Hassan Sex Scandal: HD ರೇವಣ್ಣ ಎ1 , ಪ್ರಜ್ವಲ್ ಎ2 ಆರೋಪಿ, ಪಿನ್‌ ಟು ಪಿನ್‌ ಕಥೆ ಹೇಳಿದ ಸಂತ್ರಸ್ಥೆ!

By Suvarna News  |  First Published Apr 28, 2024, 7:07 PM IST

ಹಾಸನ ಅಶ್ಲೀಲ ವಿಡಿಯೋ ವೈರಲ್ ಹಿನ್ನೆಲೆ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಹೆಚ್  ಡಿ ರೇವಣ್ಣ ಮೇಲೆ  ಸಂತ್ರಸ್ಥೆಯೊಬ್ಬಳು ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ. ದೂರಿನಲ್ಲಿ ಸಂತ್ರಸ್ಥೆ ಎಳೆಎಳೆಯಾಗಿ ದೌರ್ಜನ್ಯವನ್ನು ಬಿಚ್ಚಿಟ್ಟಿದ್ದಾರೆ.


ಬೆಂಗಳೂರು (ಏ.28): ಹಾಸನ ಸಂಸದ, ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿರುವ  ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್‌ ಹಿನ್ನೆಲೆ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಇದರ ಜೊತೆಗೆ ಪ್ರಜ್ವಲ್ ರೇವಣ್ಣ ವಿರುದ್ಧ ಪ್ರಕರಣ ದಾಖಲಾಗಿದೆ. ಮಾತ್ರವಲ್ಲ ಹೆಚ್  ಡಿ ರೇವಣ್ಣ ಮೇಲೂ 47 ವರ್ಷದ ಸಂತ್ರಸ್ಥೆಯೊಬ್ಬಳು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಸದ್ಯ ಪ್ರಜ್ವಲ್‌ ರೇವಣ್ಣ ಜರ್ಮನಿಗೆ ತೆರಳಿದ್ದಾರೆ.

ರೇವಣ್ಣ ಎ1 , ಪ್ರಜ್ವಲ್‌ ಎ2 ಆರೋಪಿ:
ಹಾಸನ ಜಿಲ್ಲೆ ಹೊಳೆನರಸೀಪುರ ನಗರ  ಠಾಣೆಯಲ್ಲಿ‌ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಮೊದಲ ಎಫ್ ಐ ಆರ್ ದಾಖಲು ಮಾಡಲಾಗಿದೆ.  ನೇರವಾಗಿ  ಪ್ರಜ್ವಲ್ ರೇವಣ್ಣ ಮತ್ತು ಹೆಚ್‌ಡಿ ರೇವಣ್ಣ ವಿರುದ್ದ ಸಂತ್ರಸ್ಥೆ ದೂರು ನೀಡಿದ್ದಾರೆ. ಲೈಂಗಿಕ ದೌರ್ಜನ್ಯ, ಪದೇ ಪದೆ ಹಿಂಬಾಲಿಸಿ ದೌರ್ಜನ್ಯ ಎಸಗಿದ ಬಗ್ಗೆ ಆರೋಪಿಸಿದ್ದಾರೆ. ಮಹಿಳೆಯ ಘನತೆಗೆ ಧಕ್ಕೆ ಆರೋಪಿ ಸೇರಿ ಹಲವು ಐಪಿಸಿ ಸೆಕ್ಷೆನ್ ಗಳಡಿ ಕೇಸ್ ದಾಖಲಾಗಿದೆ.  IPC ಸೆಕ್ಷನ್ 354A, 354D, 506, 509ಅಡಿ ಎಫ್ಐಆರ್ ದಾಖಲು ಮಾಡಲಾಗಿದೆ.

Tap to resize

Latest Videos

ಅಶ್ಲೀಲ ವಿಡಿಯೋ ಪ್ರಕರಣ ಸುದ್ದಿಗಳು: ವಿದೇಶಕ್ಕೆ ಹಾರಿದ ಪ್ರಜ್ವಲ್‌, HD ರೇವಣ್ಣ ವಿರುದ್ಧವೂ ಸಂತ್ರಸ್ಥೆ ದೂರು!

ಮಹಿಳೆಯ ದೂರಿನಲ್ಲೇನಿದೆ?
ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಮಾಜಿ ಸಚಿವ ಎಚ್‌ಡಿ ರೇವಣ್ಣ ಮತ್ತು ಅವರ ಪುತ್ರ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಎಫ್ ಐ ಆರ್ ದಾಖಲಾಗಿದೆ. ದೂರಿನಲ್ಲಿ ದೌರ್ಜನ್ಯದ ಬಗ್ಗೆ ಸಂತ್ರಸ್ಥ ಮಹಿಳೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಹೊಳೆನರಸೀಪುರ ನಗರ ಠಾಣೆಗೆ ಹಾಜರಾಗಿ ನೀಡಿದ ದೂರಿನಲ್ಲಿ  ಎಚ್‌ಡಿ ರೇವಣ್ಣ  ಎ1 ಹಾಗೂ ಪ್ರಜ್ವಲ್ ರೇವಣ್ಣ ಎ2 ಆರೋಪದಲ್ಲಿ ದೂರು ನೀಡಿದ್ದಾರೆ.

ದೂರು ನೀಡಿರುವ ಸಂತ್ರಸ್ಥೆಗೆ ರೇವಣ್ಣ ಶಾಸಕರಾಗಿದ್ದಾಗ ನಾಗಲಾಪುರ ಹಾಲಿನ ಡೈರಿಯಲ್ಲಿ ಕೆಲಸ ಕೊಡಿಸಿದ್ದರು. ಬಳಿಕ ಬಿಸಿಎಂ ಹಾಸ್ಟಲ್  ಒಂದರಲ್ಲಿ ಅಡುಗೆ ಕೆಲಸಕ್ಕೆ ಸೇರಿಸಿದ್ದರು.  2015 ರಲ್ಲಿ  ತಮ್ಮ ಮನೆಗೆ ಅಡುಗೆ ಕೆಲಸಕ್ಕೆ ಬರುವಂತೆ ಹೇಳಿದ್ದರು. ಒಟ್ಟು 6 ಜನ ಹೆಣ್ಣು ಮಕ್ಕಳು ಮನೆಯಲ್ಲಿ ಕೆಲಸ ಮಾಡ್ತಾ ಇದ್ದರು. ಕೆಲಸಕ್ಕೆ ಸೇರಿಕೊಂಡ ನಾಲ್ಕು ತಿಂಗಳಿಗೆ ಕೊಠಡಿಗೆ ಬರುವಂತೆ ಆಹ್ವಾನಿಸಿ  ಮೈ ಕೈ ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ತಾವು ರೂಂನಲ್ಲಿದ್ದಾಗ ಹಣ್ಣು ಕೊಡೊ ನೆಪದಲ್ಲಿ ಕರೆದು ಸೀರೆ ಹಿಡಿದು ಎಳೆದಾಡಿದ್ದಾರೆ.  ಭವಾನಿ ರೇವಣ್ಣ ಮನೆಯಲ್ಲಿ ಇಲ್ಲದ ವೇಳೆಯಲ್ಲಿ ದೌರ್ಜನ್ಯ ಎಸಗಿದ್ದಾರೆಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಹಾಸನ ಅಶ್ಲೀಲ ವಿಡಿಯೋ ಎಸ್‌ಐಟಿಗೆ, ನಾನಾಗಲಿ-ದೇವೇಗೌಡರಾಗಲಿ ಈ ರೀತಿಯ ಕೆಲಸ ಮಾಡಿಲ್ಲ ಎಂದ ಹೆಚ್‌ಡಿಕೆ

ರೇವಣ್ಣ ಪುತ್ರ ಪ್ರಜ್ವಲ್ ಕೂಡ ಅಡುಗೆ ಮನೆಯಲ್ಲಿ ಬಂದು ಅಸಭ್ಯ ವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅಡುಗೆ ಮನೆಯಲ್ಲಿ ಇದ್ದಾಗ ಪ್ರಜ್ವಲ್ ರೇವಣ್ಣ ಹಿಂಬದಿಯಿಂದ ಬಂದು ಮೈ‌ಮುಟ್ಟಿ ಹೊಟ್ಟೆ ಚಿವುಟುತ್ತಿದ್ದರು. ಮೈಗೆ ಎಣ್ಣೆ ಹಚ್ಚಲೆಂದು ಕರೆಸಿ ದೌರ್ಜನ್ಯ ಎಸಗುತ್ತಿದ್ದರು. ಮಾತ್ರವಲ್ಲ ಸಂತ್ರಸ್ಥೆಯ  ಮಗಳಿಗೂ ವೀಡಿಯೋ ಕಾಲ್ ಮಾಡಿ ಪ್ರಜ್ವಲ್  ದೌರ್ಜನ್ಯ ಎಸಗುತ್ತಿರಂತೆ

ಪದೇ ಪದೆ ದೌರ್ಜನ್ಯ ಎಸಗಿದ ಬಳಿಕ ಸಂತ್ರಸ್ಥೆ ಪುತ್ರಿ ಪ್ರಜ್ವಲ್ ನಂಬರ್ ಬ್ಲಾಕ್ ಮಾಡಿದ್ದಳಂತೆ ಕಿರುಕುಳ ಹೆಚ್ಚಾದಾಗ ಕೆಲಸ ಬಿಟ್ಟು ಹೋಗಿದ್ದೇನೆ ದಂದು ಸಂತ್ರಸ್ಥೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹಾಸನದಲ್ಲಿ ವೈರಲ್‌ ಆಗುತ್ತಿರುವ ಅಶ್ಲೀಲ ವೈರಲ್ ವಿಡಿಯೋ ಪ್ರಜ್ವಲ್ ರೇವಣ್ಣರದ್ದು ಎಂದು ಹೇಳಲಾಗುತ್ತಿರುವ ಹಿನ್ನೆಲೆ ನನ್ನ ಗಂಡ ಶೀಲ ಶಂಕಿಸುತ್ತಿದ್ದಾರೆ. ಇದರಿಂದ ಮನನೊಂದು ದೂರು ನೀಡುತ್ತಿರೋದಾಗಿ ಮಹಿಳೆ ಉಲ್ಲೇಖಿಸಿದ್ದಾರೆ.

ಹಾಗಾದ್ರೆ ರಾಜಕಾರಣಿ ವಿರುದ್ಧ ದಾಖಲಾಗಿರೋ ಈ ಸೆಕ್ಷನ್ ಗಳು ಏನ್ ಹೇಳುತ್ತೆ?
ಲೈಂಗಿಕ‌ ಅನುಕೂಲಕ್ಕಾಗಿ ಬೇಡಿಕೆ ಇಡುವುದು
ಮಹಿಳೆಗೆ ಇಚ್ಛೆಗೆ ವಿರುದ್ಧವಾಗಿ ಅಶ್ಲೀಲತೆ ತೋರಿಕೆ ಮಾಡಿದವರ ವಿರುದ್ಧ 354A ಅಡಿ ಸೆಕ್ಷನ್ ದಾಖಲು ಮಾಡಲಾಗುತ್ತೆ. ಈ ಸೆಕ್ಷನ್ ಅಡಿ ಆರೋಪಿತ ವ್ಯಕ್ತಿಗೆ ಒಂದು ವರ್ಷ ಜೈಲು ಅಥವಾ ದಂಡ ವಿಧಿಸಲಾಗುತ್ತೆ

IPC 354D- ಪದೇ ಪದೇ ಮಹಿಳೆಯರನ್ನ ಸಂಪರ್ಕ ಬೆಳೆಸಲು ಪ್ರಯತ್ನ. ಇಂಟರ್ನೆಟ್ ಅಥವಾ ಇಮೇಲ್ ಅಥವಾ ವಿಡಿಯೋ ಕಾಲ್ ಸಂವಹನ. ಈ ಸೆಕ್ಷನ್ ಅಡಿ ದಂಡ ಅಥವಾ ಮೂರು ವರ್ಷ ಜೈಲು ವಿಧಿಸುವ ಸಾಧ್ಯತೆ. 

IPC 506- ಕ್ರಿಮಿನಲ್ ಬೆದರಿಕೆ ಒಡ್ಡುವುದು. ಕೊಲೆ ಬೆದರಿಕೆ ಅಥವಾ ತೀವ್ರ ದುಃಖವನ್ನ ಉಂಟುಮಾಡುವುದು. ಮಹಿಳೆಗೆ ಅಶ್ಲೀಲತೆಗೆ ಆರೋಪಿಸುವುದು. ಈ ಸೆಕ್ಷನ್ ಅಡಿ ಏಳು ವರ್ಷದ ವರೆಗೆ ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತೆ.

IPC 509- ಮಹಿಳೆಯ ನಮ್ರತೆಯನ್ನ ಅವಮಾನಿಸುವುದು. ಮಹಿಳೆಗೆ ಅವಮಾನಿಸೋ ಉದ್ದೇಶದಿಂದ ಅವರ ಗೌಪ್ಯತೆ ಒಳ ನುಗ್ಗುವುದು. ಈ ಸೆಕ್ಷನ್ ಅಡಿ 3 ವರ್ಷ ಸರಳ ಜೈಲು ಅಥವಾ ದಂಡ ವಿಧಿಸುವ ಸಾಧ್ಯತೆ. ಸದ್ಯ ಈ ಎಲ್ಲಾ ಸೆಕ್ಷನ್ ಗಳ ಅಡಿ ಎಫ್ಐಆರ್ ದಾಖಲಾಗಿದ್ದು, ಎಸ್ಐಟಿ ಟೀಂ ಮಾಹಿತಿ ಪಡೆಯುತ್ತಿದೆ.

ಹಿರಿಯ ಐಪಿಎಸ್ ಅಧಿಕಾರಿ , ಎಡಿಜಿಪಿ ಬಿ.ಕೆ ಸಿಂಗ್ ರನ್ನು ಎಸ್ಐಟಿ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಿ ಸರ್ಕಾರ ನೇಮಿಸಿದೆ.  ಸದ್ಯ ಸಿಐಡಿ ಯಲ್ಲಿ ಎಡಿಜಿಪಿ ಯಾಗಿದ್ದಾರೆ. ಈ ಹಿಂದೆ ಗೌರಿ ಲಂಕೇಶ್ ಕೊಲೆ  ಕೇಸ್ ನಲ್ಲಿ ಅತಿದೊಡ್ಡ ಪಾತ್ರ ವಹಿಸಿದ್ದರು. 3 ಎಸ್.ಪಿ,4ಡಿವೈಎಸ್ ಪಿ ಸೇರಿದಂತೆ ಎಸ್ ಐಟಿ ಟೀಂ ರಚನೆ ಮಾಡಲಾಗಿದೆ. ಮೊದಲು ಎಸ್ಐಟಿ ತಂಡ ಸಂತ್ರಸ್ಥರನ್ನು ಭೇಟಿ ಮಾಡಿ ಮಾಹಿತಿ ಪಡೆದು ದೂರು ದಾಖಲಿಸಿಕೊಳ್ಳುವ ಸಾಧ್ಯತೆ ಇದೆ. ಆ ಬಳಿಕ ವಿಡಿಯೋ ರೆಕಾರ್ಡ್ ಮಾಡಿರುವ ಮೊಬೈಲ್ (ಮದರ್ ಡಿವೈಸ್) ವಶಕ್ಕೆ ಪಡೆಯಲಿದ್ದಾರೆ. ಪರೀಕ್ಷೆ ನಡೆಸಿದ ಬಳಿಕ ಎಫ್ ಎಸ್ ಎಲ್ ವರದಿಯಲ್ಲಿ ವಿಡಿಯೋ ಅಸಲಿಯತ್ತಿನ ಬಗ್ಗೆ ತಿಳಿಯಲಿದೆ. 

click me!