
ಕಿರುತೆರೆಯ ಜನಪ್ರಿಯ ನಟ-ನಟಿಯರಾದ ಚಂದನ್ ಕುಮಾರ್ (Chandan Kumar) ಹಾಗೂ ಕವಿತಾ ಗೌಡ (Kavitha Gowda) ಅವರು ಹೊಸ ಸಂಗತಿಯೊಂದನ್ನು ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಅನೌನ್ಸ್ ಮಾಡಿದ್ದಾರೆ. ಅದೇನು ಎಂಬ ಸಹಜ ಕುತೂಹಲ ಎಲ್ಲರಲ್ಲೂ ಮೂಡುತ್ತದೆ. ಹೌದು, ಕವಿತಾ-ಚಂದನ್ ಜೋಡಿ ಒಟ್ಟಿಗಿರುವ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದು, ಅದರಲ್ಲಿ ಕವಿತಾ 'ಪ್ರಗ್ನಂಟ್' ಆಗಿದ್ದಾರೆ ಎಂಬ ಸಂಗತಿಯನ್ನು 'ಇಮೋಜಿ' ಮೂಲಕ ಸೂಚ್ಯವಾಗಿ ಹೇಳಿಕೊಂಡಿದ್ದಾರೆ. ಈ ಸುದ್ದಿಯಿಂದ ಮಿಂಚಿನ ಸಂಚಾರ ಮಾಡುತ್ತ ಎಲ್ಲ ಕಡೆ ವೈರಲ್ ಆಗುತ್ತಿದೆ.
ನಟ ಚಂದನ್ ಕುಮಾರ್ ಹಾಗೂ ನಟಿ ಕವಿತಾ ಗೌಡ ಅವರು 14 ಮೇ 2021ರಂದು ಬೆಂಗಳೂರಿನಲ್ಲಿ ಮದುವೆ ಆಗಿದ್ದಾರೆ. ಇದೀಗ ಎರಡು ವರ್ಷದ ಬಳಿಕ, 05 ಮೇ 2024ರಂದು ಕವಿತಾ ಪ್ರಗ್ನಂಟ್ ಆಗಿರುವ ಬಗ್ಗೆ ಸೂಚ್ಯವಾಗಿ ಹೇಳಿಕೊಂಡಿದ್ದಾರೆ. ಇದೀಗ, ಅವರಿಬ್ಬರ ಅಭಿಮಾನಿಗಳು ಅಭಿನಂದನೆಗಳನ್ನು ತಿಳಿಸತೊಡಗಿದ್ದಾರೆ. ಇತ್ತೀಚೆಗೆ ಅವರಿಬ್ಬರೂ ಕೇರಳ ಸೇರಿದಂತೆ ಹಲವಾರು ಕಡೆ ಟ್ರಿಪ್ ಹೋಗಿ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಸಾಕಷ್ಟು ಫೋಟೋಗಳನ್ನು ಹಂಚಿಕೊಂಡಿದ್ದರು.
ಆಲಿಯಾ ಭಟ್ ನಟನೆಗೆ 'ಶಭಾಷ್' ಅಂದ್ಬಿಟ್ರು, 'ಗಂಗೂಬಾಯಿ ಕಥಿಯಾವಾಡಿ' ಬಗ್ಗೆ ರಶ್ಮಿಕಾ ಹೇಳಿದ್ದೇನು?
ನಟ ಚಂದನ್‌ಕುಮಾರ್ ಹಾಗು ನಟಿ ಕವಿತಾ ಗೌಡ ಅವರಿಬ್ಬರೂ ಸಾಕಷ್ಟು ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅವರಿಬ್ಬರೂ ಜೊತೆಯಾಗಿ ನಟಿಸಿದ್ದ 'ಲಕ್ಷ್ಮೀ ಬಾರಮ್ಮ' ಸೀರಿಯಲ್ ಅಂದು ಬಹಳಷ್ಟು ಜನಪ್ರಿಯತೆ ಗಳಿಸಿತ್ತು. ಬಳಿಕ ನಟ ಚಂದನ್‌ಕುಮಾರ್ ಆ ಸೀರಿಯಲ್‌ನಿಂದ ದೂರವಾಗಿ, ನಟ ಪ್ರವೀಣ್ ಕುಮಾರ್ ಆ ಪಾತ್ರದಲ್ಲಿ ನಟನೆ ಮಾಡಿದ್ದರು. ನಟ ಚಂದನ್ ಹಾಗೂ ನಟಿ ಕವಿತಾ ಕಿರುತೆರೆ ಸೀರಿಯಲ್‌ಗಳು ಮಾತ್ರವಲ್ಲದೇ ಹಲವು ಸಿನಿಮಾಗಳಲ್ಲೂ ನಟಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಮುಸ್ಲಿಂ ಆಗಿದಿದ್ರೆ ಸುಮ್ನೆ ಬಿಡ್ತಿದ್ರಾ? ಕೇಸ್‌ಗೆ ಸ್ವರಾ ಭಾಸ್ಕರ್ ಧರ್ಮದ ಲೇಪ!
ಅಂದಹಾಗೆ, ಇತ್ತೀಚೆಗೆ ಚಂದನ್ ಹಾಗೂ ಕವಿತಾ ಇಬ್ಬರೂ ನಟನೆಯಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದರು ಎನ್ನಬಹುದು. ವೃತ್ತಿಬದುಕಿನಿಂದ ಈ ಇಬ್ಬರೂ ಸಣ್ಣ ಬ್ರೇಕ್ ತೆಗೆದುಕೊಂಡು, ಬದುಕನ್ನು ಎಂಜಾಯ್ ಮಾಡುತ್ತಿದ್ದರು ಎನ್ನಬಹುದು. ಇದೀಗ, ಅಭಿಮಾನಿಗಳ ಜತೆ ತಮ್ಮ ಜೀವನದ ಕನಸಿನ ಖುಷಿಯ ಕ್ಷಣಗಳನ್ನು ಶೇರ್ ಮಾಡಿಕೊಂಡು ಅವರನ್ನು ಇಷ್ಟಪಡುವ ಫ್ಯಾನ್ಸ್‌ಗಳನ್ನೂ ಕೂಡ ಖುಷಿಯ ಕ್ಷಣದಲ್ಲಿ ತೇಲಾಡುವಂತೆ ಮಾಡಿದ್ದಾರೆ. ಸದ್ಯ, ನಟ ಚಂದನ್ ಹಾಗೂ ನಟಿ ಕವಿತಾ 'ಅಪ್ಪ-ಅಮ್ಮ' ಆಗಲಿರುವ ಸಂಗತಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗತೊಡಗಿದೆ.
ಅಮೆರಿಕಾದಲ್ಲಿ ಇಂಡಿಯನ್ ಆಗಿರುವುದು ಅಷ್ಟು ಸುಲಭದ ಕೆಲಸವಲ್ಲ; ನಟಿ ಪ್ರಿಯಾಂಕಾ ಚೋಪ್ರಾ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.