ರಸ್ತೆ ಮಧ್ಯೆಯೇ ಯುವತಿಯ ಬಿಂದಾಸ್ ಡ್ಯಾನ್ಸ್, ಕಣ್ಮೊಚ್ಚೋದು ನೋ ಚಾನ್ಸ್!

Nov 21, 2019, 7:18 PM IST

ಇಂದೋರ್ (ನ.21): ಈ ಹುಡುಗಿ ಈಗ ಇಂಟರ್ನೆಟ್‌ನಲ್ಲಿ ನೆಟಿಜನ್‌ಗಳ ಹೃದಯ ಗೆದ್ದಿದ್ದಾಳೆ. ಆದರೆ ಕಣ್ಸನ್ನೆಯಿಂದಲ್ಲ, ರಸ್ತೆ ಮಧ್ಯೆ ಡ್ಯಾನ್ಸ್ ಮಾಡಿ! ಡ್ಯಾನ್ಸ್ ಮಾಡುತ್ತಾ ಟ್ರಾಫಿಕ್ ನಿಯಂತ್ರಿಸುವ ಈಕೆ ಶುಬಿ ಜೈನ್, ಇಂದೋರ್ ನ MBA ವಿದ್ಯಾರ್ಥಿನಿ.

ಇದನ್ನೂ ನೋಡಿ | ಟಿಕ್‌ಟಾಕ್ ಹುಚ್ಚಾಟಕ್ಕೆ ನಿಂತಿತು ಅಮ್ಮನ ಎದೆಬಡಿತ! ಮಗನಿಗೆ ಬಿತ್ತು ಸಖತ್ ಗೂಸಾ...

ಸ್ವಯಂಸೇವಕಳಾಗಿ ಈಕೆ ಇಂಟರ್ನ್‌ಶಿಪ್ ಮಾಡುತ್ತಿದ್ದು, ತನ್ನ ಹೆಜ್ಜೆಗಳಿಂದಾಗಿ ಜನರ ಹೃದಯಕ್ಕೆ ಲಗ್ಗೆಯಿಟ್ಟಿದ್ದಾಳೆ. ಟ್ರಾಫಿಕ್ ಪೇದೆ ಡ್ಯಾನ್ಸಿಂಗ್ ರಂಜಿತ್ ಸಿಂಗ್  ಗೊತ್ತಲ್ವಾ? ಅವರನ್ನೇ ಈಕೆ ಫಾಲೋ ಮಾಡೋದಂತೆ!