ಪ್ರಸಿದ್ಧ ಕಂಪನಿಗಳಲ್ಲಿ ಕೆಲಸ ಮಾಡೋದು ಪ್ರತಿಯೊಬ್ಬರ ಕನಸು. ಆದ್ರೆ ಕೆಲಸ ಸಿಕ್ಕಿ, ಕಂಪನಿ ಏಳ್ಗೆಗೆ ಪ್ರತಿ ದಿನ ದುಡಿದ ಮೇಲೆ ಏಕಾಏಕಿ ಕೆಲಸದಿಂದ ತೆಗೆದು ಹಾಕಿದರೆ ಪರಿಸ್ಥಿತಿ ಹೇಗಾಗಬೇಡ? ಟೆಸ್ಲಾದಲ್ಲಿ ಕೆಲಸ ಮಾಡ್ತಿದ್ದ ಮಹಿಳೆಯೊಬ್ಬರ ನೋವು ಭಾವನಾತ್ಮಕ ಪತ್ರದಲ್ಲಿ ರಿಫ್ಲೆಕ್ಟ್ ಆಗಿದೆ.
ವಿಶ್ವದ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಕೂಡ ಕೆಲಸದಲ್ಲಿ ಭದ್ರತೆ ಇಲ್ಲ. ಎಲೆನ್ ಮಸ್ಕ್ ರಂತಹ ಶ್ರೀಮಂತ ವ್ಯಕ್ತಿ ಮುನ್ನಡೆಸುತ್ತಿರುವ ಮಿಲಿಯನ್ ಲೆಕ್ಕದಲ್ಲಿ ವ್ಯವಹಾರ ಮಾಡುವ ಕಂಪನಿಯಲ್ಲಿ ಕೆಲಸ ಮಾಡ್ಬೇಕು ಎಂಬುದು ಬಹುತೇಕ ಎಲ್ಲರ ಕನಸು. ಆದ್ರೆ ಅಂಥ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ರಾತ್ರೋ ರಾತ್ರಿ ಕೆಲಸದಿಂದ ಹೊರಬೀಳುವ ದುಸ್ಥಿತಿ ಎದುರಿಸುತ್ತಿದ್ದಾರೆ. ಟೆಸ್ಲಾ ಇವಿ ಕಂಪನಿಯು ಈಗ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಎಲೆನ್ ಮಸ್ಕ್, ಟೆಸ್ಲಾದ ಸಂಪೂರ್ಣ ಚಾರ್ಜಿಂಗ್ ತಂಡವನ್ನು ಕೆಲಸದಿಂದ ತೆಗೆದು ಹಾಕಿದೆ. ಇದು ಎಲ್ಲರಿಗೂ ಅನಿರೀಕ್ಷಿತ ಮತ್ತು ಆಶ್ಚರ್ಯವನ್ನುಂಟು ಮಾಡಿದೆ.
ಟೆಸ್ಲಾ (Tesla) ದಿಂದ ವಜಾಗೊಂಡ ಈ ತಂಡದಲ್ಲಿ ಪಾಕಿಸ್ತಾನಿ (Pakistan) ಮೂಲದ ಮಹಿಳೆಯೊಬ್ಬರಿದ್ದರು. ಅವರು ಎಲೆನ್ ಮಸ್ಕ್ (Elen Musk) ರ ಎಲೆಕ್ಟ್ರಿಕ್ ವೆಹಿಕಲ್ ಉತ್ಪಾದನಾ ಕಂಪನಿ ಟೆಸ್ಲಾದ ಜಾಗತಿಕ ಚಾರ್ಜಿಂಗ್ ತಂಡದಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಕಳೆದುಕೊಂಡ ನಂತ್ರ ಬಿಸ್ಮಾ ರಹಮಾನ್, ಲಿಂಕ್ಡ್‌ಇನ್ ನಲ್ಲಿ ಭಾವನಾತ್ಮಕ ಟಿಪ್ಪಣಿಯನ್ನು ಹಂಚಿಕೊಂಡಿದ್ದಾರೆ. ಟೆಸ್ಲಾದಲ್ಲಿ ಕೆಲಸ ಮಾಡುವುದು ವಿಶೇಷ ಅಧಿಕಾರ ಮತ್ತು ಗೌರವ ಎಂದು ಅವರು ತಮ್ಮ ಪೋಸ್ಟಿನಲ್ಲಿ ಹೇಳಿದ್ದಾರೆ. ಕಂಪನಿಯಲ್ಲಿ ನಾನು ಕೆಲಸ ಮಾಡದಿದ್ದರೂ ನನ್ನ ಫೋಟೋ ಟೆಸ್ಲಾ ವೆಬ್‌ಸೈಟ್‌ನಲ್ಲಿರುತ್ತದೆ ಎಂದು ಬಿಸ್ಮಾ ರಹಮಾನ್ ಹೇಳಿದ್ದಾರೆ.
ಭಾರತಕ್ಕೂ ಬರಲಿದೆ ಟೆಸ್ಲಾ, ಎಲೋನ್ ಮಸ್ಕ್ ಉದ್ಯಮಕ್ಕೆ ಹೂಡಿಕೆ ಮಾಡ್ತಿರೋ ಬಿಲಿಯನೇರ್ ಯಾರು?
ಅತ್ಯಂತ ಸಮರ್ಪಿತ ಜನರ ಜೊತೆ ಕೆಲಸ ಮಾಡುವುದು ವಿಶೇಷಾಧಿಕಾರ ಮತ್ತು ಗೌರವದ ವಿಷ್ಯವಾಗಿತ್ತು. ಜಾರ್ಜಿಂಗ್ ಟೆಕ್ನಿಕ್ ಮತ್ತು ನೆಟ್ವರ್ಕ್ ನಿರ್ಮಾಣ ಕೆಲಸದಲ್ಲಿ ನಾನು ನನ್ನ ಮನಸ್ಸು ಮತ್ತು ಹೃದಯವನ್ನು ಸಂಪೂರ್ಣ ತೊಡಗಿಸಿಕೊಂಡಿದ್ದೆ. ಇದು ಟೆಕ್ಸಾ ಚಾಲಕರಿಗೆ ಮಾತ್ರ ಸೇವೆ ನೀಡಲಿಲ್ಲ. ಎಲ್ಲ ಇವಿಯನ್ನು ಸ್ವಾಗತಿಸಿತು. ಇದರಿಂದಾಗಿ ಇವಿ ಪ್ರಯಾಣಿಸುವುದು ಎಲ್ಲರಿಗೂ ಸುಲಭದ ಅನುಭವವಾಯಿತು ಎಂದು ಬಿಸ್ಮಾ ರೆಹಮಾನ್ ಬರೆದಿದ್ದಾರೆ.
500ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ತನ್ನ ಇಡೀ ತಂಡವನ್ನು ರಾತ್ರೋ ರಾತ್ರಿ ಹೊರ ಹಾಕಲಾಗಿದೆ. ಈ ವಿಷ್ಯ ತಿಳಿದು ನನಗೆ ಬೇಸರವಾಗಿದೆ ಎಂದು ಮಿಸ್ ರಹಮಾನ್ ಹಂಚಿಕೊಂಡಿದ್ದಾರೆ. ಪರಿಹಾರ ಪಡೆದ ಜನರು ತಮ್ಮ ಮುಂದಿನ ಕೆಲಸ ಮಾಡಲು ಸ್ಫೂರ್ತಿ ಪಡೆಯುತ್ತಾರೆ ಎಂದು ಮಿಸ್ ರೆಹಮಾನ್ ಆಶಿಸಿದ್ದಾರೆ.
ಟೆಕ್ಸಾದಲ್ಲಿ ಕೆಲಸ ಮಾಡಿದ ಅನುಭವವು ಸ್ಪೂರ್ತಿದಾಯಕಕ್ಕಿಂತ ಕಡಿಮೆ ಏನಿಲ್ಲ. ವೈಯಕ್ತಿಕ ಮತ್ತು ವೃತ್ತಿಪರರನ್ನು ಅಭಿವೃದ್ಧಿಪಡಿಸಲು ನನಗೆ ಕಂಪನಿ ಪ್ರೇರಣೆ ನೀಡಿತ್ತು ಎಂದು ಅವರು ಬರೆದಿದ್ದಾರೆ. ಮಿಸ್ ರಹಮಾನ್ ಈಗ ಹೊಸ ಉದ್ಯೋಗಾವಕಾಶಗಳನ್ನು ಪಡೆಯಲು ಅವರು ಲಿಂಕ್ಡ್‌ಇನ್ ನಲ್ಲಿ ಸಂಪರ್ಕಿಸಿದ್ದಾರೆ. ಮುಂದಿನ ದಾರಿ ಸುಗಮವಾಗಲು ಪರಸ್ಪರ ಪ್ರೇರಣೆ ಮತ್ತು ಬೆಂಬಲ ನೀಡುತ್ತಿರಿ ಎಂದು ಅವರು ತಮ್ಮ ಸಿಬ್ಬಂದಿಗೆ ಮನವಿ ಮಾಡಿದ್ದಾರೆ.
ಚೀನಾದಲ್ಲಿ ಇಲಾನ್ ಮಸ್ಕ್: ಭಾರತದಿಂದ ದೂರಾಗುತ್ತಿದೆಯೇ ಟೆಸ್ಲಾ ಗಮನ?
ಮಾರಾಟ ಕುಸಿತ ಮತ್ತು ವೇಗವಾಗಿ ಏರುತ್ತಿರುವ ಬೆಲೆಗಳ ಮಧ್ಯೆ, ಸೂಪರ್ ಚಾರ್ಜರ್ ಗುಂಪಿನಲ್ಲಿ ಕೆಲಸ ಮಾಡುವ ಸುಮಾರು 500 ಉದ್ಯೋಗಿಗಳನ್ನು ಟ್ರಿಮ್ ಮಾಡಲು ಟೆಸ್ಲಾ ಯೋಜಿಸಿತ್ತು. ಎಲೆನ್ ಮಾಸ್ಕ್ ಈ ಬಗ್ಗೆ ಇಮೇಲ್ ಮಾಡಿ ತಿಳಿಸಿದ್ದರು. ಕಂಪನಿಯು ರೆಬೆಕಾ ಟಿನುಚಿ ಮತ್ತು ಡೇನಿಯಲ್ ಹೋ ಎಂಬ ಇಬ್ಬರು ಹಿರಿಯ ಅಧಿಕಾರಿಗಳನ್ನು ವಜಾ ಮಾಡುವ ಬಗ್ಗೆಯೂ ಇಮೇಲ್ ಮಾಡಿದ್ದರು. ಅದನ್ನು ಮಿಸ್ ರೆಹಮಾನ್ ಉಲ್ಲೇಖಿಸಿದ್ದಾರೆ. ಟಿನುಚಿ, ಎಲೆಕ್ಟ್ರಿಕ್ ವಾಹನ ತಯಾರಕರ ಸೂಪರ್ ಚಾರ್ಜರ್ ವ್ಯವಹಾರದ ಹಿರಿಯ ನಿರ್ದೇಶಕರಾಗಿದ್ದರು. ಡೇನಿಯಲ್, ಟೆಸ್ಲಾ ಅವರ ಹೊಸ ವಾಹನ ಕಾರ್ಯಕ್ರಮದ ಮುಖ್ಯಸ್ಥರಾಗಿದ್ದರು. 2020 ರ ನಂತರ ಟೆಸ್ಲಾ ಅವರ ತ್ರೈಮಾಸಿಕ ಆದಾಯ ಮೊದಲ ಬಾರಿಗೆ ಕುಸಿಯಿತು ಎಂದು ಕಂಪನಿ ಕಳೆದ ವಾರ ಹೇಳಿದೆ.