Rapper Chandan Shetty : ಲಕಲಕ ಲ್ಯಾಂಬೋರ್ಗಿನಿ ಹತ್ತಿ ಸುವರ್ಣ ಪಾರ್ಟಿಗೆ ಬಂದ್ರು ಚಂದನ್ ಶೆಟ್ರು!

Dec 31, 2021, 9:53 PM IST

ಬೆಂಗಳೂರು (ಡಿ.31): ಏಷ್ಯಾನೆಟ್ ಸುವರ್ಣ ನ್ಯೂಸ್ ಹೊಸ ವರ್ಷದ ಪಾರ್ಟಿಗೆ ಈ ಬಾರಿ ಜೊತೆಯಾಗಿದ್ದು ನಮ್ಮ ರ‍್ಯಾಪರ್ ಚಂದನ್ ಶೆಟ್ಟಿ. ಇದೇ ಮೊದಲ ಬಾರಿಗೆ ಪತ್ನಿ ನಿವೇದಿತಾ ಜೊತೆಯಲ್ಲಿ ನ್ಯೂಸ್ ಸ್ಟುಡಿಯೋಗೆ ಬಂದ ಚಂದನ್ ಶೆಟ್ಟಿ ಹಾಡು, ಡಾನ್ಸ್ ಮೂಲಕ 2021ರ ವರ್ಷದ ಕೊನೆಯ ರಾತ್ರಿಯನ್ನು ಸ್ಮರಣೀಯವಾಗಿಸಿದರು. ಹೊಸ ವರ್ಷದಲ್ಲಿ ನಮ್ಮೆಲ್ಲರ ಜೀವನದಲ್ಲೂ ಸುಖ, ಶಾಂತಿ ಸಿಗಲಿ ಎಂದ ಚಂದನ್ ಶೆಟ್ಟಿ, 2022ರ ವರ್ಷದಲ್ಲಿ ಲಕ್ಷ್ಮೀ ದೇವಿ, ಜೆಸಿಬಿಯಲ್ಲಿ ಹಣ ತಂದು ನಿಮ್ಮೆಲ್ಲರ ಮನೆಯಲ್ಲಿ ಸುರಿಯುವಂತಾಗಲಿ ಎಂದು ಹಾರೈಸಿದರು.

Laka Laka Lambargini: ಚಂದನ್ ಶೆಟ್ಟಿ ಜೊತೆ ಬೊಂಬಾಟ್ ಸ್ಟೆಪ್ ಹಾಕಿದ ರಚಿತಾ ರಾಮ್
2022ರ ಹೊಸ ವರ್ಷದ ಸಂಭ್ರಮಕ್ಕೆ ಬಿಡುಗಡೆ ಮಾಡಿರುವ, ಲಕಲಕ ಲ್ಯಾಂಬೋರ್ಗಿನಿ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ಅಗಿ ಸದ್ದು ಮಾಡಿದೆ. ಡಿಂಪಲ್ ಕ್ವೀನ್ ರಚಿತಾ ರಾಮ್ ಈ ಹಾಡಿನಲ್ಲಿ ಚಂದನ್ ಶೆಟ್ಟಿ ಜೊತೆ ಹೆಜ್ಜೆ ಹಾಕಿದ್ದು, ಹೊಸ ವರ್ಷದ ಸಂಭ್ರಮಕ್ಕೆ ರಂಗು ತುಂಬಿದಂತಾಗಿದೆ. "ಇಷ್ಟು ದಿನ ನಾನು ಮಾಡಿದ್ದ ಹಾಡುಗಳಿಗಿಂತ ಬಹಳ ಭಿನ್ನವಾದ ಹಾಡು ಇದಾಗಿದೆ. ರಿದಮ್, ಬೀಟ್ ಎಲ್ಲದರಲ್ಲೂ ಬದಲಾವಣೆಯಾಗಿದೆ. ಹೆಚ್ಚಿನ ಮಾಸ್ ಜನರಿಗೆ ರೀಚ್ ಆಗುವ ದೃಷ್ಟಿಯಲ್ಲಿ ಈ ಬದಲಾವಣೆ ತಂದಿದ್ದೇನೆ. ನಿಮಗೆಲ್ಲರಿಗೂ ಇಷ್ಟವಾಗಿದ್ದಕ್ಕೆ ನನಗೆ ಬಹಳ ಖುಷಿಯಾಗಿದೆ' ಎಂದು ಚಂದನ್ ಶೆಟ್ಟಿ ತಮ್ಮ ಹೊಸ ಹಾಡಿನ ಬಗ್ಗೆ ಮಾತನಾಡಿದರು. 3 ಪೆಗ್​, ಚಾಕೊಲೇಟ್​ ಗರ್ಲ್​, ಪಾರ್ಟಿ ಫ್ರೀಕ್​ ಹೀಗೆ ಹಲವು ಆಲ್ಬಂ ಹಾಡುಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಬೇಡಿಕೆ ಹೊಂದಿರುವ ರ‍್ಯಾಪರ್ ಚಂದನ್ ಶೆಟ್ಟಿ ಈ ಹಾಡಿಗೆ ಸಾಹಿತ್ಯ, ಸಂಗೀತದ ಜೊತೆಗೆ ಹಾಡಿಗೆ ದನಿಯಾಗಿದ್ದಾರೆ.