ವಿಶ್ವ ಚಿರತೆ ದಿನ: 7 ವರ್ಷಗಳಲ್ಲಿ 140 ಮರಿಚಿರತೆ ತಾಯಿ ಜೊತೆ ಸೇರಿಸಿದ ಮಹಾರಾಷ್ಟ್ರ ಅರಣ್ಯ ಇಲಾಖೆ

By Suvarna NewsFirst Published May 4, 2024, 2:37 PM IST
Highlights

ಮೇ 3 ಅಂತಾರಾಷ್ಟ್ರೀಯ ಚಿರತೆ ದಿನ. ಮಹಾರಾಷ್ಟ್ರದ ಅರಣ್ಯ ಇಲಾಖೆ ಮತ್ತು ಎನ್‌ಜಿಒಗಳು ಕಳೆದ 7 ವರ್ಷಗಳಲ್ಲಿ 140 ಚಿರತೆ ಮರಿಗಳನ್ನು ತಮ್ಮ ತಾಯಿಯೊಂದಿಗೆ ಮತ್ತೆ ಸೇರಿಸಿವೆ.

ಮಹಾರಾಷ್ಟ್ರ, ಭಾರತದಲ್ಲಿ ಮೂರನೇ ಅತಿ ದೊಡ್ಡ ಚಿರತೆ ಸಂಖ್ಯೆಗೆ (1,985) ನೆಲೆಯಾಗಿದೆ. ಮಾನವ ಮತ್ತು ಚಿರತೆ ಪ್ರದೇಶಗಳ ನಡುವಿನ ಸೂಕ್ಷ್ಮ ಸಮತೋಲನಕ್ಕೆ ಸಾಕ್ಷಿಯಾಗಿದೆ. ಮಹಾರಾಷ್ಟ್ರದ ಅರಣ್ಯ ಇಲಾಖೆ ಮತ್ತು ಎನ್‌ಜಿಒಗಳು ಕಳೆದ 7 ವರ್ಷಗಳಲ್ಲಿ 140 ಚಿರತೆ ಮರಿಗಳನ್ನು ತಮ್ಮ ತಾಯಿಯೊಂದಿಗೆ ಮತ್ತೆ ಸೇರಿಸಿವೆ.

ಅಂತರಾಷ್ಟ್ರೀಯ ಚಿರತೆ ದಿನವು ಚಿರತೆಗಳ ಸಂರಕ್ಷಣೆಗಾಗಿ ಜಾಗೃತಿ ಮತ್ತು ಬೆಂಬಲವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಈ ಸಂದರ್ಭದಲ್ಲಿ ಮಹಾರಾಷ್ಟ್ರ ಅರಣ್ಯ ಇಲಾಖೆಯ ಕಾರ್ಯ ಶ್ಲಾಘನಾರ್ಹ. 

'ಈ ಮೈಲಿಗಲ್ಲು ಚಿರತೆ ಸಂರಕ್ಷಣಾ ಪ್ರಯತ್ನಗಳಲ್ಲಿ ಮಹತ್ವದ ಸಾಧನೆಯನ್ನು ಸೂಚಿಸುತ್ತದೆ. ಈ 140 ಮರಿಗಳು 2017 ಮತ್ತು 2024 ರ ನಡುವೆ ವಿದರ್ಭ ಮತ್ತು ಪಶ್ಚಿಮ ಮಹಾರಾಷ್ಟ್ರದಲ್ಲಿ ಮತ್ತೆ ಒಂದಾಗಿವೆ'  ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ನೋ ಪ್ಯಾಂಟ್ಸ್ ಡೇ; ಪ್ಯಾಂಟಿಯಲ್ಲೇ ಪೇಟೆ ಸುತ್ತಿದ ಪ್ಯಾಟೆ ಮಂದಿ!
 

ಕಬ್ಬು ತೋಟಗಳನ್ನು ರೈತರು ವಿಸ್ತರಿಸುತ್ತಾ ಸಾಗಿ, ಚಿರತೆಗಳ ವಾಸ ಪ್ರದೇಶ ಕಡಿಮೆಯಾಗುತ್ತಾ ಸಾಗಿದೆ. ಇದರಿಂದ ಮಾನವ ಚಿರತೆ ಸಂಘರ್ಷ ಹೆಚ್ಚಿದೆ. ಸಾಮಾನ್ಯವಾಗಿ ಹೆಣ್ಣು ಚಿರತೆಗಳು ದಟ್ಟವಾಗಿರುವ ಕಬ್ಬಿನ ಗದ್ದೆಯನ್ನು ಮರಿ ಇಡಲು ಸೂಕ್ತ ಪ್ರದೇಶ ಎಂದು ಪರಿಗಣಿಸುತ್ತವೆ. ಆದರೆ, ಕಬ್ಬು ಕಟಾವಿಗೆ ಬಂದಾಗ ರೈತರು ಅದನ್ನು ಕತ್ತರಿಸತೊಡಗುತ್ತಿದ್ದಂತೆ ಮರಿಗಳು ಕಾಣಿಸುತ್ತವೆ. ಅವುಗಳಿಂದ ಅಪಾಯ ಎಂದು ಎಲ್ಲೋ ಬಿಡಲಾಗುತ್ತದೆ. ಹೀಗೆ ತಾಯಿ ಮರಿ ಬೇರಾಗುತ್ತವೆ. 

ಸಾರಾ ತೆಂಡೂಲ್ಕರ್‌ಗೂ ಇತ್ತು ಪಿಸಿಒಎಸ್, ಮೊಡವೆಗಳ ಕಾಟ; ಆಕೆಯ ಪರಿಹಾರ ಮಾರ್ಗ ನಿಮ್ಮ ಪ್ರಯೋಜನಕ್ಕೂ ಬರುತ್ತೆ ನೋಡಿ..
 

ಇದೀಗ ಮಹಾರಾಷ್ಟ್ರ ಅರಣ್ಯ ಇಲಾಖೆ ಇಂಥ ಮರಿಗಳನ್ನು ಅವುಗಳ ತಾಯಿಯ ಬಳಿ ಬಿಡುವ ಕಾರ್ಯದಲ್ಲಿ ತೊಡಗಿದೆ. ಜೊತೆಗೆ, ತೆರೆದ ಬಾವಿಗಳು, ಹೈವೇಗಳಲ್ಲಿ ಕೂಡಾ ಮರಿ ಚಿರತೆಗಳು ಸಿಗುತ್ತವೆ. ಅವನ್ನೂ ಅವುಗಳ  ವಾಸಸ್ಥಾನಕ್ಕೆ ಕರೆದೊಯ್ದು ಬಿಡಲಾಗುತ್ತದೆ. ಇದು ಮಾಡಲೇಬೇಕಾದ ಕಾರ್ಯ. ಏಕೆಂದರೆ ಈ ಮರಿಗಳು ತಾಯಿಯೊಂದಿಗಿದ್ದಾಗ ಮಾತ್ರ ಭೇಟೆ ಮತ್ತಿತರೆ ಅರಣ್ಯದಲ್ಲಿರಲು ಬೇಕಾದ ಕೌಶಲಗಳನ್ನು ಕಲಿಯಲು ಸಾಧ್ಯ ಎನ್ನುತ್ತಾರೆ ಅಧಿಕಾರಿಗಳು. 

click me!