ಕಲರ್‌ಫುಲ್ ಆಗಿತ್ತು ಮಾನ್ಸೂನ್ ರಾಗ ಪ್ರೀ ರಿಲೀಸ್: ಪ್ರಚಾರಕ್ಕೆ ಬಂದ ಹೆಡ್‌ಬುಷ್ ತಂಡ

Sep 15, 2022, 8:39 AM IST

ಮಾನ್ಸೂನ್ ರಾಗ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಸೌಂಡ್ ಮಾಡ್ತಿರೋ ಸಿನಿಮಾ. ಹಾಡುಗಳ ಮೂಲಕವೇ ಪ್ರೇಕ್ಷಕನ್ನ ಥಿಯೇಟರ್‌ನತ್ತ ಬರುವಂತೆ ಮಾಡಿರೋ ಮಾನ್ಸೂನ್ ರಾಗ ಚಿತ್ರದ ಪ್ರೀ ರಿಲೀಸ್ ಇವೆಂಟ್ ಅದ್ದೂರಿಯಾಗಿ ಕಲರ್‌ಫುಲ್ ನಡೆದಿದೆ. ಮಾನ್ಸೂನ್ ರಾಗ ಚಿತ್ರದ ಪ್ರಚಾರಕ್ಕೆ ರಚಿತಾ ರೇಷ್ಮೇ ಸೀರೆಯುಟ್ಟು ಎಂಟ್ರಿಕೊಟ್ರು. ರಚಿತಾ ಲುಕ್ ಗೆ ಸ್ಟಾರ್‌ಗಳು ಫಿದಾ ಆದ್ರು. ಡಾಲಿ ಧನಂಜಯ್ ಸ್ಟಾರ್ ಆದರೂ ಕೂಡ ರಚಿತಾ ಮನೆ ಮುಂದೆ ಬೀಟ್ ಹಾಕಿದ್ರಂತೆ ಅಷ್ಟರ ಮಟ್ಟಿಗೆ ಅವ್ರ ಬ್ಯೂಟಿಗೆ ಫಿದಾ ಆಗಿದ್ದಾರೆ. ಇನ್ನುಅಭಿನಯದ ಜೊತೆಗೆ ಡಾಲಿ ಸೂಪರ್ ರೈಟರ್ ಅನ್ನೋದು ಅದೆಷ್ಟೋ ಜನರಿಗೆ ಗೊತ್ತೆ ಇಲ್ಲ. ವೇದಿಕೆ ಮೇಲೆ ಸುಹಾಸಿನಿ ಅವ್ರನ್ನ ಕಂಡೊಡನೆ ಡಾಲಿ ಎರಡು ಸಾಲು ಪ್ರೇಮ ಕಾವ್ಯವನ್ನ ಮನಸ್ಸಲ್ಲಿಯೇ ಬರೆದು ಹೇಳಿಯೇ ಬಿಟ್ಟರು.ಸುಹಾಸಿನಿ ಕೂಡ ಹಾಡಿನ ಮೂಲಕ ಡಾಲಿಗೆ ಥ್ಯಾಂಕ್ಸ್ ಹೇಳಿದ್ರು..ಈ ದೃಶ್ಯ ನೋಡಿದವ್ರಿಗೆ ವಾವ್ಹ್ ಅನ್ನಿಸಿದಂತು ಸತ್ಯ. ಮಾನ್ಸೂನ್ ರಾಗ ಥೀಮ್ ಸಾಂಗ್ ಮೂಲಕ ಇಂಡಸ್ಟ್ರೀಯಲ್ಲಿ ಧೂಳೆಬ್ಬಿಸುತ್ತಿರೋ ಯಶಾ ಶಿವಕುಮಾರ್ ಅವ್ರಿಗೆ ಇಡೀ ಕರ್ನಾಟಕವೇ ಫುದಾ ಆಗಿದೆ. ಆದ್ರೆ ಯಶಾ ಮಾತ್ರ ದುನಿಯಾ ವಿಜಯ್ ಲುಕ್ ಅಂಡ್ ಮ್ಯಾನರಿಸಂಗೆ ಫ್ಯಾನ್ ಆಗಿ ಲವ್‌ನಲ್ಲಿ ಬಿದ್ದಿದ್ದಾರೆ. ಒಟ್ಟಿನಲ್ಲಿ ಮಾನ್ಸೂನ್ ರಾಗ ಸಿನಿಮಾದ ಪ್ರಚಾರ ಅದ್ದೂರಿಯಾಗಿ ನಡೆಯುತ್ತಿದ್ದು ಡಾಲಿ -ರಚಿತಾ ಕಾಂಬಿನೇಷನ್ ಸಿನಿಮಾಗೆ ಸ್ಯಾಂಡಲ್‌ವುಡ್‌ನ ಸ್ಟಾರ್‌ಗಳು ಸಾಥ್ ಕೊಟ್ಟಿದ್ದಾರೆ. ಎಲ್ಲರೂ ಒಟ್ಟಿಗೆ ಬಂದು ಒಳ್ಳೆಯ ಸಿನಿಮಾಗೆ ಸಪೋರ್ಟ್ ಮಾಡ್ತಿರೋದು ಪ್ರೇಕ್ಷಕರಿಗೆ ಸಿನಿಮಾ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಇದೇ ವಾರ ಥಿಯೇಟರ್ ಅಂಗಳದಲ್ಲಿ ರಚ್ಚು -ಡಾಲಿ ಮಾನ್ಸೂನ್ ರಾಗ ಶುರುವಾಗಲಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment