ಸಿದ್ದರಾಮಯ್ಯ ಸಮಾವೇಶದಲ್ಲಿ ಅಕ್ಕಿಚೀಲ, ಮಜ್ಜಿಗೆ ಪ್ಯಾಕೆಟ್‌ಗೆ ಮುಗಿಬಿದ್ದ ಜನ!

Published : Apr 28, 2024, 08:42 PM IST

ಕಾಂಗ್ರೆಸ್ ಆಯೋಜಿಸಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ಅಕ್ಕಿ ಚೀಲದ ಪ್ಯಾಕೆಟ್‌ಗಾಗಿ ಜನರು ಕಿತ್ತಾಟ ನಡೆಸಿದ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದ PWD ಕ್ಯಾಂಪ್ ‌ನಲ್ಲಿ ನಡೆದಿದೆ.

PREV
15
ಸಿದ್ದರಾಮಯ್ಯ ಸಮಾವೇಶದಲ್ಲಿ ಅಕ್ಕಿಚೀಲ, ಮಜ್ಜಿಗೆ ಪ್ಯಾಕೆಟ್‌ಗೆ ಮುಗಿಬಿದ್ದ ಜನ!

ಲೋಕಸಭಾ ಚುನಾವಣಾ ಪ್ರಚಾರ ಹಿನ್ನೆಲೆ ಸಂಜೆ 6ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮ, ಆದರೆ ನಿಗದಿಯಾಗಿದ್ದ ಸಮಯಕ್ಕಿಂತ ಒಂದೂವರೆ ತಾಸು ತಡವಾಗಿ ಆರಂಭವಾದ ಕಾರ್ಯಕ್ರಮ

25

ಪ್ರಜಾಧ್ವನಿ ಕಾರ್ಯಕ್ರಮಕ್ಕೆ ಸುತ್ತಲು ಹಳ್ಳಿಗಳಿಂದ ಬಂದಿದ್ದ ಜನರು. ಮಧ್ಯಾಹ್ನದಿಂದ ಸಮಾವೇಶದ ಸ್ಥಳದಲ್ಲಿ ಕುಳಿತು ಬಿಸಲಿಗೆ ಸುಸ್ತಾಗಿದ್ದ ಜನರು. ಅಕ್ಕಿ ಪ್ಯಾಕೆಟ್‌ ಕಾಣುತ್ತಿದ್ದಂತೆ ಮುಗಿಬಿದ್ದ ಜನರು.

35

ಅಕ್ಕಿ ಪ್ಯಾಕೆಟ್‌ನಲ್ಲಿ ತುಂಬಿಕೊಂಡು ಬಂದಿದ್ದ ಕಾರ್ಯಕರ್ತರು. ಜನರು ಮುಗಿಬಿಳುತ್ತಿದ್ದಂತೆ ಜನರನ್ನು ಕಂಟ್ರೋಲ್ ಮಾಡುವಲ್ಲ ಪೊಲೀಸರೇ ಸುಸ್ತಾಗುವಂತೆ ಆಯಿತು. 

45

ಗೇಟ್ ಹಾಕಿದರೂ ನೂಕುನುಗ್ಗಲಲ್ಲಿ ಪ್ಯಾಕೆಟ್ ಪಡೆಯಲು ನೂಕಾಟ ತಳ್ಳಾಟ ಮಾಡಿದರು. ಈ ವೇಳೆ ಪೊಲೀಸರು ಸಹ ಜನರ ಮೇಲೆ ಗರಂ ಆಗಿ ನಾಲ್ಕೈದು ಲಾಠಿ ಕೊಟ್ಟರು. ಅಷ್ಟಕ್ಕೂ ನಿಯಂತ್ರಣಕ್ಕೆ ಬಾರದೆ ಜನರು ಅಕ್ಕಿ ಪಾಕೆಟ್‌ಗಳನ್ನು ಎತ್ತಿಕೊಂಡು ಕುರ್ಚಿಗಳತ್ತ ಓಡಾತೊಡಗಿದ್ದರು.

55

ಲೋಕಸಭಾ ಚುನಾವಣಾ ಪ್ರಚಾರ ಹಿನ್ನೆಲೆ ಸಂಜೆ 6ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮ, ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಶಿವರಾಜ ತಂಗಡಗಿ ಸೇರಿ ಅನೇಕ ಸಚಿವ ಶಾಸಕರು ಭಾಗಿಯಾಗಿದ್ದರು. ಆದರೆ ಕಾರ್ಯಕ್ರಮ ನಡೆಯುವ ಮುನ್ನವೇ ಅಕ್ಕಿ ಪಾಕೆಟ್‌ನಲ್ಲಿ ಮಜ್ಜಿಗೆ ಪಾಕೆಟ್ ಕಂಡು ನೂಕಾಟ ತಳ್ಳಾಟಕ್ಕೆ ಕಾರಣವಾಯಿತು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories