ಭಾರತದ ಟಾಪ್-10 ಸುಂದರ ಗ್ರಾಮಗಳು; ಕರ್ನಾಟಕದ ಯಾವ ಹಳ್ಳಿ ಇದೆ?

First Published | Nov 28, 2024, 2:21 PM IST

ಭಾರತದಲ್ಲಿ ಅತ್ಯಂತ ಸುಂದರವಾದ ಟಾಪ್-10 ಹಳ್ಳಿಗಳು ಯಾವುವು ಗೊತ್ತಾ.? ಇದರಲ್ಲಿ ಕರ್ನಾಟಕದ ಈ ಹಳ್ಳಿಯೂ ಕೂಡ ಟಾಪ್ 10 ಸುಂದರ ಹಳ್ಳಿಗಳಲ್ಲಿ ಸ್ಥಾನ ಪಡೆದುಕೊಂಡಿರುವುದು ಕನ್ನಡಿಗರ ಹೆಮ್ಮೆಯ ವಿಷಯವಾಗಿದೆ.

ಬಿರ್ ಉತ್ತರ ಭಾರತದ ಹಿಮಾಚಲ ಪ್ರದೇಶ ರಾಜ್ಯದ ಜೋಗಿಂದರ್ ನಗರ ಕಣಿವೆಯ ಪಶ್ಚಿಮದಲ್ಲಿರುವ ಒಂದು ಗ್ರಾಮವಾಗಿದೆ. ಇದು ಭಾರತದ ಪ್ಯಾರಾಗ್ಲೈಡಿಂಗ್ ರಾಜಧಾನಿ ಎಂದು ಖ್ಯಾತಿಯಾಗಿದೆ. 1959ರ ಟಿಬೆಟಿಯನ್ ದಂಗೆಯ ನಂತರ ಟಿಬೆಟಿಯನ್ ನಿರಾಶ್ರಿತರಿಗೆ ನೆಲೆಯಾಗಿ 1960ರ ದಶಕದ ಆರಂಭದಲ್ಲಿ ಸ್ಥಾಪಿಸಲಾದ ಬಿರ್ ಗ್ರಾಮ ಟಿಬೆಟಿಯನ್ ಕಾಲೋನಿಯಾಗಿದೆ.

ಝಿರೋ ಭಾರತದ ಅರುಣಾಚಲ ಪ್ರದೇಶದಲ್ಲಿರುವ ಲೋವರ್ ಸುಬನ್ಸಿರಿ ಜಿಲ್ಲೆಯ ಒಂದು ಪಟ್ಟಣವಾಗಿದೆ. ಅಪಾಟಾನಿ ಸಾಂಸ್ಕೃತಿಕ ಕೇಂದ್ರವಾಗಿರುವ ಇದನ್ನು ಯುನೆಸ್ಕೋದ ವಿಶ್ವ ಪರಂಪರೆಯ ತಾಣವಾಗಿ ತಾತ್ಕಾಲಿಕ ಪಟ್ಟಿಯಲ್ಲಿ ಸೇರಿಸಲಾಗಿದೆ.

Tap to resize

ಕೊಲ್ಲಂಗೋಡು ಭಾರತದ ಕೇರಳದ ಪಾಲಕ್ಕಾಡ್ ಜಿಲ್ಲೆಯ ಒಂದು ಪಟ್ಟಣವಾಗಿದೆ. 2001ರ ಭಾರತದ ಜನಗಣತಿಯ ಪ್ರಕಾರ, ಕೊಲ್ಲಂಗೋಡು-I 18,583 ಜನಸಂಖ್ಯೆಯನ್ನು ಹೊಂದಿತ್ತು. ಕೊಲ್ಲಂಗೋಡು ರೈಲು ನಿಲ್ದಾಣವು ಊಟಾರದಲ್ಲಿದೆ. ಇದು ನೈಸರ್ಗಿಕವಾಗಿ ಅತ್ಯಂತ ಸುಂದರ ತಾಣವಾಗಿದ್ದು, ಭಾರತದ ಟಾಪ್ 10 ಸುಂದರ ಹಳ್ಳಿಗಳಲ್ಲಿ ಒಂದಾಗಿದೆ.

ನಾಕೋ ಗ್ರಾಮವು ಉತ್ತರ ಭಾರತದ ಹಿಮಾಲಯದಲ್ಲಿದೆ. ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ಟ್ರಾನ್ಸ್-ಹಿಮಾಲಯನ್ ಪ್ರದೇಶದಲ್ಲಿ ಭಾರತ-ಚೀನಾ ಗಡಿಯ ಸಮೀಪದಲ್ಲಿದೆ. ನಾಕೋ ಸರೋವರವು ಗ್ರಾಮದ ಗಡಿಯಲ್ಲಿದ್ದು, ಈ ಗ್ರಾಮದ ಸುಂದರ ನೋಟಕ್ಕೆ ಕಾರಣೀಭೂತವಾಗಿದೆ.

ಜಿರಂಗ್ ಗ್ರಾಮವನ್ನು ಭಾರತದ ಚಂದ್ರಗಿರಿ ಎಂದೂ ಕರೆಯುತ್ತಾರೆ. ಇದು ಒಡಿಶಾ ರಾಜ್ಯದ ಗಜಪತಿ ಜಿಲ್ಲೆಯ ಒಂದು ಸಣ್ಣ ಹಳ್ಳಿಯಾಗಿದೆ. ಇದೊಂದು ಸಣ್ಣ ಹಳ್ಳಿಯಾಗುದ್ದರೂ ಟಿಬೆಟಿಯನ್ ಜನರೇ ಹೆಚ್ಚಾಗಿ ಇಲ್ಲಿ ವಾಸವಾಗಿದ್ದಾರೆ. ಈ ಗ್ರಾಮಕ್ಕೆ ಜಿರಂಗ್ ಎಂದು ಹೆಸರು ಬರಲು ಇಲ್ಲಿನ ಬೌದ್ಧ ವಿಹಾರವೇ ಕಾರಣವಾಗಿದೆ. ಇಲ್ಲಿನ ಬೌದ್ಧ ವಿಹಾರವು ಪೂರ್ವ ಭಾರತದ ಅತಿ ದೊಡ್ಡ ಬೌದ್ಧ ವಿಹಾರಗಳಲ್ಲಿ ಒಂದಾಗಿದೆ.

ವರಂಗ ಗ್ರಾಮ ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿದೆ.2011ರ ಜನಗಣತಿಯ ಪ್ರಕಾರ, ಇದು 4,011 ಜನಸಂಖ್ಯೆಯನ್ನು ಹೊಂದಿದೆ. ಈ ಗ್ರಾಮವು ಪ್ರಮುಖ ಜೈನ ಕೇಂದ್ರವಾಗಿದೆ. ಇಲ್ಲಿ ಕೆರೆ ಬಸದಿ ಪ್ರಮುಖ ಪ್ರವಾಸಿ ತಾಣವೂ ಆಗಿದೆ. ಈ ಗ್ರಾಮವು ಕರ್ನಾಟಕದ ನಂಬರ್ 1 ಸುಂದರ ತಾಣವಾಗಿದೆ. ಇದು ಭಾರತದ ಟಾಪ್ 10 ಸುಂದರ ಹಳ್ಳಿಗಳಲ್ಲಿ ಒಂದಾಗಿದೆ.

ಮತ್ತೊಂದೆಡೆ ಶಿವಮೊಗ್ಗ ಜಿಲ್ಲೆಯ ಮತ್ತೂರು ಗ್ರಾಮವನ್ನೂ ಕೂಡ ಕರ್ನಾಟಕದ ಸುಂದರ ಗ್ರಾಮಗಳಲ್ಲಿ ಟಾಪ್-1 ಸ್ಥಾನ ಪಡೆದುಕೊಂಡಿದೆ ಎಂದು ಹೇಳಲಾಗುತ್ತದೆ. ಈ ಮತ್ತೂರು ಗ್ರಾಮ ತನ್ನ ರಮಣೀಯ ಸೌಂದರ್ಯ ಮತ್ತು ಪ್ರಾಚೀನ ದೇವಾಲಯಗಳಿಗೆ ಹೆಸರುವಾಸಿಯಾಗಿದೆ.

ಲಮಾಯೂರೋ ಭಾರತದ ಲಡಾಖ್‌ನ ಲೇಹ್ ಜಿಲ್ಲೆಯ ಒಂದು ಹಳ್ಳಿಯಾಗಿದೆ. ಲಮಯೂರು ಮಠವು ಹತ್ತಿರದಲ್ಲಿದೆ. ಇದು ಖಾಲ್ಸಿ ತಹಸಿಲ್‌ನಲ್ಲಿದೆ. ಈ ಗ್ರಾಮದ ಸುತ್ತಮುತ್ತಲಿನ ಭೂಪ್ರದೇಶವು ಚಂದ್ರನ ಮೇಲ್ಮೈಯನ್ನು ಹೋಲುವುದರಿಂದ ಈ ಪ್ರದೇಶವನ್ನು 'ಮೂನ್ ಲ್ಯಾಂಡ್' ಎಂದೂ ಕರೆಯಲಾಗುತ್ತದೆ.

ಇದನ್ನೂ ಓದಿ: 2 ದಿನದ ಟ್ರಿಪ್ ಹೋಗಲು ವಿಶ್ವದ ಟಾಪ್ 5 ಸಣ್ಣ ದೇಶಗಳಿವು

ಖಿಮ್ಸರ್ ಗ್ರಾಮವನ್ನು ಭಾರತದ ಥಾರ್ ಮರುಭೂಮಿಯ ಹೃದಯಭಾಗದಲ್ಲಿ ಅಡಗಿರುವ ಗುಪ್ತ ರತ್ನ ಎಂದೇ ಕರೆಯುತ್ತಾರೆ. ಈ ವಿಶಿಷ್ಟ ಗ್ರಾಮವು ಚಿನ್ನದ ಬಣ್ಣದಲ್ಲಿರುವ ಮರಳಿನ ನಡುವೆ ಒಂದು ಅದ್ಭುತವಾದ ಓಯಸಿಸ್ ಅನ್ನು ಹೊಂದಿದೆ. ಇದು ಶಾಂತವಾದ ಅನುಭವವನ್ನು ನೀಡುತ್ತದೆ. ಇದೊಂದು ಪ್ರವಾಸಿ ತಾಣವೂ ಆಗಿದೆ.

ಮನ ಎಂಬ ಗ್ರಾಮವು ಭಾರತದ ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿದೆ. ಇದು ಸಮುದ್ರ ಮಟ್ಟದಿಂದ 3,200 ಮೀಟರ್‌ಗಳು (10,500 ಅಡಿ) ಎತ್ತರದಲ್ಲಿದೆ. ಇದು ರಾಷ್ಟ್ರೀಯ ಹೆದ್ದಾರಿ 7ರ ಉತ್ತರದ ಟರ್ಮಿನಸ್‌ನಲ್ಲಿದೆ. ಇದು ಮನಾ ಪಾಸ್‌ನ ಮೊದಲ ಗ್ರಾಮವಾಗಿದೆ ಮತ್ತು ಭಾರತ ಮತ್ತು ಟಿಬೆಟ್‌ನ ಗಡಿಯಿಂದ 26 ಕಿಲೋಮೀಟರ್ ದೂರದಲ್ಲಿದೆ. ಹಾಗಾಗಿ ಇದನ್ನು ಭಾರತದ ಕೊನೆಯ ಗ್ರಾಮವೆಂದೂ ಕರೆಯುತ್ತಾರೆ.

ಅರು ಗ್ರಾಮ ಕಾಶ್ಮೀರದಲ್ಲಿದೆ, ಇದನ್ನು ಅಡವ್ ಎಂದು ಕರೆಯುತ್ತಾರೆ. ಇದು ಭಾರತದ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಒಂದು ಹಳ್ಳಿಯಾಗಿದ್ದು, ಪ್ರಮುಖ ಪ್ರವಾಸಿ ತಾಣವಾಗಿದೆ. ಇದು ಜಿಲ್ಲಾ ಕೇಂದ್ರವಾದ ಅನಂತನಾಗ್ ನಗರದಿಂದ 53 ಕಿಮೀ ದೂರದಲ್ಲಿದೆ. ಇದು ಪಹಲ್ಗಾಮ್‌ನಿಂದ ಸುಮಾರು 12 ಕಿಮೀ ದೂರದಲ್ಲಿದೆ. ಇನ್ನು ಈ ಹಳ್ಳಿ ಚಳಿಗಾಲದಲ್ಲಿ ಮಂಜಿನಿಂದ ಆವೃತವಾಗಿದ್ದು, ಉಳಿದ ದಿನಗಳಲ್ಲಿ ಹಚ್ಚ ಹಸಿರಿನಿಂದ ಕೂಡಿರುತ್ತದೆ.

ಮೂಲ ಮಾಹಿತಿ: https://x.com/VertigoWarrior/status/1591325948770590721

Latest Videos

click me!