Aug 23, 2023, 11:08 AM IST
ಚಂದ್ರಯಾನ-3 ಭಾರತದ ಈ ಸಾಧನೆಗೆ ಇಡೀ ದೇಶ ಎದುರು ನೋಡುತ್ತಿದೆ. ಏನಾಗುತ್ತೆ..? ಏನು ಎನ್ನುವ ಕುತೂಹಲದಲ್ಲಿದೆ. ಇವರೆಲ್ಲರ ಕುತೂಹಲಕ್ಕೂ ಕಾರಣವಿದೆ. ಯಾಕಂದ್ರೆ ಚಂದ್ರನ ದಕ್ಷಿಣ ಧ್ರುವದಲ್ಲಿ(south pole) ನೌಕೆ ಇಳಿಸೋದು ಅಷ್ಟು ಸುಲಭದ ಮಾತಲ್ಲ. ಪ್ರಪಂಚದ ಬಹುತೇಕ ದೇಶಗಳು ಚಂದ್ರನೂರಿಗೆ ನೌಕೆ ಕಳುಹಿಸಿವೆ. ಆದ್ರೆ, ಈವರೆಗೂ ಯಾವ ದೇಶವೂ ದಕ್ಷಿಣ ಧ್ರುವದಲ್ಲಿ ಇಳಿಯುವ ಸಾಹಸ ಮಾಡಿಲ್ಲ. ಹೀಗಾಗಿ ದಕ್ಷಿಣ ಧ್ರುವ ಅನ್ವೇಷಣೆಗೆ ಹೊರಟ ಇಸ್ರೋ ಬಗ್ಗೆ ಜಗತ್ತಿನ ಪ್ರಬಲ ರಾಷ್ಟ್ರಗಳು ಕುತೂಲದಿಂದ ನೋಡುತ್ತಿವೆ. ಭಾರತದ(India) ಚಂದ್ರಯಾನ 3 (Chandrayaan 3) ಎಲ್ಲಾ ಸವಾಲುಗಳನ್ನು ಮೆಟ್ಟಿ ಮುನ್ನುಗ್ಗತ್ತಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಯಲಿದೆ.. ಬಳಿಕ 26 ಕೆಜಿಯ ರೋವರ್ ಕೆಳಗೆ ಇಳಿಯಲಿದ್ದು, ಅಧ್ಯಯನ ಶುರುಮಾಡಲಿದೆ.
ಇದನ್ನೂ ವೀಕ್ಷಿಸಿ: ಚಂದ್ರನತ್ತ ಭಾರತದ 'ವಿಕ್ರಮ'ನ ಪರಾಕ್ರಮ ನಡಿಗೆ: ರಾಜಕೀಯ ನಾಯಕರು, ಸಿನಿ ಗಣ್ಯರಿಂದ ಶುಭಹಾರೈಕೆ