ಒಮ್ಮೆ ತಲೈವಾ ಖ್ಯಾತಿಯ ನಟ ರಜನಿಕಾಂತ್ ಅವರಿಗೆ ತಮ್ಮ ಚಿತ್ರದ ನಿರ್ಮಾಪಕ್ ಜತೆ ಕಿರಿಕ್ ಆಗಿತ್ತು. ಆಗ ನಿರ್ಮಾಪಕರು ರಜನಿಕಾಂತ್ ಅವರಿಗೆ ಹಾಕಿರುವ ಮೇಕಪ್ ತೆಗೆದು ಮನೆಗೆ ಹೋಗಲು ಹೇಳಿದ್ದರಂತೆ. ಆಗ ರಜನಿಕಾಂತ್...
ನಟ ರಜನಿಕಾಂತ್ (Rajinikanth) ಇಂದು ಆಗಸದೆತ್ತರಕ್ಕೆ ಬೆಳೆದಿದ್ದು ಗೊತ್ತೇ ಇದೆ. ಆದರೆ, ತಮ್ಮ ವೃತ್ತಿಜೀವನದ ಆರಂಭದಲ್ಲಿ ಅವರು ಸಾಕಷ್ಟು ಅವಮಾನ-ನೋವುಗಳನ್ನು ಅನುಭವಿಸಿದ್ದರು ಎಂದರೆ ನಂಬಲೇಬೇಕು. ನಟರಾಗಿ ಸಿನಿರಂಗದಲ್ಲಿ ಜರ್ನಿಯಲ್ಲಿದ್ದ ರಜನಿಕಾಂತ್ ಅವರು, ಒಮ್ಮೆ ಅವಮಾನ ಅನುಭವಿಸಿ ಸೇಡು ತೀರಿಸಿಕೊಂಡ ಘಟನೆಯೊಂದು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ. ಹಾಗಿದ್ದರೆ ಅದೇನು? ಈ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ..
ಒಮ್ಮೆ ತಲೈವಾ ಖ್ಯಾತಿಯ ನಟ ರಜನಿಕಾಂತ್ ಅವರಿಗೆ ತಮ್ಮ ಚಿತ್ರದ ನಿರ್ಮಾಪಕ್ ಜತೆ ಕಿರಿಕ್ ಆಗಿತ್ತು. ಆಗ ನಿರ್ಮಾಪಕರು ರಜನಿಕಾಂತ್ ಅವರಿಗೆ ಹಾಕಿರುವ ಮೇಕಪ್ ತೆಗೆದು ಮನೆಗೆ ಹೋಗಲು ಹೇಳಿದ್ದರಂತೆ. ಆಗ ರಜನಿಕಾಂತ್ ಅವರು, 'ಸರಿ ನಾನು ಮನೆಗೆ ಹೋಗುತ್ತೇನೆ. ಅಟ್‌ಲೀಸ್ಟ್ ಕಾರನ್ನಾದರೂ ಕಳಿಸಿ' ಎಂದು ಗೋಗರೆದಿದ್ದರಂತೆ. ಆದರೆ, ಅದಕ್ಕೆ ಸೊಪ್ಪು ಹಾಕದ ನಿರ್ಮಾಪಕರು 'ಕಾರೂ ಗೀರೂ ಇಲ್ಲ, ಏನೂ ಕಳಿಸುವುದಿಲ್ಲ, ಬೇಕಾದರೆ ನಡೆದುಕೊಂಡು ಹೋಗಿ' ಎಂದಿದ್ದರಂತೆ. ಆಗ ನಟ ರಜನಿಕಾಂತ್ ಅಲ್ಲಿಂದ ಹೊರನಡೆದಿದ್ದರು ಎನ್ನಲಾಗಿದೆ.
ಡಾ. ರಾಜ್‌ಕುಮಾರ್ ಮಗಳು ಪೂರ್ಣಿಮಾ ಅನುಕರಿಸಿ 'ಬಜಾರಿ' ಪಾತ್ರ ಮಾಡಿದ್ರು ಮಂಜುಳಾ!
ಆದರೆ, ಹಾಗೆ ಹೋದ ರಜನಿಕಾಂತ್ ಸೇಡನ್ನು ಮರೆತಿರಲಿಲ್ಲ. ಎರಡು ವರ್ಷಗಳ ಬಳಿಕ ಅದೇ ಎವಿಎಂ ಸ್ಟೂಡಿಯೋ ಬಳಿ ಇದ್ದಂತಹ 'ಇಟಾಲಿಯಾನಾ' ಫಿಯೆಟ್' ಕಾರನ್ನು ರೂ. 4.51 ಲಕ್ಷಕ್ಕೆ ಕೊಂಡುಕೊಂಡರಂತೆ. ಜತೆಗೆ, ಇಂಡಿಯನ್ ಡ್ರೈವರ್ ಬೇಡ ಎಂದು ರಾಬಿನ್‌ಸನ್ ಎಂಬ ಫಾರಿನ್ ಡ್ರೈವರ್ ಕೂಡ ಇಟ್ಟುಕೊಂಡಿದ್ದರಂತೆ ನಟ ರಜನಿಕಾಂತ್. ತಮಗೆ ಅಂದು ಅವಮಾನ ಮಾಡಿದ ನಿರ್ಮಾಪಕರ ಕಾರಿನ ಪಕ್ಕ ತಮ್ಮ ದುಬಾರಿ ಕಾರು ನಿಲ್ಲಿಸಿ, ಸ್ಟೈಲಿಶ್ ಆಗಿ ಸಿಗರೇಟ್ ಸೇದುತ್ತಾ ನಟ ರಜನಿಕಾಂತ್ ಅವರು ಎಂಟ್ರಿ ಕೊಟ್ಟು ಸೇಡು ತೀರಿಸಿಕೊಂಡಿದ್ರಂತೆ.
ಲೈಫ್ ಕಂಪ್ಲೀಟ್ ಆಯಿತು, ಉಡುಪಿಗೆ ಬಂದಿದ್ದೇನೆ ಎಂದ ರಕ್ಷಿತ್ ಶೆಟ್ಟಿ, ಇನ್ನು ಸಿನ್ಮಾ ಮಾಡೋಲ್ವಾ?
ಹೀಗೆ, ನಟ ರಜನಿಕಾಂತ್ ಸೇಡು ತೀರಿಸಿಕೊಳ್ಳುವುದರಲ್ಲಿ ಕೂಡ ತುಂಬಾ ವಿಭಿನ್ನ ಹಾಗು ನಿಸ್ಸೀಮ ಎನ್ನಲಾಗಿದೆ, ಇದೇ ರೀತಿಯಲ್ಲಿ ಹಲವು ವಿಭಿನ್ನ ಆಯಾಮಗಳಲ್ಲಿ ಅವಮಾನ ಅನುಭವಿಸಿದ ಘಟನೆಗಳು ನಟ ರಜನಿಕಾಂತ್ ಜೀವನದಲ್ಲಿ ನಡೆದಿವೆ ಎನ್ನಲಾಗಿದೆ. ಅದಕ್ಕೆಲ್ಲ ತಮ್ಮದೇ ರೀತಿಯಲ್ಲಿ ರಜನಿಕಾಂತ್ ಕೌಂಟರ್ ಕೊಟ್ಟಿದ್ದಾರೆ ಎನ್ನಲಾಗಿದೆ. ಅಂದಹಾಗೆ, ಕಳೆದ ವರ್ಷ ತೆರೆಕಂಡು ಸಕ್ಸಸ್ ದಾಖಲಿಸಿದ 'ಜೈಲರ್' ಸಿನಿಮಾ ಬಳಿಕ ಸದ್ಯ ನಟ ರಜನಿಕಾಂತ್ ಅವರು 'ತಲೈವರ್ 170 (Thalaivar 170)' ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಮದುವೆ ಬಗ್ಗೆ ಅಮ್ಮ ಕೋಪಗೊಂಡಾಗ ಪ್ರಭಾಸ್ ಹ್ಯಾಂಡಲ್ ಮಾಡೋದು ಹೀಗಂತೆ ನೋಡಿ!