ಮೆಟ್ ಗಾಲಾ ಫ್ಯಾಶನಿಸ್ಟಾಗಳ ಲುಕ್ ನೋಡಿ ಉರ್ಫಿಗೊಂದು ಚಾನ್ಸ್ ಕೊಡಬೇಕಿತ್ತು ಅಂತಿದಾರೆ ನೆಟಿಜನ್ಸ್!

Published : May 07, 2024, 04:11 PM IST

ಮೆಟ್ ಗಾಲಾದಲ್ಲಿ ಫ್ಯಾಶನಿಸ್ಟಾಗಳ ಲುಕ್ ನೋಡಿ ಉರ್ಫಿ ಜಾವೇದ್ ಇವರನ್ನೆಲ್ಲ ಮೀರಿಸುತ್ತಿದ್ದಳು ಎಂದು ಕೆಲ ನೆಟ್ಟಿಗರು ಹೇಳಿದರೆ, ಇವರಲ್ಲಿ ಕೆಲವರು ಉರ್ಫಿಯನ್ನೇ ಕಾಪಿ ಮಾಡಿದಂತಿದೆ ಎನ್ನುತ್ತಿದ್ದಾರೆ ಮತ್ತೆ ಕೆಲವರು.

PREV
112
ಮೆಟ್ ಗಾಲಾ ಫ್ಯಾಶನಿಸ್ಟಾಗಳ ಲುಕ್ ನೋಡಿ ಉರ್ಫಿಗೊಂದು ಚಾನ್ಸ್ ಕೊಡಬೇಕಿತ್ತು ಅಂತಿದಾರೆ ನೆಟಿಜನ್ಸ್!

ನ್ಯೂಯಾರ್ಕ್‌ನಲ್ಲಿ ನಡೆವ ಮೆಟ್ ಗಾಲಾ ಫ್ಯಾಶನ್ ಜಗತ್ಪ್ರಸಿದ್ಧ. ಎಲ್ಲ ದೇಶಗಳಿಂದ ಇಲ್ಲಿಗೆ ಪ್ರತಿನಿಧಿಯಾಗಿ ಬರುವವರು ತಮ್ಮದೇ ಫ್ಯಾಶನ್ ಎಲ್ಲರ ಗಮನ ಸೆಳೀಬೇಕೆಂದು ಬಯಸುತ್ತಾರೆ. 

212

ಈ ಬಾರಿ ದಿ ಗಾರ್ಡನ್ ಆಫ್ ಟೈಂ ಎಂಬ ಥೀಮ್ ನೀಡಲಾಗಿತ್ತು. ಭಾರತದಿಂದ ಆಲಿಯಾ ಭಟ್ ಹಾಗೂ ಇಶಾ ಅಂಬಾನಿ ಪ್ರತಿನಿಧಿಸಿದ್ದರು. 

312

ಈ ಮೆಟ್ ಗಾಲಾ ರೆಡ್ ಕಾರ್ಪೆಟ್‌ನಲ್ಲಿ ಕಂಡುಬಂದ ಹಲವಾರು ಫ್ಯಾಶನ್‌ಗಳು ಚಿತ್ರವಿಚಿತ್ರವಾಗಿದ್ದು, ನೆಟ್ಟಿಗರಿಗೆ ಉರ್ಫಿ ಜಾವೇದ್‌ಳ ನೆನಪು ತಂದಿದೆ. 

412

ಅರೆ, ಇವೆಲ್ಲ ಉರ್ಫಿಯ ಐಡಿಯಾಗಳು.. ಆದರೆ, ಇಲ್ಲಿ ಅವಳ ಫ್ಯಾಶನ್ನನ್ನು ಹಂಗಿಸಲಾಗುತ್ತದೆ. ಆದರೆ, ಜಗತ್ಪ್ರಸಿದ್ಧ ಮೆಟ್ ಗಾಲಾದಲ್ಲಿ ಅಂಥದೇ ಫ್ಯಾಶನ್ನನ್ನು ಜಗತ್ತು ಕಣ್ಣರಳಿಸಿ ನೋಡುತ್ತದೆ ಎನ್ನುತ್ತಿದ್ದಾರೆ ನೆಟಿಜನ್ಸ್..

512

ಬಾವುಲಿಯ ರೆಕ್ಕೆಯಂಥ ಬಟ್ಟೆ, ಮೈಗಂಟಿದ ಬಟ್ಟೆ, ಸೊಳ್ಳೆಪರದೆ ಹಾಕಿಕೊಂಡಂಥ ಫ್ಯಾಶನ್, ಗೌನ್ ಮತ್ತು ಸೂಟ್ ಮಿಕ್ಸ್ ಮಾಡಿದಂಥಾ ಫ್ಯಾಶನ್- ಈ ಅವತಾರಗಳನ್ನೆಲ್ಲ ನೋಡಿದಾಗ ಉರ್ಫಿ ಇವರಿಗಿಂತ ಕಡಿಮೆ ಇಲ್ಲ ಎಂದು ಜನರು ಹೇಳುತ್ತಿದ್ದಾರೆ. 

612

ನಿಜ ಹೇಳಬೇಕೆಂದರೆ, ಉರ್ಫಿ ಇನ್ನೂ ಕಡಿಮೆ ಖರ್ಚಿನಲ್ಲಿ ಸಿಕ್ಕ ಸಿಕ್ಕ ವಸ್ತುಗಳಲ್ಲಿ ಫ್ಯಾಶನ್ ಮಾಡಿಕೊಳ್ಳುತ್ತಾಳೆ. ಹೀಗಾಗಿ, ಫ್ಯಾಶನ್ ಜಗತ್ತನ್ನು ನೋಡಿದಾಗ ಉರ್ಫಿ ಎಲ್ಲೋ ಇರಬೇಕಿತ್ತು ಎನಿಸುತ್ತದೆ ಎಂದು ನೆಟ್ಟಿಗರು ಹೇಳಿದ್ದಾರೆ. 

712

ಕೆಲ ದಿನಗಳ ಹಿಂದೆ ಸುತ್ತುವ ಪ್ಲ್ಯಾನೆಟೋರಿಯಂನ್ನೇ ಧರಿಸಿ ಅಚ್ಚರಿ ಮೂಡಿಸಿದ್ದಳು ಉರ್ಫಿ. ಮತ್ತೊಮ್ಮೆ ಆಕೆಯ ಬಟ್ಟೆಯಲ್ಲಿ ಚಿಟ್ಟೆಯಂಥವು ಹಾರುತ್ತಿದ್ದವು..

812

ಉರ್ಫಿಯ ಆ ಮಟ್ಟಿನ ಸೃಜನಾತ್ಮಕ ಬಟ್ಟೆಗಳು ಮೆಟ್ ಗಾಲಾದಲ್ಲಿ ಖಂಡಿತಾ ಕಾಣಿಸಲಿಲ್ಲ. ಅಂದರೆ, ಉರ್ಫಿಯ ಪ್ರತಿಭೆಯನ್ನು ಬಾಲಿವುಡ್ ಬೇಕೆಂದೇ  ನಿರ್ಲಕ್ಷಿಸುತ್ತಿದೆ ಎಂಬ ಕಾಮೆಂಟ್‌ಗಳೂ ಕಂಡುಬಂದವು. 

912

ಅವನೋ ಅವಳೋ ತಿಳಿಯದ ಈ ವ್ಯಕ್ತಿಯ ಫ್ಯಾಶನ್ ನೋಡಿ- ಸೂಟ್ ಜೊತೆ ಫುಲ್ ಸ್ಲೀವ್ಸ್ ಬ್ಲೌಸ್ ಪ್ಯಾಂಟ್, ಹಿಂದೊಂದು ರೆಕ್ಕೆ ಮೇಲೆ ಗುಲಾಬಿ ಹೂಗಳು.. ಉರ್ಫಿಗೆ ಈ ಐಡಿಯಾವೊಂದು ಇನ್ನೂ ಬಂದಿಲ್ಲವೇನೋ?!

1012

ಪ್ರತಿ ವರ್ಷವೂ ಮೆಟ್ ಗಾಲಾ ಲುಕ್‌ಗಳು ಹೆಚ್ಚು ಹೆಚ್ಚು ಮೈ ಪ್ರದರ್ಶನದತ್ತ ಸಾಗಿದ್ದು, ಇದು ಕೂಡಾ ಈ ಕಾರ್ಯಕ್ರಮಕ್ಕಾಗಿ ಕಾಯುವವರ ಸಂಖ್ಯೆ ಹೆಚ್ಚಿಸಿದೆ. 

1112

2024ರ ಈವೆಂಟ್‌ಗಾಗಿ ಸೆಲೆಬ್ರಿಟಿಗಳು ಜನರ ಕಲ್ಪನೆಗಾಗಿ ಕೊಂಚವೇ ಬಿಟ್ಟಿದ್ದರು. ಅವರು ತಮ್ಮ ಹೊಟ್ಟೆಗಳು, ಎದೆ, ಹಿಂಭಾಗವನ್ನೂ ಪ್ರದರ್ಶಿಸಿದರು. 

1212

ಇನ್ನು ಪುರುಷರು ಎದೆಯ ಕೂದಲನ್ನು ಪ್ರದರ್ಶಿಸುವ ಜೊತೆಗೆ, ಹುಡುಗಿಯರ ಫ್ಯಾಶನ್ ವಿನ್ಯಾಸವನ್ನು ಅನುಕರಿಸುವ ಮೂಲಕ ಎಲ್ಲರ ಗಮನ ಸೆಳೆದರು. 

Read more Photos on
click me!

Recommended Stories