ಕಣಿವೆಗೆ ಬಂದ ವಿದೇಶಿ ನಿಯೋಗ: ವಿಡಿಯೋದಲ್ಲಿ ಕಂಪ್ಲೀಟ್ ಡೀಟೆಲ್ಸ್!

Jan 9, 2020, 9:52 PM IST

ಶ್ರೀನಗರ(ಜ.09): ಕರ್ಫ್ಯೂ ಸಡಿಲಿಕೆ ಬಳಿಕ ಜಮ್ಮು ಮತ್ತು ಕಾಶ್ಮೀರಕ್ಕೆ 15 ರಾಷ್ಟ್ರಗಳ ಸದಸ್ಯರ ನಿಯೋಗವೊಂದು ಭೇಟಿ ನೀಡಿದ್ದು, ವಿಶೇಷ ಸ್ಥಾನಮಾನ ರದ್ದತಿ ನಂತರ ಕಣಿವೆಯ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸಿದೆ. ಹೊಸದಾಗಿ ಅಸ್ತಿತ್ವಕ್ಕೆ ಬಂದ ಕೇಂದ್ರಾಡಳಿತ ಪ್ರದೇಶದ ಸ್ಥಿತಿಗತಿ ಅರಿಯುವುದು ನಿಯೋಗದ ಉದ್ದೇಶವಾಗಿದ್ದು, ಕಣಿವೆ ವಿಪಕ್ಷ ನಾಯಕರೊಂದಿಗೆ ಸಮಾಲೋಚನೆ ನಡೆಸಿರುವುದು ವಿಶೇಷ. ದ.ಕೊರಿಯಾ, ಮೊರಾಕ್ಕೋ, ನೈಜೀರಿಯಾ, ಗಯಾನಾ, ಅರ್ಜೈಂಟೈನಾ, ನಾರ್ವೆ, ಫಿಲಿಪೈನ್ಸ್, ಮಾಲ್ಡೀವ್ಸ್, ಟೋಗೊ, ಫಿಜಿ, ಪೆರು, ಬಾಂಗ್ಲಾದೇಶ ಹಾಗೂ ವಿಯೇಟ್ನಾಂ ದೇಶಗಳ ಪ್ರತಿನಿಧಿಗಳು ನಿಯೋಗದಲ್ಲಿದ್ದಾರೆ. ಕಣಿವೆಯ ಸಾಮಾನ್ಯ ಜನರೊಂದಿಗೆ ಸಂವಾದ ನಡೆಸಿರುವ ನಿಯೋಗ, ವಿಶೇಷ ಸ್ಥಾನಮಾನ ರದ್ದತಿ ಹಾಗೂ ನಂತರದ ಬೆಳವಣಿಗೆಗಳ ಕುರಿತು ಅಭಿಪ್ರಾಯ ಸಂಗ್ರಹಿಸಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..