ಮುಂಬೈ ಇಂಡಿಯನ್ಸ್‌ ನಾಕೌಟ್ ಸ್ಟೇಜ್‌ಗೆ ಎಂಟ್ರಿ ನೀಡದೇ ಇದ್ದದ್ದೇ ಒಳ್ಳೇದಾಯ್ತಾ..? ಟೀಮ್ ಇಂಡಿಯಾಗೆ ಲಾಭ..!

By Suvarna NewsFirst Published May 5, 2024, 1:44 PM IST
Highlights

ಈ ಬಾರಿಯ IPLನಲ್ಲಿ ಮುಂಬೈ ಇಂಡಿಯನ್ಸ್ ಮಕಾಡೆ ಮಲಗಿದೆ. ಹನ್ನೊಂದು ಪಂದ್ಯಗಳಲ್ಲಿ ಕೇವಲ 3 ಪಂದ್ಯಗಳಲ್ಲಿ ಗೆಲುವಿನ ಬಾವುಟ ಹಾರಿಸಿದೆ. ಇದ್ರೊಂದಿಗೆ ಮೊದಲ ತಂಡವಾಗಿ ಪ್ಲೇ ಆಫ್ ರೇಸ್ನಿಂದ ಹೊರಬಿದ್ದಿದೆ. ಇದ್ರಿಂದ ಮುಂಬೈ ಇಂಡಿಯನ್ಸ್ ಫ್ಯಾನ್ಸ್ ನಿರಾಸೆಯಾಗಿದ್ದಾರೆ. ತಮ್ಮ ತಂಡದ ಹೀನಾಯ ಪ್ರದರ್ಶನಕ್ಕೆ ಹಾರ್ದಿಕ್ ಪಾಂಡ್ಯ ಕಳಪೆ ಕ್ಯಾಪ್ಟನ್ಸಿಯೇ ಕಾರಣ ಅಂತ ಕಿಡಿ ಕಾರ್ತಿದ್ದಾರೆ. ಮತ್ತೊಂದೆಡೆ ಮುಂಬೈ  ಪ್ಲೇ ಆಫ್ ಎಂಟ್ರಿ ನೀಡದೇ ಇದ್ದದ್ದೇ ಒಳ್ಳೆಯದ್ದೇ ಆಯ್ತು ಅನ್ನೋ ಮಾತುಗಳು ಕೇಳಿಬರ್ತಿವೆ. 

ಬೆಂಗಳೂರು(ಮೇ.05): ಐಪಿಎಲ್‌ನಲ್ಲಿ ಐದು ಸಲ  ಚಾಂಪಿಯನ್‌ ಪಟ್ಟ ಅಲಂಕರಿಸಿರೋ ಮುಂಬೈ ಇಂಡಿಯನ್ಸ್ ಈ ಸಲ ಸೋಲಿನ ಸುಳಿಗೆ ಸಿಲುಕಿದೆ. ಈಗಾಗ್ಲೇ ಪ್ಲೇ ಆಫ್ ರೇಸ್ನಿಂದ ಔಟ್ ಆಗಿದೆ. ಆದ್ರೆ, ಹಾರ್ದಿಕ್ ಪಾಂಡ್ಯ ಪಡೆ ನಾಕೌಟ್ ಪಂದ್ಯಗಳನ್ನ ಆಡದೇ ಇರೋದು ಟೀಂ ಇಂಡಿಯಾಗೆ ಒಳ್ಳೆಯದಾಗಿದೆ. ಅದ್ಹೇಗೆ ಅಂತೀರಾ..? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ. 

ಈ ಬಾರಿಯ IPLನಲ್ಲಿ ಮುಂಬೈ ಇಂಡಿಯನ್ಸ್ ಮಕಾಡೆ ಮಲಗಿದೆ. ಹನ್ನೊಂದು ಪಂದ್ಯಗಳಲ್ಲಿ ಕೇವಲ 3 ಪಂದ್ಯಗಳಲ್ಲಿ ಗೆಲುವಿನ ಬಾವುಟ ಹಾರಿಸಿದೆ. ಇದ್ರೊಂದಿಗೆ ಮೊದಲ ತಂಡವಾಗಿ ಪ್ಲೇ ಆಫ್ ರೇಸ್ನಿಂದ ಹೊರಬಿದ್ದಿದೆ. ಇದ್ರಿಂದ ಮುಂಬೈ ಇಂಡಿಯನ್ಸ್ ಫ್ಯಾನ್ಸ್ ನಿರಾಸೆಯಾಗಿದ್ದಾರೆ. ತಮ್ಮ ತಂಡದ ಹೀನಾಯ ಪ್ರದರ್ಶನಕ್ಕೆ ಹಾರ್ದಿಕ್ ಪಾಂಡ್ಯ ಕಳಪೆ ಕ್ಯಾಪ್ಟನ್ಸಿಯೇ ಕಾರಣ ಅಂತ ಕಿಡಿ ಕಾರ್ತಿದ್ದಾರೆ. ಮತ್ತೊಂದೆಡೆ ಮುಂಬೈ  ಪ್ಲೇ ಆಫ್ ಎಂಟ್ರಿ ನೀಡದೇ ಇದ್ದದ್ದೇ ಒಳ್ಳೆಯದ್ದೇ ಆಯ್ತು ಅನ್ನೋ ಮಾತುಗಳು ಕೇಳಿಬರ್ತಿವೆ. 

ಯೆಸ್, ಮುಂಬೈ ಇಂಡಿಯನ್ಸ್ ಪ್ಲೇ ಆಫ್ ರೇಸ್ನಿಂದ ಹೊರಬಿದ್ದಿದ್ದು ಟೀಂ ಇಂಡಿಯಾಗೆ ಸಹಾಯವಾಗಲಿದೆ. ಅದ್ಹೇಗೆ ಅಂದ್ರೆ, ಮುಂಬೈ ಪರ ಆಡ್ತಿರೋ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್ ಮುಂಬರುವ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಒಂದು ವೇಳೆ ಮುಂಬೈ ನಾಕೌಟ್ ಸ್ಟೇಜ್‌ಗೆ ಅರ್ಹತೆ ಪಡೆದಿದ್ದರೆ, ಮೆಗಾಟೂರ್ನಿಗೆ ಪ್ರಿಪೇರ್ ಆಗಲು ಈ ಆಟಗಾರರಿಗೆ ಹೆಚ್ಚಿನ ಸಮಯ ಸಿಗ್ತಿರಲಿಲ್ಲ. ಆದ್ರೀಗ, ಮುಂಬೈ ಇಂಡಿಯನ್ಸ್ ತನ್ನ ಕೊನೆಯ ಲೀಗ್ ಪಂದ್ಯವನ್ನ ಮೇ 17 ರಂದು ಆಡಲಿದೆ. ಇದ್ರಿಂದ ಈ ನಾಲ್ವರಿಗೆ ವಿಶ್ವಕಪ್‌ಗೆ ರೆಡಿಯಾಗಲು ಮೂರು ವಾರಗಳು ಸಮಯ ಸಿಗಲಿದೆ. 

ಟಿ20ಯಲ್ಲಿ ಕಿಂಗ್ಸ್‌ ಕೊಹ್ಲಿ ಹೊಸ ಮೈಲುಗಲ್ಲು..! ಈ ಸಾಧನೆ ಮಾಡಿದ ಮೊದಲ ಭಾರತೀಯ

ವಿಶ್ವಕಪ್‌ಗೂ ಮುನ್ನ ಇಂಜುರಿಯಾಗಿದ್ರೆ ಚೇತರಿಸಿಕೊಳ್ಳಲು ಕಷ್ಟ..! 

ಹೌದು, IPLಗೂ ಮುನ್ನ ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್ ಇಂಜುರಿಗೊಳಗಾಗಿದ್ರು. ಪಾಂಡ್ಯ 5 ತಿಂಗಳ ಕಾಲ ಕ್ರಿಕೆಟ್ನಿಂದ ದೂರ ಉಳಿದಿದ್ರು. ಸೂರ್ಯಕುಮಾರ್ ಯಾದವ್ ಮೂರು ತಿಂಗಳು ಬ್ಯಾಟ್ ಮುಟ್ಟಿರಲಿಲ್ಲ. ಪ್ಲೇ ಆಫ್ ಪಂದ್ಯಗಳಲ್ಲಿ ಈ ಇಬ್ಬರು ಮತ್ತೆ ಇಂಜುರಿಗೊಳಗಾಗಿದ್ರೆ, ಚೇತರಿಸಿಕೊಳ್ಳಲು ಕಷ್ಟವಾಗ್ತಿತ್ತು. ವಿಶ್ವಕಪ್ ತಂಡದಿಂದಲೂ ಹೊರಗುಳಿಯೋ ಸಾಧ್ಯತೆ ಇತ್ತು. 

ಗುಜರಾತ್ ಮತ್ತೊಮ್ಮೆ ಮಣಿಸಿ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಜಿಗಿದ ಆರ್‌ಸಿಬಿ..!

ನಿರಂತರ ಕ್ರಿಕೆಟ್‌ನಿಂದ ಬಳಲಿರೋ ರೋಹಿತ್ ಶರ್ಮಾಗೆ ಸಿಗಲಿದೆ ರೆಸ್ಟ್..! 

ಟಿ20 ವಿಶ್ವಕಪ್ ದೃಷ್ಟಿಯಿಂದ ರೋಹಿತ್ ಶರ್ಮಾರ ಫಿಟ್ನೆಸ್ ತುಂಬಾನೇ ಮುಖ್ಯ. ಕಳೆದ ಆರೇಳು ತಿಂಗಳಿನಿಂದ ರೋಹಿತ್ ಶರ್ಮಾ ನಿರಂತರವಾಗಿ ಕ್ರಿಕೆಟ್ ಆಡ್ತಿದ್ದಾರೆ. ಏಷ್ಯಾಕಪ್, ಏಕದಿನ ವಿಶ್ವಕಪ್, ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ, ಅಪ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗಳಲ್ಲಿ ರೋಹಿತ್ ಆಡಿದ್ರು. ಇದ್ರಿಂದ ಮೂರು ವಾರಗಳ ಟೈಮ್ ರೋಹಿತ್ ವರ್ಕ್ಲೋಡ್ ಕಡಿಮೆ ಮಾಡಲಿದೆ. ಅಲ್ಲದೇ, ರಿಲ್ಯಾಕ್ಸ್ ಆಗಿ ಹೊಸ ಫ್ರೆಶ್ ಮೈಂಡ್ಸೆಟ್ನೊಂದಿಗೆ ವಿಶ್ವಕಪ್ ಆಡಲು ನೆರವಾಗಲಿದೆ. ಈ ಎಲ್ಲಾ ಕಾರಣಗಳಿಂದ ಮುಂಬೈ ಪ್ಲೇ ಆಫ್ ಪಂದ್ಯಗಳನ್ನ ಆಡದೇ ಇರೋದು ಟೀಂ ಇಂಡಿಯಾಗೆ ಲಾಭವಾಗಲಿದೆ. 

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 

click me!