ಬಿಗ್ ಬಾಸ್ ಕನ್ನಡ ಸೀಸನ್ 11 ನಲ್ಲಿ ಅಚ್ಚರಿಯ ಎಲಿಮಿನೇಷನ್ ನಡೆದಿದ್ದು, ಧರ್ಮ ಕೀರ್ತಿರಾಜ್ ಮನೆಯಿಂದ ಹೊರಬಂದಿದ್ದಾರೆ. ಕಡಿಮೆ ವೋಟ್ ಪಡೆದ ಕಾರಣ ಧರ್ಮ ಕೀರ್ತಿರಾಜ್ ಎಲಿಮಿನೇಟ್ ಆಗಿದ್ದಾರೆ.
ಕನ್ನಡ ಬಿಗ್ ಬಾಸ್ ನಲ್ಲಿ ಅಚ್ಚರಿಯ ಎಲಿಮಿನೇಷನ್ ನಡೆದಿದೆ. ತಾಳ್ಮೆ ಜೊತೆಗೆ ತನ್ನ ಒಳ್ಳೆಯ ವ್ಯಕ್ತಿತ್ವದಿಂದ ಜನರ ಮನಸ್ಸು ಗೆದ್ದಿದ್ದ ಧರ್ಮ ಕೀರ್ತಿರಾಜ್ ಮನೆಯಿಂದ ಹೊರಬಂದಿದ್ದಾರೆ. ಈ ಮೂಲಕ ಬಿಗ್ ಬಾಸ್ ಕನ್ನಡ ಸೀಸನ್ 11 ಎಂಟನೇ ವಾರ ಎಲಿಮಿನೇಟ್ ಯಾರಾಗಬಹುದು ಎಂಬ ಕುತೂಹಲಕ್ಕೆ ತೆರೆಬಿದ್ದಿದೆ. ಅತಿ ಕಡಿಮೆ ವೋಟ್ ಪಡೆದ ಕಾರಣ ಧರ್ಮ ಕೀರ್ತಿರಾಜ್ ಮನೆಯಿಂದ ಔಟ್ ಆಗಿದ್ದಾರೆ.
ವಿಚ್ಛೇದನ ವದಂತಿ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯಿಸಿದ ಅಭಿಷೇಕ್ ಬಚ್ಚನ್
ಚೈತ್ರ, ಧರ್ಮ, ಗೌತಮಿ, ಹನುಮಂತ, ಮಂಜು, ಮೋಕ್ಷಿತಾ ಮತ್ತು ತ್ರಿವಿಕ್ರಮ್ ಈ ವಾರ ನಾಮಿನೇಟ್ ಆಗಿದ್ದರು. ನಾಮಿನೇಟ್ ಆದ 7 ಜನರಲ್ಲಿ ಮಂಜು ಈ ವಾರದ ಕ್ಯಾಪ್ಟನ್ ಆಗಿದ್ದಾರೆ. ಕೊನೆಯಲ್ಲಿ ಚೈತ್ರಾ ಮತ್ತು ಧರ್ಮ ಉಳಿದಿದ್ದರು. ಧರ್ಮ ಎಲಿಮಿನೇಟ್ ಆದರು. ಮನೆಯ ಅಷ್ಟು ಮಂದಿ ಧರ್ಮ ಅವರನ್ನು ಕಳುಹಿಸುವಾಗ ಬಿಕ್ಕಿ ಬಿಕ್ಕಿ ಅತ್ತರು. ಧರ್ಮ ಕೂಡ ಅತ್ತುಕೊಂಡೇ ಮನೆಯಿಂದ ಹೊರಬಂದರು.
12 ವಾರಗಳಿಗೆ ತೆಲುಗು ಬಿಗ್‌ಬಾಸ್‌ನಿಂದ ಕನ್ನಡತಿ ಯಶ್ಮಿ ಗೌಡ ಪಡೆದ ಸಂಭಾವನೆ ಬರೋಬ್ಬರಿ 24 ಲಕ್ಷ ರೂ!
ಮನೆಯಿಂದ ಹೊರಬಂದ ಬಳಿಕ ಸುದೀಪ್ ಏನಿಲ್ಲಿ? ಕೋಪದಿಂದ ಕೇಳುತ್ತಿದ್ದೇನೆ ಎಂದು ಪ್ರಶ್ನಿಸಿದರು. ಎಲ್ಲಿ ಹೇಗಿರಬೇಕು ಹಾಗೆ ಇರಲೇಬೇಕು ಇಲ್ಲಾಂದ್ರೆ ವರ್ಕ್ ಆಗಲ್ಲ ನನ್ನ ಅನುಭವದ ಮಾತು ಹೇಳುತ್ತಿದ್ದೇನೆ ಎಂದು ಕಿಚ್ಚ ಕಿವಿ ಮಾತು ಕೂಡ ಹೇಳಿದರು. ಅವರ ತಂದೆ ಹಿರಿಯ ನಟ ಕೀರ್ತಿರಾಜ್ ಅವನ ವ್ಯಕ್ತಿತ್ವವನ್ನು ಬದಲಾವಣೆ ಮಾಡಿಕೊಳ್ಳದೆ ಆಡಿದ್ದಾನೆ. ಕಪ್ ಗೆಲ್ಲದಿರಬಹುದು ದೇಶದಾದ್ಯಂತ ಒಳ್ಳೆಯ ಪ್ರತಿಕ್ರಿಯೆ ಇದೆ ಎಂದರು. ಅವರ ಕೊನೆಯ ವಿಟಿ ಅತ್ಯಂತ ಅದ್ಭುತವಾಗಿ ಮೂಡಿ ಬಂದಿತ್ತು. ಕಳೆದವಾರ ಅವರ ಆತ್ಮೀಯ ಗೆಳತಿ ಅನುಷಾ ರೈ ಕೂಡ ಹೊರಬಂದಿದ್ದರು.