಾಡಿದ್ದಾರೆ.

ಮಲ್ಲೇಶ್ವರಂನ ಹೂ ಮಾರ್ಕೆಟ್‌ನಲ್ಲಿ ತಮ್ಮ ಹುಡುಗನಿಂದ ಹೂ ಮುಡಿಸಿಕೊಳ್ಳುತ್ತಾರೆ ಆ ನಂತರ ಸಿಟಿಆರ್‌ನಲ್ಲಿ ಮಸಾಲ ದೊಸೆ ತಿನ್ನುತ್ತಾರೆ ಹೊರ ಬಂದು ರಸ್ತೆಯಲ್ಲಿ ನಿಂತು ಇಬ್ಬರು ಟೀ ಕುಡಿಯುತ್ತಾರೆ.

ಚಂದನಾ ನಿವಾಸದಲ್ಲಿ ಮೆಹೇಂದಿ ಶಾಸ್ತ್ರ ನಡೆಯುತ್ತದೆ, ಪಾರ್ಟಿ ಹಾಲ್‌ನಲ್ಲಿ ಸಂಗೀತ್ ಕಾರ್ಯಕ್ರಮ ನಡೆಯುತ್ತದೆ. ಮದುವೆ ಮಂದಿರಲ್ಲಿ ವರಪೂಜೆ ಮತ್ತು ಮದುವೆ ನಡೆದಿದೆ. 

Latest Videos

click me!