Kashmir Killings: ಕಣಿವೆಯಲ್ಲಿ ಹರಿಯುತ್ತಿದೆ ಹಿಂದೂಗಳ ರಕ್ತದ ಕೋಡಿ: ಕಾಶ್ಮೀರ್ ಫೈಲ್ಸ್ ರಿ ಓಪನ್?

Jun 2, 2022, 8:07 PM IST

ನವದೆಹಲಿ (ಜೂ. 02):  ಕಾಶ್ಮೀರದಲ್ಲಿ ಆರ್ಟಿಕಲ್ 370 (Article 360) ತೆಗೆದ ಮೇಲೆ ಅಲ್ಲಿ ಶಾಂತಿ ನೆಲೆಸುತ್ತೆ ಅನ್ನೋ ಅಭಿಪ್ರಾಯ ಎಲ್ಲಾ ಕಡೆ ಮೂಡಿತ್ತು. ಆದರೆ ಇತ್ತೀಚಿಗೆ ಉಗ್ರರ (Terrorist) ಉಪಟಳ ಜೋರಾಗಿದೆ. ಉಗ್ರರು ಅನ್ನೋದಕ್ಕಿಂತ ಮತಾಂಧರು ಅನ್ನಬಹುದು. ಯಾಕಂದ್ರೆ ಕಾಶ್ಮೀರದ ಪಂಡಿತರನ್ನೇ (Kashmir Pandits)ಹುಡುಕಿ ಹುಡಕಿ ಹತ್ಯೆ ಮಾಡ್ತಾ ಇದಾರೆ. ಈಗ ಹೊಸದು ಅನ್ನೊ ಹಾಗೇ ಹಿಂದೂ ಶಿಕ್ಷಕಿಯನ್ನ ಟಾರ್ಗೆಟ್ ಮಾಡಿ ಕೊಂದು ಹಾಕಿದ್ದಾರೆ ಮತಾಂಧ ರಾಕ್ಷಸರು.  

ಮೋದಿ (Narendra Modi) ಸರ್ಕಾರದ ಅತಿ ದೊಡ್ಡ ಸಾಧನೆಗಳಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲೋದು ಕಾಶ್ಮೀರದ ಸ್ಪೆಷಲ್ ಸ್ಟೇಟಸ್  ರಿಮೂವ್ ಮಾಡಿದ್ದು. ಈ ಕಾರ್ಯದಿಂದ, ಇನ್ಮುಂದೆ ಕಾಶ್ಮೀರದಲ್ಲಿ ಭಯೋತ್ಪಾದನೆಯೇ ಇರಲ್ಲ ಅಂತ ನಂಬಲಾಗಿತ್ತು. ಆದರೆ, ಸಾಲು ಸಾಲು ಹತ್ಯೆಗಳು, ಆ ಮಾತಿನ ಮೇಲೇ ಅಪನಂಬಿಕೆ ಹುಟ್ಟಿಸ್ತಾ ಇದಾವೆ. ಅಂಥದ್ದೇ ವಾತಾವರಣಕ್ಕೆ, ಈಗಿನ ಈ ಹೋರಾಟವೂ ಸಾಕ್ಷಿಯಾಗ್ಬಿಟ್ಟಿದೆ.

ಇದನ್ನೂ ಓದಿ: ಕಾಶ್ಮೀರದಲ್ಲಿ ಹೆಚ್ಚಿದ ಉಗ್ರರ ಅಟ್ಟಹಾಸ: ಅಜಿತ್ ದೋವಲ್ ಭೇಟಿ ಮಾಡಿದ ಅಮಿತ್ ಷಾ

ಇಷ್ಟೂ ಕಾಲ ಸಮುದದ್ರದ ಮಧ್ಯದಲ್ಲಿ ಇದ್ದೂ ಇಲ್ಲದ ಹಾಗೆ ಸದ್ದು ಮಾಡೋ ಬಡಬಾಗ್ನಿಯ ಹಾಗಿತ್ತು ಕಾಶ್ಮೀರಿ ಪಂಡಿತರ ಆಕ್ರೋಶ. ಆದರೆ ಇನ್ಮುಂದೆ ಅದ್ಯಾವುದನ್ನೂ ಸಹಿಸೋದಿಲ್ಲ ಅನ್ನೋದನ್ನ ಓಪನ್ನಾಗೇ ಜಗತ್ತಿಗೆ ಸಾರಿ ಹೇಳ್ತಾ ಇದೆ, ಕಾಶ್ಮೀರದ ಅಲ್ಪಸಂಖ್ಯಾತ ಸಮುದಾಯ. ಕಾಶ್ಮೀರದ ಕಣಿವೆಯಲ್ಲಿ ಹರಿಯುತ್ತಿರೋ ಹಿಂದೂಗಳ ರಕ್ತದ ಕಥೆಯ ಕುರಿತು ಒಂದು ವರದಿ ಇಲ್ಲಿದೆ