ವಾಸುಕಿ ಬಗ್ಗೆ ಪುರಾಣಗಳಲ್ಲಿ ಬರೋ ರೋಚಕ ಕತೆಗಳನ್ನು ಈಗ ನೋಡೋಣ. ವಾಸುಕಿ, ಶಿವನ ಕೊರಳಲ್ಲಿರುವ ಹಾವು. ಸಮುದ್ರ ಮಥನದಲ್ಲಿ ಮಂತುಬಳ್ಳಿಯಾಗಿ ಬಳಕೆಯಾದ ಹಾವೂ ಇದೇ. ಅದು ಶಿವನ ಕೊರಳಲ್ಲಿ ಯಾಕಿದೆ?
ಪುರಾಣದಲ್ಲಿ ಬರುವ ವಾಸುಕಿ, ಶೇಷನಾಗ, ಆದಿಶೇಷ ಮುಂತಾದ ಬೃಹತ್ ಸರ್ಪಗಳ ಕತೆಗಳನ್ನು ನೀವು ಕೇಳಿರಬಹುದಲ್ವಾ? ಇದು ಬರೀ ಕತೆಗಳೆಂದು ಇನ್ನು ಮುಂದೆ ತಳ್ಳಿ ಹಾಕಬೇಡಿ. ಯಾಕೆಂದರೆ ಇಂಥದೊಂದು ಸರ್ಪಜಾತಿ ಭಾರತದಲ್ಲಿ ವಾಸಿಸುತ್ತಿದ್ದುದನ್ನು ವಿಜ್ಞಾನಿಗಳು ಖಚಿತಪಡಿಸಿದ್ದಾರೆ. ಪುರಾಣದ ʼವಾಸುʼಯ ನೆನಪಿನಲ್ಲಿ ಇದಕ್ಕೆ ʼವಾಸುಕಿ ಇಂಡಿಕಸ್ʼ ಎಂದೂ ಹೆಸರಿಟ್ಟಿದ್ದಾರೆ. ಬರೋಬ್ಬರಿ 50 ಅಡಿ ಉದ್ದದ್ದ ಈ ಹಾವು ಸಾವಿರಾರು ಕಿಲೋ ತೂಗುತ್ತಿತ್ತು ಎಂದು ಗೊತ್ತಾಗಿದೆ.
ಅದಿರಲಿ, ವಾಸುಕಿಯ ಬಗ್ಗೆ ಪುರಾಣಗಳಲ್ಲಿ ಬರೋ ರೋಚಕ ಕತೆಗಳನ್ನು ಈಗ ನೋಡೋಣ. ವಾಸುಕಿ, ಶಿವನ ಕೊರಳಿನಲ್ಲಿರುವ ಹಾವು. ಸಮುದ್ರ ಮಥನದಲ್ಲಿ ಮಂತುಬಳ್ಳಿಯಾಗಿ ಬಳಕೆಯಾದ ಹಾವೂ ಇದೇ. ಅದು ಶಿವನ ಕೊರಳಲ್ಲಿ ಯಾಕಿದೆ? ಆ ಬಗ್ಗೆ ಕತೆ ಹೀಗಿದೆ:
ಒಮ್ಮೆ ದುರ್ವಾಸರ ಶಾಪದಿಂದ ಸ್ವರ್ಗದ ಸುವಸ್ತಗಳು ಸಮುದ್ರದಲ್ಲಿ ಮುಳುಗಿಹೋದವು. ಅದನ್ನೆಲ್ಲ ಹೊರ ತೆಗೆಯಲು ಸಮುದ್ರ ಮಥನವೇ ದಾರಿಯಾಗಿತ್ತು. ಆಗ ತ್ರಿಮೂರ್ತಿಗಳ ಸೂಚನೆಯಂತೆ ಮಂದರಪರ್ವತವನ್ನೇ ಕಡೆಗೋಲನ್ನಾಗಿಸಿ ಕಡೆಯಲು ಉದ್ದೇಶಿಸಲಾಯಿತು. ಅದಕ್ಕೆ ಸುತ್ತು ತರುವಷ್ಟು ಉದ್ದದ ಬಳ್ಳಿ ಎಲ್ಲಿದೆ? ವಾಸುಕಿ ಸರ್ಪರಾಜ ತಾನೇ ಆ ಬಳ್ಳಿಯಾಗಲು ಒಪ್ಪಿದ. ಆತನನ್ನು ಮಂದರ ಪರ್ವತಕ್ಕೆ ಸುತ್ತಿ ಮಥಿಸಲಾಯಿತು. ಆಗ ಮೊದಲಿಗೆ ಹಾಲಾಹಲ ಉಕ್ಕಿಬಂತು. ಅದು ದೇವತೆಗಳನ್ನು ಸುಡಲಾರಂಭಿಸಿದಾಗ, ಕೋಲಾಹಲ ಉಂಟಾಯಿತು. ದೇವತೆಗಳನ್ನು ಕಾಪಾಡಲು ಶಿವನೇ ಅದನ್ನು ಹೀರಿ ಗಂಟಲಲ್ಲಿ ಇಟ್ಟುಕೊಂಡ. ಹಾಗೆ ನೀಲಕಂಠನಾದ. ಆದರೆ ಇನ್ನೂ ಸಾಕಷ್ಟು ವಿಷ ಉಳಿಯಿತು. ಆಗ ಅದನ್ನು ವಾಸುಕಿ ಮತ್ತು ಆತನ ಸಹಚರ ಸರ್ಪಗಳು ಸೇರಿ ಸೇವಿಸಿ ಹಲ್ಲುಗಳಲ್ಲಿ ಇಟ್ಟುಕೊಂಡು, ದೇವತೆಗಳನ್ನು ಕಾಪಾಡಿದವು. ವಾಸುಕಿಯ ಈ ಸೇವೆಯಿಂದ ಸಂಪ್ರೀತನಾದ ಪರಮಶಿವ, ಆತನನ್ನು ತನ್ನ ಕೊರಳ ಸುತ್ತ ಕಂಠಾಭರಣವಾಗಿ ಧರಿಸಿ ಶಾಶ್ವತ ಸ್ಥಾನ ನೀಡಿದ.
ವಾಸುಕಿಯು ಕಶ್ಯಪ ಮುನಿ ಹಾಗೂ ಕದ್ರು ದಂಪತಿಯ ಮಗ. ಕದ್ರುವು ಸರ್ಪಗಳಿಗೆಲ್ಲ ತಾಯಿ. ವಾಸುಕಿಯ ತಲೆಯ ಮೇಲೆ ಒಂದು ನಾಗಮಣಿ ಇರುತ್ತದೆ. ಅದು ಆತ ಸರ್ಪರಾಜ ಎಂಬುದರ ಪ್ರತೀಕ. ಮಹಾವಿಷ್ಣುವಿನ ಹಾಸಿಗೆಯಾದ ಆದಿಶೇಷ, ಈ ವಾಸುಕಿಯ ಅಣ್ಣ. ವಾಸುಕಿ ತಂಗಿಯರೂ ಇದ್ದಾರೆ. ಅವರ ಹೆಸರು ಜರತ್ಕಾರು ಮತ್ತು ಮಾನಸ.
ಪುರಾಣದಲ್ಲಿ ಉಲ್ಲೇಖಿತ ಶ್ರೀಕೃಷ್ಣನೊಂದಿಗೆ ನಂಟು ಹೊಂದಿರುವ ದೈತ್ಯ ಹಾವು ವಾಸುಕಿ ಇದ್ದಿದ್ದು ನಿಜ!
ಒಮ್ಮೆ ಕದ್ರು ತನ್ನ ಸವತಿ ವಿನತೆಯ ಜೊತೆಗೆ, ಇಂದ್ರನ ಕುದುರೆ ಉಚ್ಚೈಶ್ರವಸ್ಸಿನ ಬಾಲದ ತುದಿ ಕಪ್ಪು ಎಂದು ಪಂಥ ಕಟ್ಟಿದಳು. ಅದು ಕಪ್ಪಲ್ಲ, ಬಿಳಿ ಎಂದು ಗೊತ್ತಿದ್ದ ಆಕೆ, ಬಾಲದ ತುದಿಗೆ ಅಂಟಿಕೊಂಡು ಕಪ್ಪಾಗಿ ಕಾಣುವಂತೆ ತನ್ನ ಮಕ್ಕಳಿಗೆ ಸೂಚಿಸಿದಳು. ಆದರೆ ವಾಸುಕಿಯೂ ಸೇರಿದಂತೆ ಮಕ್ಕಳು ನಿರಾಕರಿಸಿದರು. ಇದರಿಂದ ಕ್ರುದ್ಧಳಾದ ಕದ್ರು, ನೀವೆಲ್ಲ ಜನಮೇಜಯನ ಸರ್ಪಯಾಗದಲ್ಲಿ ಬಿದ್ದು ಸತ್ತುಹೋಗಿ ಎಂದು ಶಪಿಸಿದಳು. ಮುಂದೆ ಮಹಾಭಾರತವೆಲ್ಲ ಮುಗಿದ ಬಳಿಕ, ಅರ್ಜುನನ ಮೊಮ್ಮಗ ಪರೀಕ್ಷಿತ ರಾಜನನ್ನು ತಕ್ಷಕ ಸರ್ಪ ಕಚ್ಚಿ ಕೊಂದ. ಇದರಿಂದ ರೊಚ್ಚಿಗೆದ್ದ ಆತನ ಮಗ ಜನಮೇಜಯ ಸರ್ಪಯಾಗ ಆರಂಭಿಸಿದ. ಸರ್ಪಗಳೆಲ್ಲ ಬಂದು ಯಾಗಕ್ಕೆ ಬಿದ್ದು ಸಾಯಲಾರಂಭಿಸಿದವು.
ಇದನ್ನು ತಪ್ಪಿಸಲು ಒಂದೇ ದಾರಿಯಿತ್ತು. ವಾಸುಕಿಯ ಸಹೋದರಿ ಜರತ್ಕಾರು ಮತ್ತು ಅದೇ ಹೆಸರಿನ ಒಬ್ಬ ಮುನಿ- ಇಬ್ಬರ ಸಂಯೋಗದಿಂದ ಜನಿಸಿದ ಮಗನೇ ಜನಮೇಜಯನ ಮನವೊಲಿಸಿ ಯಾಗವನ್ನು ನಿಲ್ಲಿಸಬೇಕಿತ್ತು. ವಾಸುಕಿಯು ಜರತ್ಕಾರುವನ್ನು ಜರತ್ಕಾರು ಮುನಿಗೆ ಮದುವೆ ಮಾಡಿಕೊಟ್ಟು, ಅವರಲ್ಲಿ ಆಸ್ತಿಕ ಎಂಬ ಹೆಸರಿನ ಮಗ ಜನಿಸಿ, ಆತ ಜನಮೇಜಯನಲ್ಲಿಗೆ ಧಾವಿಸಿ ವಿನಂತಿಸಿಕೊಂಡು ಯಾಗವನ್ನು ನಿಲ್ಲಿಸುವಂತೆ ಮಾಡಿದ. ಹೀಗೆ ಸರ್ಪಕುಲವನ್ನು ಉಳಿಸಿದ ದೊಡ್ಡ ಹೆಗ್ಗಳಿಕೆಯೂ ಇವನಿಗೆ ಇದೆ.
ತ್ರಿಪುರಾಸುರರು ಎಂಬ ಮೂವರು ರಾಕ್ಷಸರು ಬ್ರಹ್ಮನ ವರಬಲದಿಂದ ಕೊಬ್ಬಿ ಮೆರೆಯುತ್ತಿದ್ದರು. ಬ್ರಹ್ಮ ವಿಷ್ಣು ಮಹೇಶ್ವರರು ಒಟ್ಟಾಗಿ ಬಂದರೆ ಮಾತ್ರ ಇವರನ್ನು ಕೊಲ್ಲಲು ಸಾಧ್ಯವಿತ್ತು. ಆಗ ತ್ರಿಮೂರ್ತಿಗಳೂ ಜೊತೆಯಾಗಿ ಬಂದು, ಈಶ್ವರ ಈ ಅಸುರರ ಜೊತೆ ಯುದ್ಧ ಮಾಡಿ ಅವರನ್ನು ಕೊಂದ. ಆಗ ಮಂದರ ಪರ್ವತವನ್ನು ಬಿಲ್ಲನ್ನಾಗಿ, ವಾಸುಕಿಯನ್ನು ಆ ಬಿಲ್ಲಿಗೆ ಕಟ್ಟಿದ ಹಗ್ಗವಾಗಿ ಹಿಂದೂ ಧರ್ಮದ ಐದು ಶಕ್ತಿಯುತ ಹಾವುಗಳು ಇವೇ ನೋಡಿ..