ಯಾವ ಮಹಾನ್ ನಾಯಕರೀ ಇವ್ನು? ಜೈ ಶ್ರೀರಾಮ್ ಕೂಗೋದಕ್ಕೂ ಇವನಿಗೂ ಏನು ಸಂಬಂಧ: ಬಷೀರುದ್ದೀನ್ ವಿರುದ್ಧ ಬಿಜೆಪಿ ಶಾಸಕ ಗರಂ

By Ravi Janekal  |  First Published May 4, 2024, 2:35 PM IST

ಇವನು ಯಾವ ಮಹಾನ್ ನಾಯಕರೀ.. ಜೈ ಶ್ರೀರಾಮ್‌ ಘೋಷಣೆ ಕೂಗುವುದಕ್ಕೂ ಇವನಿಗೂ ಏನು ಸಂಬಂಧ? ಇವನು ಯಾಕೆ ಆ ಹೇಳಿಕೆ ಕೊಡಬೇಕು? ಇಂಥ ಹೇಳಿಕೆ ನೀಡುವಾಗ ಪೊಲೀಸರು ತಕ್ಷಣ ಹಿಡಿದುಕೊಂಡು ಬಂದು ಲೆದರ್ ಬೂಟಿನಿಂದಲೇ ಹೊಡೀಬೇಕು ಎಂದು ಕಾಂಗ್ರೆಸ್ ಮುಖಂಡ ಬಶೀರುದ್ಧೀನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


ರಾಯಚೂರು (ಮೇ.4): ಭಾರತ ನಮ್ಮದು, ಈ ದೇಶದಲ್ಲಿ ಎಲ್ಲಿ ಬೇಕಾದರೂ ನಾವು ಜೈ ಶ್ರೀರಾಮ್ ಘೋಷಣೆ ಕೂಗುತ್ತೇವೆ. ಜೈ ಶ್ರೀರಾಮ್ ಹೇಳುವ ಹಕ್ಕು ನಮಗೆ ಇದೆ. ಈ ಹಕ್ಕು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ರಾಯಚೂರು ನಗರ ಶಾಸಕ ಡಾ ಶಿವರಾಜ್ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.

ಜೈ ಶ್ರೀರಾಮ್ ಘೊಷಣೆ ಕೂಗಿದವರಿಗೆ ಬೂಟುಗಾಲಲ್ಲಿ ಒದೆಯಬೇಕು ಎಂಬ ಕಾಂಗ್ರೆಸ್ ಮುಖಂಡನ ಉದ್ಧಟತನ ಹೇಳಿಕೆ ಖಂಡಿಸಿ ನಗರ ಜಿಲ್ಲಾಧಿಕಾರಿ ಕಚೇರಿ ಎದುರು ಉರಿಬಿಸಲಲ್ಲಿ ನೂರಾರು ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸಿದರು. ಬಳಿಕ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಶಾಸಕ ಡಾ. ಶಿವರಾಜ್ ಪಾಟೀಲ್, ಇವನು ಯಾವ ಮಹಾನ್ ನಾಯಕರೀ.. ಜೈ ಶ್ರೀರಾಮ್‌ ಘೋಷಣೆ ಕೂಗುವುದಕ್ಕೂ ಇವನಿಗೂ ಏನು ಸಂಬಂಧ? ಇವನು ಯಾಕೆ ಆ ಹೇಳಿಕೆ ಕೊಡಬೇಕು? ಇಂಥ ಹೇಳಿಕೆ ನೀಡುವಾಗ ಪೊಲೀಸರು ತಕ್ಷಣ ಹಿಡಿದುಕೊಂಡು ಬಂದು ಲೆದರ್ ಬೂಟಿನಿಂದಲೇ ಹೊಡೀಬೇಕು ಎಂದು ಕಾಂಗ್ರೆಸ್ ಮುಖಂಡ ಬಶೀರುದ್ಧೀನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Tap to resize

Latest Videos

undefined

'ಹಾಗೆ ಹೇಳಿದವನಿಗೆ 10 ಬೂಟುಗಳಿಂದ ಹೊಡೀಬೇಕು' ಕಾಂಗ್ರೆಸ್ ಮುಖಂಡನ ಉದ್ಧಟನದ ಹೇಳಿಕೆಗೆ ಬಿಜೆಪಿ ತಿರುಗೇಟು

ಘಟನೆ ಸಂಬಂಧ ಎಸ್‌ಪಿ ಪತ್ರಿಕಾ ಪ್ರಕಟಣೆ:

ಜೈ ಶ್ರೀರಾಮ್ ಘೊಷಣೆ ಕೂಗಿದವರಿಗೆ ಪೊಲೀಸರು ಬೂಟುಗಾಲಲ್ಲಿ ಒದ್ದು ಒಳಗೆ ಹಾಕಿ ಎಂಬ ಕಾಂಗ್ರೆಸ್ ಮುಖಂಡ ಬಶೀರುದ್ದೀನ್‌ ಉದ್ಧಟತನದ ಹೇಳಿಗೆ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಘಟನೆ ಸಂಬಂಧ ರಾಯಚೂರು ಜಿಲ್ಲಾ ಎಸ್‌ಪಿ ನಿಖಿಲ್.ಬಿ. ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು ತಪ್ಪಿಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.

ದಲಿತ ಕೇರಿಗೆ ಆಗಮಿಸಿ ಶ್ರೀರಾಮುಲು ಪರ ಮತಯಾಚನೆ ಮಾಡಿದ ಯದುವೀರ್ ಒಡೆಯರ್

ಸುಮಾರು ಆರೇಳು ತಿಂಗಳ ಹಳೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾ ಮೂಲಕ ವೈರಲ್ ಆಗಿದೆ. ವಿಡಿಯೋ ಹೇಳಿಕೆ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಿ ತಪ್ಪಿಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸುತ್ತೇವೆಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

click me!