ರಫೇಲ್‌ ಸ್ವಾಗತಕ್ಕೆ ಅಂಬಾಲಾ ಸಜ್ಜು ; ವಿಶೇಷತೆಗಳಿವು..!

Jul 29, 2020, 11:38 AM IST

ಬೆಂಗಳೂರು (ಜು. 29): ತನ್ನ ಬತ್ತಳಿಕೆಗೆ ವಿಶ್ವದ ಅತ್ಯಾಧುನಿಕ ಯುದ್ಧ ವಿಮಾನವಾದ ರಫೇಲ್‌ ಹೊಂದುವ ಭಾರತೀಯ ವಾಯುಪಡೆಯ ಕನಸು ಕೊನೆಗೂ ನನಸಾಗುವ ಕ್ಷಣ ಸನ್ನಿಹಿತವಾಗಿದೆ. ಫ್ರಾನ್ಸ್‌ನ ಡಸಾಲ್ಟ್‌ ಏವಿಯೇಷನ್‌ ನಿರ್ಮಿತ ಒಂದು ಸೀಟಿನ 3 ಮತ್ತು 2 ಸೀಟಿನ 3 ವಿಮಾನಗಳು ಬುಧವಾರ ಹರ್ಯಾಣದ ಅಂಬಾಲಾ ವಾಯುನೆಲೆಗೆ ಆಗಮಿಸಲಿದ್ದು, ಅದನ್ನು ಸ್ವಾಗತಿಸಲು ಸಕಲ ಸಿದ್ಧತೆಗಳು ನಡೆದಿವೆ.

ಸೋಮವಾರ ಫ್ರಾನ್ಸ್‌ನಿಂದ ಹೊರಟಿದ್ದ ವಿಮಾನಗಳು ಸಂಚಾರದ ವೇಳೆಯೇ 30000 ಅಡಿ ಎತ್ತರದಲ್ಲಿ ಇಂಧನ ಭರ್ತಿಯ ಸಾಹಸವನ್ನೂ ಪ್ರದರ್ಶಿಸಿ ಒಟ್ಟಾರೆ 7000 ಕಿ.ಮೀ. ಸಂಚರಿಸಿ ಯುಎಇ ತಲುಪಿವೆ. ಅವೆಲ್ಲಾ ಬುಧವಾರ ಅಂಬಾಲಾಕ್ಕೆ ಬಂದಿಳಿಯಲಿವೆ. ಈ ರಫೇಲ್‌ ಬಗ್ಗೆ ಒಂದು ಚಂದದ ವಿಶ್ಲೇಷಣೆ ಇಲ್ಲಿದೆ ನೋಡಿ..!

ರಫೇಲ್ ಸ್ವಾಗತಕ್ಕೆ ಅಂಬಾಲಾ ಸಜ್ಜು: ವಾಯುನೆಲೆ ಸುತ್ತ ನಿಷೇಧಾಜ್ಞೆ!